Advertisement
ಕೋವಿಡ್ 19 ವೈರಸ್ ನೆಪವೊಡ್ಡಿ ಭಾರತದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ನಡೆಸುತ್ತಾ, ಭಾರತ- ಗಲ್ಫ್ ರಾಷ್ಟ್ರಗಳ ಸಂಬಂಧಕ್ಕೆ ಪಾಕ್ ಹುಳಿ ಹಿಂಡಲೆತ್ನಿಸುತ್ತಿದೆ.
Related Articles
Advertisement
ಪಾಕ್‌ನ ಗ್ಯಾಂಗ್ ಎಲ್ಲೆಲ್ಲಿದೆ?: ಗಲ್ಫ್ ರಾಷ್ಟ್ರಗಳಲ್ಲಿ ಹಲವು ಏಜೆಂಟ್‌ಗಳನ್ನು ಪಾಕ್ ಹೊಂದಿದೆ. ಬಹ್ರೈರೇನ್, ಕುವೈತ್, ಒಮನ್, ಕತಾರ್, ಸೌದಿ ಅರೇಬಿಯಾ, ಯುಎಇಗಳಲ್ಲಿ ಪಾಕ್ ಪರ ಟ್ವಿಟ್ಟರ್ ಬಳಕೆದಾರರ ಜಾಲವಿದೆ ಎಂದು ವರದಿ ಹೇಳಿದೆ.
ಗಲ್ಫ್ ದೇಶಗಳಲ್ಲಿ ಭಾರತದ ಮೇಲೆ ಪಾಕ್ ಅಪಪ್ರಚಾರ ನಡೆಸುವುದು ಇದೇ ಮೊದಲೇನಲ್ಲ. ಹಿಂದೆ ಕಾಶ್ಮೀರದ 370ನೇ ಕಲಂ ರದ್ದು ಮಾಡಿದಾಗಲೂ ಪಾಕ್ ಹೀಗೆಯೇ ಅಪಪ್ರಚಾರ ಮಾಡಿತ್ತು.
ಪಾಕ್‌ಗೆ ಅಮೆರಿಕ ಶಾಕ್ಉಗ್ರರನ್ನು ಪೋಷಿಸುತ್ತಿರುವ ಕಾರಣಕ್ಕೆ ಜಾಗತಿಕವಾಗಿ ಕಪ್ಪುಪಟ್ಟಿ ಸೇರುವ ಆತಂಕದಲ್ಲಿರುವ ಪಾಕ್‌ಗೆ, ಅಮೆರಿಕ ಆಘಾತ ನೀಡಿದೆ. ಪರಮಾಣು ಉಪ ಉತ್ಪನ್ನಗಳನ್ನು ರಫ್ತು ಮಾಡಲು, ಅಮೆರಿಕ ಹಿಂದೇಟು ಹೊಡೆದಿದೆ. ಪರಮಾಣು ವಿಚಾರದಲ್ಲಿ ಪಾಕ್ ನಡತೆ ಸರಿ ಇಲ್ಲದ ಕಾರಣ, ಅಮೆರಿಕ ಈ ನಿರ್ಧಾರ ಕೈಗೊಂಡಿದೆ. ಕೋವಿಡ್ 19 ವೈರಸ್ ನ ಸಂದಿಗ್ಧತೆಯ ಬಗ್ಗೆ ತಿಳಿಯಲು ಟ್ರಂಪ್, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜತೆ ಫೋನಿನಲ್ಲಿ ಮಾತನಾಡಿದ ಬೆನ್ನಲ್ಲೇ , ಅಮೆರಿಕ ಈ ನಿರ್ಧಾರ ಕೈಗೊಂಡಿದೆ. ಯುಎಸ್ ನ್ಯೂಕ್ಲಿಯರ್ ರೆಗ್ಯುಲೇಟರಿ ಕಮಿಷನ್ ನಿಂದ (ಎನ್‌ಆರ್‌ಸಿ) ಪಾಕ್ ಮೊದಲಿನಂತೆ ಸಲೀಸಾಗಿ ಪರಮಾಣು ಉಪ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ. 25 ಸಾವಿರ ಇಮೇಲ್ ಐಡಿ, ಪಾಸ್‌ವರ್ಡ್ ಲೀಕ್!
ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಕೋವಿಡ್ 19 ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು (ಎನ್‌ಐಎಚ್), ವಿಶ್ವ ಬ್ಯಾಂಕ್, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ), ಗೇಟ್ಸ್ ಪ್ರತಿಷ್ಠಾನ ಮತ್ತು ಇತರ ಪ್ರತಿಷ್ಠಿತ, ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸಂಬಂಧಿಸಿದ ಸುಮಾರು 25,000 ಇಮೇಲ್ ವಿಳಾಸಗಳು ಮತ್ತು ಪಾಸ್‌ವರ್ಡ್‌ಗಳನ್ನು ಕಿಡಿಗೇಡಿಗಳು ಅಂತರ್ಜಾಲದಲ್ಲಿ ಜಗಜ್ಜಾಹೀರು ಮಾಡಿದ್ದಾರೆ. ಈ ವಿಷಯವನ್ನು ಸೈಟ್ ಇಂಟಲಿಜೆನ್ಸ್ ಗ್ರೂಪ್ ಖಾತ್ರಿಪಡಿಸಿದೆ. ಈ ಪೈಕಿ ಎನ್‌ಐಎಗೆ ಸಂಬಂಧಿಸಿದ ಅತಿ ಹೆಚ್ಚು ಅಂದರೆ, 9,938 ಇಮೇಲ್ ಐಡಿ ಮತ್ತು ಪಾಸ್‌ವರ್ಡ್‌ಗಳಿದ್ದು, ರೋಗ ನಿಯಂತ್ರಣ ಕೇಂದ್ರಗಳಿಗೆ ಸೇರಿದ 6,857, ವಿಶ್ವ ಬ್ಯಾಂಕ್‌ನ 5,120 ಮತ್ತು ಡಬ್ಲ್ಯೂಎಚ್‌ಒನ 2,732 ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ಗಳನ್ನು ಆನ್ಲೈನ್‌ನಲ್ಲಿ ಹರಿಬಿಡಲಾಗಿದೆ.