Advertisement

ಮಣಿಪುರದ ಗಮ್ಚಾಕ್ಕೆ ಪ್ರಸಿದ್ಧಿ ತಂದ ಮೋದಿ

02:49 AM Apr 16, 2020 | Team Udayavani |

ಹೊಸದಿಲ್ಲಿ: ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿಯವರು ಕೆಂಪು ಅಂಚು ಇರುವ ಮಣಿಪುರದ ಕೈಟವೆಲ್‌ ಅನ್ನು ‘ಮುಖಗವಸಾ’ಗಿ ಬಳಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗಿದೆ.

Advertisement

‘ಗಮ್ಚಾ’ ಎಂದು ಕರೆಯಲ್ಪಡುವ ಈ ವಸ್ತ್ರದಿಂದ ಅವರು ತಮ್ಮ ಮೂಗು, ಬಾಯಿಯನ್ನು ಮಾಸ್ಕ್ ಗಳ ರೀತಿ ಮುಚ್ಚಿಕೊಂಡಿದ್ದರು. ಭಾಷಣ ಮುಗಿದ ಬಳಿಕ ತಮ್ಮ ಟ್ವಿಟರ್‌ ಖಾತೆಯ ಪ್ರೊಫೈಲ್‌ ಚಿತ್ರವನ್ನು ಬದಲಿಸಿ, ತಾವು ಗಮ್ಚಾ ಧರಿಸಿದ್ದ ಫೋಟೋ ಹಾಕಿಕೊಂಡಿದ್ದರು.

ಈಗ ಅನೇಕರು ಮೋದಿಯವರನ್ನು ಅನುಸರಿಸಲು ಆರಂಭಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿನ ಪ್ರೊಫೈಲ್‌ ಫೋಟೋಗಳನ್ನು ಬದಲಾಯಿಸಿ, ಮಾಸ್ಕ್ ಗಳು ಅಥವಾ ಬೇರೆ ಬೇರೆ ರೀತಿಯ ಗಮ್ಚಾಗಳನ್ನು ಧರಿಸಿರುವ ಫೋಟೋಗಳನ್ನು ಹಾಕಿಕೊಳ್ಳಲಾರಂಭಿಸಿದ್ದಾರೆ.

ಇವರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಗಿರಿರಾಜ್‌ ಸಿಂಗ್‌, ಹರ್ಷವರ್ಧನ್‌, ದೆಹಲಿಯ ಬಿಜೆಪಿ ನಾಯಕ ಮನೋಜ್‌ ತಿವಾರಿ ಇನ್ನೂ ಮುಂತಾದವರು ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next