Advertisement

4000 ಸಿಬ್ಬಂದಿಯನ್ನು ಕಿತ್ತೆಸೆದ ಬೆಟರ್‌

09:08 PM Mar 09, 2022 | Team Udayavani |

ವಾಷಿಂಗ್ಟನ್‌: ಕಳೆದ ವರ್ಷದ ಡಿಸೆಂಬರ್‌ ಸಮಯದಲ್ಲಿ ಏಕಾಏಕಿ 900 ಸಿಬ್ಬಂದಿಯನ್ನು ಕೆಲಸದಿಂದ ಕಿತ್ತೆಸೆದು ಸುದ್ದಿಯಾಗಿದ್ದ “ಬೆಟರ್‌ ಡಾಟ್‌ ಕಾಮ್‌’ ಸಂಸ್ಥೆ ಇದೀಗ ಮತ್ತೆ ಅದೇ ರೀತಿಯ ಕೆಲಸದಿಂದಾಗಿ ಸುದ್ದಿಯಾಗಿದೆ. ಸಂಸ್ಥೆಯ 8000 ಸಿಬ್ಬಂದಿ ಪೈಕಿ ಸುಮಾರು 4000 ಸಿಬ್ಬಂದಿಯನ್ನು ಮಾ. 8ರಂದು ಕೆಲಸದಿಂದ ತೆಗೆದುಹಾಕಲಾಗಿದೆ.

Advertisement

ಈ ಬಾರಿಯೂ ಸಂಸ್ಥೆಯು ಯಾವುದೇ ರೀತಿಯಲ್ಲಿ ಸಿಬ್ಬಂದಿಗೆ ಮಾಹಿತಿ ಕೊಡದೆಯೇ ಇದ್ದಕ್ಕಿದ್ದಂತೆ ಅವರನ್ನು ಸಂಸ್ಥೆಯಿಂದ ಕಿತ್ತೆಸೆದಿರುವುದಾಗಿ ಸಿಬ್ಬಂದಿ ದೂರಿದ್ದಾರೆ. “ಸಂಸ್ಥೆಯ ಕ್ಲೈಂಟ್‌ ಜೊತೆ ಚರ್ಚೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಸಿಸ್ಟಂ ಆಫ್ ಮಾಡಿಬಿಟ್ಟರು. ಸಂಸ್ಥೆಯಿಂದ ತೆಗೆಯುವುದಾದರೆ ತೆಗೆಯಲಿ, ಆದರೆ ಸಿಬ್ಬಂದಿಯನ್ನು ಇಷ್ಟು ಕನಿಷ್ಠವಾಗಿ ನೋಡಬಾರದು’ ಎನ್ನುತ್ತಾರೆ ಸಂಸ್ಥೆಯಿಂದ ಹೊರ ತಳ್ಳಲ್ಪಟ್ಟ ಅಮಂದ ಬುಲ್ಲರ್ಡ್‌.

 

Advertisement

Udayavani is now on Telegram. Click here to join our channel and stay updated with the latest news.

Next