Advertisement

Israel-Hamas War:ಹಮಾಸ್‌ ದಾಳಿಗೆ 1 ವರ್ಷ-ಇಸ್ರೇಲ್‌ ಮೇಲೆ ಹೆಜ್ಬುಲ್ಲಾ ದಾಳಿ, ಪ್ರತಿದಾಳಿ

12:14 PM Oct 07, 2024 | Team Udayavani |

ಗಾಜಾ(ಇಸ್ರೇಲ್): ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ್ದ ದಾಳಿಗೆ ಸೋಮವಾರ (ಅ.07) ಒಂದು ವರ್ಷವಾಗಿದ್ದು, ಉಭಯ ದೇಶಗಳ ನಡುವಿನ ಸಂಘರ್ಷ ಈಗ ತೀವ್ರ ಸ್ವರೂಪ ತಾಳಿದ್ದು, ಯುದ್ಧಕ್ಕೆ ನಾಂದಿ ಹಾಡಿದೆ.

Advertisement

ಇಸ್ರೇಲ್‌ ಸೇನೆ ಲೆಬನಾನ್‌ ನ ಹೆಜ್ಬುಲ್ಲಾ ಭಯೋತ್ಪಾದಕರನ್ನು ಗುರಿಯಾಗಿರಿಸಿಕೊಂಡು ದಾಳಿಯನ್ನು ಮುಂದುವರಿಸಿದೆ. ಬೈರುತ್‌ ನಲ್ಲಿರುವ ಹೆಜ್ಬುಲ್ಲಾ ಪ್ರದಾನ ಗುಪ್ತಚರ ಕೇಂದ್ರದ ಮೇಲೆ ಇಸ್ರೇಲ್‌ ಯುದ್ಧ ವಿಮಾನ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.

ಇಸ್ರೇಲ್‌ ದಾಳಿಗೆ ಹೆಜ್ಬುಲ್ಲಾ ಪ್ರತಿದಾಳಿ:

ಇಸ್ರೇಲ್‌ ಕ್ಷಿಪಣಿ, ರಾಕೆಟ್‌ ದಾಳಿಗೆ ಪ್ರತಿಯಾಗಿ ಹೆಜ್ಬುಲ್ಲಾ ಭಯೋತ್ಪಾದಕರು ಇಸ್ರೇಲ್‌ ನ 3ನೇ ದೊಡ್ಡ ನಗರವಾದ ಹೈಫಾ ಮೇಳೆ ದಾಳಿ ನಡೆಸಿದ್ದು, ಹತ್ತು ಜನರು ಗಾಯಗೊಂಡಿರುವುದಾಗಿ ಇಸ್ರೇಲ್‌ ಮಾಧ್ಯಮ ವರದಿ ಮಾಡಿದೆ.

Advertisement

ಇಸ್ರೇಲ್‌ ಕೂಡಾ ಗಾಜಾಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 26 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್‌ ಉಗ್ರರ ಮೇಲಿನ ದಾಳಿಯನ್ನು ಇನ್ನಷ್ಟು ಬಿರುಸುಗೊಳಿಸುವುದಾಗಿ ಇಸ್ರೇಲ್‌ ಘೋಷಿಸಿದೆ.

2023ರ ಅಕ್ಟೋಬರ್‌ 7ರಂದು ಹಮಾಸ್‌ ಭಯೋತ್ಪಾದಕರ ಸಂಘಟನೆ ಇಸ್ರೇಲ್‌ ಮೇಲೆ ಸಾವಿರಾರು ರಾಕೆಟ್‌ ದಾಳಿ ನಡೆಸಿತ್ತು. ಇಸ್ರೇಲ್‌ ನಲ್ಲಿ ನಡೆಯುತ್ತಿದ್ದ ಮ್ಯೂಸಿಕ್‌ ಫೆಸ್ಟಿವಲ್‌ ಮೇಲೆ ಹಮಾಸ್‌ ಉಗ್ರರು ನಡೆಸಿದ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದರು. ಅಲ್ಲದೇ 250ಕ್ಕೂ ಅಧಿಕ ಜನರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದರು.

ಈ ದಾಳಿಯ ನಂತರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು(Benjamin Netanyahu) ಗಾಜಾ ಮೇಲೆ ಯುದ್ಧ ಘೋಷಿಸಿದ್ದರು. ಇಸ್ರೇಲ್‌ ದಾಳಿಯಲ್ಲಿ ಅಂದಾಜು 42,000 ಜನರು ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ. ಬಳಿಕ ಲೆಬನಾನ್‌ ನಲ್ಲಿರುವ ಇರಾನ್‌ ಬೆಂಬಲಿತ ಹೆಜ್ಬುಲ್ಲಾ, ಇರಾಕ್‌, ಸಿರಿಯಾದಲ್ಲಿರುವ ಉಗ್ರರನ್ನು ಗುರಿಯಾಗಿರಿಸಿ ಇಸ್ರೇಲ್‌ ದಾಳಿಯನ್ನು ಮುಂದುವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next