Advertisement

ಬಿಜೆಪಿ ಮೈತ್ರಿ ಸರಕಾರದಲ್ಲಿ ಇನ್ನೂ ಕೆಲಕಾಲ ಇರುವೆವು: ಶಿವಸೇನೆ

12:41 PM Jan 27, 2017 | Team Udayavani |

ಮುಂಬಯಿ : ಮುಂಬರುವ ಬಿಎಂಸಿ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ನಿರ್ಧರಿಸಿದ ಒಂದು ದಿನದ ತರುವಾಯ ಶಿವಸೇನೆ ಇದೀಗ ತಾನು ಇನ್ನೂ ಸ್ವಲ್ಪಕಾಲ ಬಿಜೆಪಿಯೊಂದಿಗೆ ಮಹಾರಾಷ್ಟ್ರ ಮೈತ್ರಿ ಸರಕಾರದಲ್ಲಿ ಇರುವುದಾಗಿ ಹೇಳಿದೆ.

Advertisement

ರಾಜ್ಯದಲ್ಲಿನ ಸ್ಥಿರತೆಯನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ಇನ್ನೂ ಸ್ವಲ್ಪ ಕಾಲ ಬಿಜೆಪಿಯೊಂದಿಗಿನ ಮಹಾರಾಷ್ಟ್ರ ಮೈತ್ರಿ ಸರಕಾರದಲ್ಲಿ ಇನ್ನೂ ಕೆಲ ಕಾಲ ಉಳಿಯಲು ನಿರ್ಧರಿಸಿದ್ದೇವೆ ಎಂದು ಶಿವಸೇನೆಯ ನಾಯಕ ಹಿರಿಯ ನಾಯಕ ಸಂಜಯ್‌ ರಾವತ್‌ ಹೇಳಿದರು. 

ಶಿವಸೇನೆಯ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರು ನಿನ್ನೆಯಷ್ಟೇ  ಬಿಜೆಪಿಯೊಂದಿಗೆ ತಮ್ಮ ಪಕ್ಷ ಹೊ,ದಿರುವ 25 ವರ್ಷಗಳಷ್ಟು ಹಳೆಯದಾದ ಮೈತ್ರಿಯನ್ನು ಮುರಿದು ಬಿಎಂಸಿ ಚುನಾವಣೆಯಲ್ಲಿ  ಏಕಾಂಗಿಯಾಗಿ ಹೋರಾಡಲಿದೆ ಎಂದು ಘೋಷಿಸಿದ್ದರು. 

ಆದರೆ ಇಂದು ಶಿವಸೇನೆಯ ಹಿರಿಯ ನಾಯಕ ಸಂಜಯ್‌ ರಾವತ್‌, ಬಿಜೆಪಿಯೊಂದಿಗಿನ ಮಹಾರಾಷ್ಟ್ರ ಮೈತ್ರಿ ಸರಕಾರದಲ್ಲಿ ನಾವು ಇನ್ನೂ ಸ್ವಲ್ಪ ಕಾಲ ಇರುತ್ತೇವೆ; ಏಕೆಂದರೆ ಮಹಾರಾಷ್ಟ್ರದಲ್ಲಿ ಅಸ್ಥಿರತೆ ಉಂಟಾಗುವುದನ್ನು ನಾವು ಬಯಸುವುದಿಲ್ಲ’ ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next