Advertisement

ಕಲಾಪೋತ್ತರ ಕೋಲಾಹಲ

12:45 AM Aug 13, 2021 | Team Udayavani |

ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು 2 ದಿನಗಳಿಗೆ ಮುನ್ನವೇ ಮೊಟಕುಗೊಳಿಸಿದ್ದು ಈಗ ಸರಕಾರ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಇಡೀ ಕಲಾಪ ಹಾಳಾಗಲು ವಿಪಕ್ಷಗಳೇ ಕಾರಣ ಎಂದು ಕೇಂದ್ರ ಸರಕಾರ ಆರೋಪಿಸಿದರೆ, ಸರಕಾರವೇ ಹೊಣೆ ಎಂದು ವಿಪಕ್ಷಗಳು ತಿರುಗೇಟು ನೀಡಿವೆ. ಕೇಂದ್ರ ಸರಕಾರ ಶೇ. 60 ಮಂದಿಯ ಧ್ವನಿಯನ್ನು ಹತ್ತಿಕ್ಕಿ, ಸಂಸತ್‌ ಕಲಾಪವೇ ಇಲ್ಲದಂತೆ ಮಾಡಿದೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

Advertisement

ಕೇಂದ್ರ ಸಚಿವ ಸಂಪುಟದ ಎಂಟು ಸಚಿವರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ, ವಿಪಕ್ಷಗಳು ವಿಶೇಷವಾಗಿ ಕಾಂಗ್ರೆಸ್‌ ಅಧಿವೇಶನ ಹಾಳು ಮಾಡಲು ಪ್ರಧಾನ ಕಾರಣ. ಈ ಬಗ್ಗೆ ವಿಪಕ್ಷಗಳು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ. ಮಸೂದೆಗಳನ್ನು ಅಂಗೀಕರಿಸಬಾರದು ಎಂದು ವಿಪಕ್ಷ ಗಳು ಬೆದರಿಕೆ ಒಡ್ಡಿದ್ದವು ಎಂಬ ಗಂಭೀರ ಆರೋಪವನ್ನೂ ಮಾಡಿ ದ್ದಾರೆ. ವಿಪಕ್ಷಗಳ ಮುಖಂಡರು ಆರೋಪಿಸಿದಂತೆ ಬುಧವಾರ ರಾಜ್ಯಸಭೆಗೆ ಹೊರಗಿನವರು ಯಾರೂ ಬಂದಿಲ್ಲ. ಎಲ್ಲವೂ ಅವರ ನಾಟಕ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

ಆರೋಪ ಸುಳ್ಳು :

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್‌ ಗೋಯಲ್‌, ಬುಧವಾರ ರಾಜ್ಯಸಭೆಯಲ್ಲಿ ಮಹಿಳಾ ಸಂಸದರನ್ನು ಎಳೆದಾಡಲಾಗಿದೆ ಎಂಬ ವಿಪಕ್ಷಗಳ ಆರೋಪ ಸುಳ್ಳು. ಅವರೇ ಮಹಿಳಾ ಮಾರ್ಷಲ್‌ ಒಬ್ಬರ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ. 18 ಪುರುಷರು ಮತ್ತು 12 ಮಂದಿ ಮಹಿಳಾ ಮಾರ್ಷಲ್‌ಗ‌ಳು ಸೇರಿ 30 ಮಂದಿ ಇದ್ದರು. ಹೊರಗಿನಿಂದ ಯಾರೂ ಬಂದೇ ಇಲ್ಲ ಎಂದರು.

ಇಂಥ ನಾಚಿಕೆಗೇಡಿನ ಘಟನೆ ಬಗ್ಗೆ ತನಿಖೆಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಸದನದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂಬ ರಾಹುಲ್‌  ಆರೋಪಕ್ಕೆ ಉತ್ತರಿಸಿ, ವಿಪಕ್ಷಗಳಿಗೆ ಅನು ಕೂಲ ಇದ್ದಾಗ ಚರ್ಚೆಗೆ ಸಹಮತ ವ್ಯಕ್ತಪಡಿಸುತ್ತಾರೆ.  ಬೇಡವಾದಾಗ ಗಲಾಟೆ ಮಾಡುತ್ತಾರೆ ಎಂದರು.

Advertisement

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖಾ¤ರ್‌ ಅಬ್ಟಾಸ್‌ ನಖೀÌ, ಕಾರ್ಮಿಕ ಸಚಿವ ಭೂಪೀಂದರ್‌ ಯಾದವ್‌, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್‌, ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಕೂಡ ರಾಜ್ಯಸಭೆಯಲ್ಲಿ ಬುಧವಾರ ವಿಪಕ್ಷಗಳು ನಡೆಸಿದ ಅನುಚಿತ ವರ್ತನೆ ಖಂಡಿಸಿ ಮಾತನಾಡಿದರು.

ಮುಂದಿನ ಅಧಿವೇಶನದಲ್ಲಾದರೂ ಸರಕಾರ -ವಿಪಕ್ಷಗಳು ಸಹಮತದಿಂದ ಚರ್ಚಿಸಿ ಸುಗಮ ಕಲಾಪಕ್ಕೆ ಅನುವು ಮಾಡಿ ಕೊಳ್ಳಬೇಕು. ಉಭಯ ಪಕ್ಷಗಳ ತೀವ್ರ ಪ್ರತಿರೋಧ ಯಾ ಅತ್ಯುತ್ಸಾಹ ಒಳ್ಳೆಯದಲ್ಲ. ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next