Advertisement

ತೇಜಸ್‌ ಬಳಿಕ “ಅಮ್ಕಾ’ಯುದ್ಧ ವಿಮಾನ ಸರದಿ

03:45 AM Feb 16, 2017 | |

ಬೆಂಗಳೂರು : ಸ್ವದೇಶಿ ಹಗುರ ಯುದ್ಧ ವಿಮಾನ ತೇಜಸ್‌ ಮಾದರಿಯಲ್ಲಿಯೇ ಭಾರತದ ಸೇನಾ ಬತ್ತಳಿಕೆಗೆ ಸೇರ್ಪಡೆಗೊಳ್ಳಲು “ಅಮ್ಕಾ ಯುದ್ಧ ವಿಮಾನ (ಅಡ್ವಾನ್ಸ್‌ ಮಿಡಿಯಮ್‌ ಕಂಬ್ಯಾಟ್‌ ಏರ್‌ಕ್ರಾಫ್ಟ್)ಸಜ್ಜಾಗುತ್ತಿದೆ.

Advertisement

ಸಮರ ಕುರಿತು ಕಿಂಚಿತ್‌ ಮಾಹಿತಿ ಲಭ್ಯವಾಗದಂತೆ ದಾಳಿ ನಡೆಸುವಂತಹ ಅತ್ಯಾಧುನಿಕ ಯುದ್ಧ ವಿಮಾನ ಇದಾಗಿದ್ದು ಮುಂದಿನ ಹತ್ತು ವರ್ಷಗಳಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ.

ಎಚ್‌ಎಎಲ್‌ (ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌)  ಮತ್ತು ಎಡಿಎ (ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಅಥಾರಿಟಿ) ಜಂಟಿಯಾಗಿ “ಅಮ್ಕಾ ಯುದ್ಧ ವಿಮಾನ’ ತಯಾರಿಕೆಯಲ್ಲಿ ತೊಡಗಿದ್ದು, ತೇಜಸ್‌ ಮಾದರಿಯಲ್ಲಿಯೇ  ಇನ್ನೂ ಸುಧಾರಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಸಹಿತ ಯುದ್ಧವಿಮಾನವನ್ನು ಸಿದ್ದಗೊಳಿಸಲಾಗುತ್ತಿದ್ದು 2023-24ರ ವೇಳೆಗೆ  ಈ ಯುದ್ಧ ವಿಮಾನ ಹಾರಾಟ ನಡೆಸಲಿದೆ.

ತೇಜಸ್‌ ಒಂದು ಇಂಜಿನ್‌ವುಳ್ಳ ಯುದ್ಧ ವಿಮಾನವಾಗಿದ್ದರೆ, ಅಮ್ಕಾ ಯುದ್ಧ ವಿಮಾನವು ಎರಡು ಎಂಜಿನ್‌ಗಳನ್ನು ಒಳಗೊಂಡಿವೆ. ಐದನೇ ತಲೆಮಾರಿನ ಯುದ್ಧ ವಿಮಾನ ಇದಾಗಿದ್ದು,  ಇದಕ್ಕೆ ಎಚ್‌ಎಎಲ್‌ ಘಟಕದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಜೋಡಿಸಿದರೆ, ಎಡಿಎ ವಿಮಾನದ ವಿನ್ಯಾಸದಲ್ಲಿ ತೊಡಗಿದೆ.

2008ರಲ್ಲೇ ಈ ಯುದ್ಧ ವಿಮಾನ ಅನಧಿಕೃತವಾಗಿ ವಿನ್ಯಾಸಗೊಳಿಸುವ ಕೆಲಸ ಆರಂಭಗೊಂಡಿತ್ತು.  2011ರಿಂದ ಅಧಿಕೃತವಾಗಿ ವಿನ್ಯಾಸಗೊಳಿಸುವ ಕೆಲಸ ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ವಿಮಾನದ ರೂಪುರೇಷೆಗಳ ತಯಾರಿ ಅಂತಿಮ ಹಂತದಲ್ಲಿದ್ದು, ಆ ನಂತರ ವಾಯುಸೇನೆಗೆ ಹಸ್ತಾಂತರವಾಗಲಿದ್ದು ವಾಯುಸೇನೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಅವರಿಗೆ ಅಗತ್ಯ ಇರುವಂತೆ ಬದಲಾವಣೆಗಳನ್ನು ಕೇಳಿದರೆ ಅದನ್ನು ಸರಿಪಡಿಸಿ ಮತ್ತೆ ವಾಯು ಸೇನೆಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿದು ಬಂದಿದೆ.

ಕ್ಷಿಪಣಿ ಅಳವಡಿಕೆಯು ಅಮ್ಕಾ ವಿಮಾನದಲ್ಲಿ ಕಾಣದಂತೆ ರೂಪಿಸಲಾಗಿದೆ. ತೇಜಸ್‌ ಯುದ್ಧ ವಿಮಾನದಲ್ಲಿ ಕ್ಷಿಪಣಿಗಳು ಹೊರಗೆ ಕಾಣಲಿದೆ. ದಾಳಿ ವೇಳೆ ಕ್ಷಿಪಣಿಗಳನ್ನು ವೈರಿಗಳ ವಿರುದ್ದ ಬಿಡಲಾಗುತ್ತದೆ. ಅಮ್ಕಾ ವಿಮಾನದಲ್ಲಿ ಒಳಗೆ ಕ್ಷಿಪಣಿಗಳನ್ನು ಅಳವಡಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ವಿಂಗ್‌ನಲ್ಲಿ ಮೂರು ಕ್ಷಿಪಣಿಗಳಂತೆ ಎರಡು ವಿಂಗ್‌ಗಳಲ್ಲಿ ಆರು ಕ್ಷಿಪಣಿಗಳನ್ನು ಅಳವಡಿಸಬಹುದು. ಅಲ್ಲದೇ, ಮತ್ತೂಂದು ಯುದ್ಧದ ಮಧ್ಯಭಾಗದಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕ್ಷಿಪಣಿಗಳು ಇರುವುದು ವೈರಿಗಳಿಗೆ ಗೊತ್ತಾಗುವುದಿಲ್ಲ ಎನ್ನಲಾಗಿದೆ.

ಶತ್ರು ರಾಷ್ಟ್ರಕ್ಕೆ ಮಾಹಿತಿ ಇಲ್ಲದಂತೆ ದಾಳಿ ನಡೆಯುವಂತಹ ಯುದ್ಧ ವಿಮಾನವು ಪ್ರಸ್ತುತ ಅಮೆರಿಕಾದಲ್ಲಿ ಇದೆ. ಸೈನಿಕರಿಗೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ಎಚ್‌ಎಎಲ್‌ ಮತ್ತು ಎಡಿಎ ಸಂಸ್ಥೆಗಳು ಅದೇ ಮಾದರಿಯಲ್ಲಿ ಅಮ್ಕಾ ಯುದ್ಧ ವಿಮಾನವನ್ನು ರೂಪಿಸಲಾಗಿದೆ. ಈ ವಿಮಾನದ ಸಿದ್ಧತೆಯಲ್ಲಿ ತಂತ್ರಜ್ಞಾನರು ಸೇರಿದಂತೆ ವಿಜ್ಞಾನಗಳು ಶ್ರಮಿಸಿದ್ದಾರೆ. ಜಾಗತಿಕವಾಗಿ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗುತ್ತಿವೆ. ವಿಮಾನ ತಯಾರಿಕೆ ಸಂಬಂಧಿಸಿದಂತೆ ನೂತನ ತಂತ್ರಜ್ಞಾನಗಳು ಕಂಡು ಬಂದರೆ ಅವುಗಳನ್ನು ಸಹ ಅಳವಡಿಸಿಕೊಂಡು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ವಾಯು ಸೇನೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮ್ಕಾ ವಿಶೇಷತೆ
ಅತ್ಯಾಧುನಿಕ ಯುದ್ಧ ವಿಮಾನವಾಗಿರುವ ಅಮ್ಕಾ ಯುದ್ಧ ವಿಮಾನ ತೇಜಸ್‌ಗಿಂತ ಎರಡು ಪಟ್ಟು ವೇಗವಾಗಿ ಚಲಿಸುತ್ತದೆ. ಪ್ರತಿ ಗಂಟೆಗೆ ಎರಡೂವರೆ ಗಂಟೆಗಿಂತ ಹೆಚ್ಚು ವೇಗವಾಗಿ ಹಾರಲಿದೆ. ತೇಜಸ್‌ ಯುದ್ಧ ವಿಮಾನದಲ್ಲಿ ರಾಡಾರ್‌ ಮೂಲಕ ಬೆಳಕು ಚೆಲ್ಲುವುದರಿಂದ ಎದುರಾಳಿಗೆ ಸುಲಭವಾಗಿ ಆಗಮನ ತಿಳಿಯುತ್ತದೆ. ಆದರೆ, ಅಮ್ಕಾ ವಿಮಾನದಲ್ಲಿ ರಾಡಾರ್‌ನ್ನು ಅತ್ಯಾಧುನಿಕವಾಗಿ ಅಳವಡಿಸುವುದರಿಂದ ಎದುರಾಳಿಗೆ ಗೊತ್ತಾಗುವದೇ ಇಲ್ಲ. ಸುಲಭವಾಗಿ ವೈರಿಗಳನ್ನು ಮಣಿಸಲು ಇದರಿಂದ ಸಾಧ್ಯವಿದೆ.

– ಪ್ರಭುಸ್ವಾಮಿ ನಟೇಕರ್‌
 

Advertisement

Udayavani is now on Telegram. Click here to join our channel and stay updated with the latest news.

Next