Advertisement

ಪ್ರವಾಹದ ಬಳಿಕ ಇಲಿ ಜ್ವರ!

06:00 AM Sep 01, 2018 | Team Udayavani |

ತಿರುವನಂತಪುರಂ: ಪ್ರವಾಹದ ಭೀಕರತೆಯಿಂದ ಸಾವರಿಸಿಕೊಳ್ಳುತ್ತಿದ್ದಂತೆಯೇ ಕೇರಳದಲ್ಲಿ ಈಗ ಇಲಿ ಜ್ವರ ಜನರ ಜೀವನದ ಜೊತೆ ಚೆಲ್ಲಾಟ ಆರಂಭಿಸಿದೆ. ಕಳೆದ 3 ದಿನಗಳಲ್ಲಿ 12 ಜನರು ಇಲಿ ಜ್ವರದಿಂದ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆ.28 ರಂದೇ ರಾಜ್ಯ ಆರೋಗ್ಯ ಇಲಾಖೆ ಈ ಸಂಬಂಧ ಸೂಚನೆ ಹೊರಡಿಸಿದ್ದು, ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೂ ಅದನ್ನು ಮೊದಲು ಇಲಿ ಜ್ವರವೇ ಎಂಬುದಾಗಿ ಪರಿಶೀಲಿಸಬೇಕು ಎಂದು ಸೂಚಿಸಿದೆ. ಆರೋಗ್ಯ ಇಲಾಖೆ ಈ ಸೂಚನೆ ಹೊರಡಿಸುತ್ತಿದ್ದಂತೆಯೇ ಆತಂಕ ಜನರಲ್ಲಿ ಮನೆ ಮಾಡಿದೆ.

Advertisement

ಲೆಪ್ಟೋಸ್ಪಿರೋಸಿಸ್‌ ಎಂದು ಕರೆಯಲಾಗುವ ಈ ರೋಗ ತ್ರಿಶೂರ್‌, ಪಾಲಕ್ಕಾಡ್‌, ಕಲ್ಲಿಕೋಟೆ, ಮಳಪ್ಪುರಂ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಹೆಚ್ಚಾಗಿದ್ದು, ಕಲುಷಿತಗೊಂಡ ನೀರು ಸೇವನೆಯಿಂದ ಹರಡಿದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಸಾಮಾನ್ಯವಾಗಿ ಪ್ರಾಣಿಯಿಂದ ಮನುಷ್ಯನಿಗೆ ನೀರಿನ ಮೂಲಕ ಹರಡುತ್ತದೆ. 20 ವರ್ಷಗಳ ಹಿಂದೆ ಕೂಡ ಇಲಿ ಜ್ವರ ವ್ಯಾಪಕವಾಗಿ ಹರಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next