Advertisement

Abaya Dress; ಹಿಜಾಬ್ ಬಳಿಕ ಇದೀಗ ಬುರ್ಖಾ ನಿಷೇಧ: ಶಾಲೆಗಳಲ್ಲಿ ಹೊಸ ನಿಯಮ ತಂದ ಫ್ರಾನ್ಸ್

12:05 PM Aug 28, 2023 | Team Udayavani |

ಪ್ಯಾರಿಸ್: ಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿನಿಯರು ಅಬಯಾ ಡ್ರೆಸ್ (ಬುರ್ಖಾ) ಗಳನ್ನು ಅವಕಾಶವಿಲ್ಲ ಎಂದು ಫ್ರೆಂಚ್ ಶಿಕ್ಷಣ ಸಚಿವ ಹೇಳಿದ್ದಾರೆ. ಇದಕ್ಕಾಗಿ ದೇಶದಲ್ಲಿ ನಿಯಮವನ್ನು ರೂಪಿಸುವುದಾಗಿ ಹೇಳಿದ್ದಾರೆ. ಈ ಉಡುಪು ಫ್ರಾನ್ಸ್‌ನ ಶಿಕ್ಷಣದಲ್ಲಿ ಕಟ್ಟುನಿಟ್ಟಾದ ಜಾತ್ಯತೀತ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ವಾದಿಸಿದರು.

Advertisement

“ಶಾಲೆಗಳಲ್ಲಿ ಅಬಯಾ ಉಡುಪುಗಳನ್ನು ಧರಿಸುವುದು ಇನ್ನು ಸಾಧ್ಯವಿಲ್ಲ. ಸೆಪ್ಟೆಂಬರ್ 4ರಿಂದ ಶಾಲೆಗಳು ಪುನಾರಾರಂಭಗೊಳ್ಳುವ ಕಾರಣ ರಾಷ್ಟ್ರೀಯ ಮಟ್ಟದಲ್ಲಿ ಶಾಲಾ ಮುಖ್ಯಸ್ಥರಿಗೆ ಇದರ ಬಗ್ಗೆ ಸೂಚನೆ ನೀಡಲಾಗುವುದು” ಎಂದು ಸಚಿವ ಗ್ಯಾಬ್ರಿಯಲ್ ಅಟ್ಟಲ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:Kanakapura ಹಾಡಹಗಲೇ ವಿದ್ಯಾರ್ಥಿನಿ ಕಿಡ್ನ್ಯಾಪ್ ಕೇಸ್: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

ಮಹಿಳೆಯರು ಇಸ್ಲಾಮಿಕ್ ಶಿರವಸ್ತ್ರವನ್ನು ಧರಿಸುವುದನ್ನು ನಿಷೇಧಿಸಿರುವ ಫ್ರೆಂಚ್ ಶಾಲೆಗಳಲ್ಲಿ ಅಬಾಯಾಗಳನ್ನು ಧರಿಸುವುದರ ಕುರಿತ ದೀರ್ಘಕಾಲದ ಚರ್ಚೆಯ ನಂತರ ಈ ಕ್ರಮವು ಬಂದಿದೆ.

ಬಲಪಂಥೀಯರು ನಿಷೇಧಕ್ಕೆ ಒತ್ತಾಯಿಸಿದ್ದರು, ಆದರೆ ಎಡಪಂಥೀಯರು ಇದು ನಾಗರಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುತ್ತದೆ ಎಂದು ವಾದಿಸಿದ್ದಾರೆ.

Advertisement

“ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸಿದಾಗ, ಅವರನ್ನು ನೋಡಿ ಅವರ ಧರ್ಮವನ್ನು ಗುರುತಿಸಲು ನಿಮಗೆ ಸಾಧ್ಯವಾಗಬಾರದು” ಎಂದು ಅಟ್ಟಲ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next