Advertisement

Survey ಮೋದಿಗೆ ಶಾ ಉತ್ತರಾಧಿಕಾರಿ! ಸಮೀಕ್ಷೆಯೊಂದರಲ್ಲಿ ಬಹಿರಂಗ ದ್ವಿತೀಯ ಸ್ಥಾನಿ ಯೋಗಿ

01:29 AM Aug 26, 2023 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಗೃಹ ಸಚಿವ ಅಮಿತ್‌ ಶಾ ಉತ್ತರಾಧಿಕಾರಿಯೇ? ಆಂಗ್ಲ ಖಾಸಗಿ ವಾಹಿನಿಯೊಂದು ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಮೋದಿಯವರ ಅನಂತರ ಬಿಜೆಪಿಯ ಪ್ರಧಾನಿ ಅಭ್ಯರ್ಥಿ

Advertisement

ಯಾರಾಗಬೇಕು ಎಂಬ ಪ್ರಶ್ನೆಗೆ ಶೇ. 29ರಷ್ಟು ಮಂದಿ ಅಮಿತ್‌ ಶಾ ಅವರ ಹೆಸರನ್ನು ಸೂಚಿಸಿದ್ದಾರೆ. ವಿಶೇಷವೆಂದರೆ ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಇದ್ದಾರೆ. ಇವರಿಗೆ ಶೇ. 26ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ.

ಶೇ. 38ರಷ್ಟು ಹಿಂದುಳಿದ ವರ್ಗದವರು ಅಮಿತ್‌ ಶಾ ಅವರನ್ನೇ ಮೋದಿ ಉತ್ತರಾಧಿಕಾರಿಯನ್ನಾಗಿ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ.

ಮೋದಿಗಾಗಿಯೇ ಮತ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಅವರ ಮುಖ ನೋಡಿ ಮತ ಹಾಕುತ್ತೇವೆ ಎಂದು ಶೇ. 44ರಷ್ಟು ಮಂದಿ ಹೇಳಿದ್ದಾರೆ. ಶೇ. 22 ಮಂದಿ ಅಭಿವೃದ್ಧಿ, ಶೇ. 14 ಹಿಂದುತ್ವ, ಶೇ. 8 ಕಲ್ಯಾಣ ಕಾರ್ಯಕ್ರಮ, ಶೇ. 18ರಷ್ಟು ಮಂದಿ ಈ ಎಲ್ಲ ಅಂಶ ನೋಡಿ ಮತ ಹಾಕುತ್ತೇವೆ ಎಂದಿದ್ದಾರೆ.

ಬೆಲೆ ಏರಿಕೆಯೇ ಸವಾಲು
ಎನ್‌ಡಿಎ ಸರಕಾರದ ಅತಿದೊಡ್ಡ ವೈಫ‌ಲ್ಯ ಬೆಲೆ ಏರಿಕೆ ಎಂದು ಶೇ. 25ರಷ್ಟು ಮಂದಿ ಹೇಳಿದ್ದಾರೆ. ಉಳಿದ ವೈಫ‌ಲ್ಯಗಳೆಂದರೆ ಶೇ. 17ರಷ್ಟು ಮಂದಿ ನಿರುದ್ಯೋಗ, ಶೇ. 12 ಆರ್ಥಿಕ ಪ್ರಗತಿ, ಶೇ. 9 ಕೊರೊನಾ ನಿರ್ವಹಣೆ, ಶೇ. 3 ನೋಟು ಅಮಾನ್ಯ ಶೇ.5 ಮಂದಿ ಕೋಮು ಹಿಂಸೆ ಎಂದು ಹೇಳಿದ್ದಾರೆ.

Advertisement

ಸದ್ಯ ಶೇ. 24 ಮಂದಿ ಬೆಲೆ ಏರಿಕೆಯೇ ಅತಿದೊಡ್ಡ ಸವಾಲು ಎಂದು ಹೇಳಿದ್ದರೆ, ಶೇ. 24 ಮಂದಿ ನಿರುದ್ಯೋಗ ಎಂದಿದ್ದಾರೆ. ಶೇ. 8 ಬಡತನ, ಶೇ. 5 ಭ್ರಷ್ಟಾಚಾರ ವಿಷಯಗಳು ಸವಾಲಾಗಿವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next