Advertisement

ಹೆಣೆದ ಟೋಪಿಗಳಿಂದಲೇ ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌

10:50 PM Oct 15, 2022 | Team Udayavani |

ನವದೆಹಲಿ: ದೇಶದ ಏರ್‌ಫೋರ್ಸ್‌ ವೈವ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ (ಎಎಫ್ಡಬ್ಲ್ಯೂಎಎ)  ಉಣ್ಣೆಯಿಂದ ಹೆಣೆದ ಟೋಪಿಗಳಿಂದಲೇ ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌ ಮಾಡಿದೆ.

Advertisement

ವಿಶ್ವದಲ್ಲೇ ಅತಿ ಹೆಚ್ಚು ಉಣ್ಣೆ ಟೋಪಿಗಳನ್ನು ಪ್ರದರ್ಶಿಸಿದ ತಂಡ ಎನ್ನುವ ಖ್ಯಾತಿಗೆ ಅಸೋಸಿಯೇಷನ್‌ನ ಮಹಿಳೆಯರು ಭಾಜನರಾಗಿದ್ದಾರೆ.

3000 ಮಹಿಳಾ ಸದಸ್ಯರು ಜು.15ರಿಂದ ಒಟ್ಟು 3 ತಿಂಗಳ ಅವಧಿಯಲ್ಲಿ ಸುಮಾರು 40,000ಕ್ಕೂ ಅಧಿಕ ಟೋಪಿಗಳನ್ನು ಹೆಣೆದಿದ್ದಾರೆ.

ನವದೆಹಲಿಯ ಆಡಿಟೋರಿಯಂ ಕ್ಯಾಂಪಸ್‌ನಲ್ಲಿ 41,541 ಟೋಪಿಗಳನ್ನು ಪ್ರದರ್ಶಿಸಲಾಗಿದೆ. ಈ ಹೊಸ ದಾಖಲೆಯು ಗಿನ್ನೆಸ್‌ ಪುಸ್ತಕದಲ್ಲಿ ಸ್ಥಾನ ಪಡೆದಿದೆ.

ಈ ಟೋಪಿಗಳನ್ನು ಚಳಿಗಾಲದ ಸಮಯದಲ್ಲಿ ಅಗತ್ಯವಿರುವವರಿಗೆ ಹಂಚಲಾಗುವುದು ಎಂದು ಅಸೋಸಿಯೇಷನ್‌ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next