Advertisement

ಚುನಾವಣಾ ಭಾಷಣದ ವೇಳೆ ಯಡವಟ್ಟು: “ಕೈ”ಗುರುತಿಗೆ ಮತ ಚಲಾಯಿಸಿ ಎಂದ “ಬಿಜೆಪಿ”ನಾಯಕ ಸಿಂಧಿಯಾ

05:32 PM Nov 01, 2020 | sudhir |

ಭೋಪಾಲ್ : ಮಧ್ಯ ಪ್ರದೇಶದ ಉಪಚುನಾವಣೆಯ ಪ್ರಚಾರದ ವೇಳೆ ಕೈ ಗುರುತಿಗೆ ಮತ ಚಲಾಯಿಸುವಂತೆ ಬಿಜೆಪಿಯ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ, ಆದರೆ ಸಿಂಧಿಯಾ ಹೇಳಿಕೆಯಿಂದ ಜನರು ಗಲಿಬಿಲಿಗೊಂಡಿದ್ದಾರೆ ಅಷ್ಟೋತ್ತಿಗಾಗಲೇ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ತಾನು ಮಾಡಿದ ಯಡವಟ್ಟಿನ ಅರಿವಾಗಿದ್ದು ತಕ್ಷಣ ಕಮಲದ ಗುರುತಿಗೆ ತಮ್ಮ ಅಮೂಲ್ಯ ಮತವನ್ನು ಹಾಕಬೇಕೆಂದು ತಪ್ಪನ್ನು ತಿದ್ದಿಕೊಂಡಿದ್ದಾರೆ.

Advertisement

ಗ್ವಾಲಿಯರ್ ನ ದಾಬ್ರಾ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಇಮಾರ್ತಿದೇವಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಿಂಧಿಯಾ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ನವೆಂಬರ್ 3ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ಕೈ ಗುರುತಿಗೆ ನೀಡಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ ಆದರೆ ಜನರು ಸಿಂಧಿಯಾ ಅವರ ಭಾಷಣ ಕೇಳಿ ಗಲಿಬಿಲಿಗೊಂಡರು ಅಷ್ಟೋತ್ತಿಗೆ ಸಿಂಧಿಯಾ ಅವರಿಗೆ ತಾನು ಮಾಡಿಕೊಂಡ ಯಡವಟ್ಟಿನ ಅರಿವಾಗಿದ್ದು ಜನರಲ್ಲಿ ಕಮಲದ ಗುರುತಿಗೆ ಮತವನ್ನು ಹಾಕುವಂತೆ ಕೇಳಿಕೊಂಡರು.

ಇದನ್ನೂ ಓದಿ:ಟ್ರಂಪ್ ನಡೆಸಿದ 18 ಚುನಾವಣಾ ರ‍್ಯಾಲಿಯಿಂದ 30ಸಾವಿರ ಮಂದಿಗೆ ಕೋವಿಡ್ ಸೋಂಕು; 700 ಜನ ಸಾವು

ಸಾಮಾಜಿಕ ಜಾಲತಾಣದಲ್ಲಿ ಸಿಂಧಿಯಾ ಅವರ ಭಾಷಣ ಹರಿದಾಡುತ್ತಿದ್ದು ಕಾಂಗ್ರೆಸ್ ನಾಯಕರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ನವೆಂಬರ್ 3 ರಂದು ಮಧ್ಯಪ್ರದೇಶದ ಜನರು ನಿಮ್ಮ ಹೇಳಿಕೆಯಂತೆ ಕೈ ಗುರುತಿಗೆ ಮತವನ್ನು ಚಲಾಯಿಸುತ್ತಾರೆ ಎಂದಿದ್ದಾರೆ.

ಕಳೆದ ಮಾರ್ಚ್ ನಲ್ಲಿ ಕಾಂಗ್ರೆಸ್‌ನಲ್ಲಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಮಧ್ಯಪ್ರದೇಶದ ಕಲಮನಾಥ್ ಸರ್ಕಾರದಲ್ಲಿ ಸಚಿವರಾಗಿದ್ದ ಶಾಸಕರ ಜೊತೆ ಪಕ್ಷವನ್ನು ತೊರೆದಿದ್ದರು. ಇದರಿಂದಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಸಂಖ್ಯಾಬಲ ಕಳೆದುಕೊಂಡು ಪತನಗೊಂಡಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next