Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಯೋಗೇಶ್ವರ್, ಬಿಜೆಪಿಯ ಕೆಲ ನಾಯಕರನ್ನ ನಾನು ಕೇಳಿದೆ. ನೀವು ಐದಾರು ಇಲಾಖೆ ಖಾಲಿ ಇಟ್ಟುಕೊಂಡು ಕೂತಿರಿ. ನಮಗೆ ಅದನ್ನ ನೀಡಿ ಶಕ್ತಿ ತುಂಬಿದ್ದರೆ ಅನುಕೂಲವಾಗುತ್ತಿತ್ತು. ಆದರೆ ಈಗ ಸಮಯ ಮೀರಿಹೋಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಅವರು ಕೊಟ್ಟಿರೋ ಭರವಸೆಗಳನ್ನ ಈಡೇರಿಸಲಿ ಎಂದರು.
Related Articles
Advertisement
ನಾವು ಪ್ರಮಾಣಿಕವಾಗಿ ದುಡಿದು ಮತಪಡೆದಿದ್ದೇವೆ.ಆದರೆ ಅವರು ಜಾತಿ ವಿಚಾರ ಮತ್ತೊಂದು ಸೇರಿ ಅನೇಕ ಕುತಂತ್ರ ನಡೆಸಿ ಗೆದ್ದಿದ್ದಾರೆ.ನನ್ನನ್ನು ಒಂದುಸಾರಿ ಸೋಲಿಸಿ ಮತ್ತೆ ಗೆಲ್ಲಿಸಿದ್ದಾರೆ.ಆದಾದ ಬಳಿಕ ಎರಡು ಸಾರಿ ಸೋಲಿಸಿರೋದು ಯಾಕೆ ಅಂತ ಗೊತ್ತಾಗುತ್ತಿಲ್ಲ. ನಾನು ಗೆದ್ದರೂ ಇಲ್ಲೇ ಇರುತ್ತೇನೆ, ಸೋತರೂ ಇಲ್ಲೇ ಇರುತ್ತೇನೆ, ಸಟ್ಟರೂ ಇಲ್ಲೇ. ಆದರೆ ಬೇರೆಯವರ ಕಥೆ ಹಾಗಲ್ಲ ಎಂದರು.
ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದೆ. ಚೆನ್ನಾಗಿ ಆಡಳಿತ ನಡೆಸಲಿ ಅಂತ ಶುಭಹಾರೈಸುತ್ತೇನೆ.ನಾವು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ಈ ತಾಲೂಕಿನ ಬಹುಸಂಖ್ಯಾತ ಒಕ್ಕಲಿಗರು ಹೆಚ್ ಡಿಕೆ ಕೈಹಿಡಿದರು. ಆದರೆ ಜೆಡಿಎಸ್ ಅಧಿಕೃತ ವಿರೋಧ ಪಕ್ಷವೂ ಅಲ್ಲ.ಜೆಡಿಎಸ್ ಕನಿಷ್ಠ ಸ್ಥಾನಕ್ಕೆ ಕುಸಿದಿದೆ.ನೀವ್ಯಾರು ಆತಂಕ ಪಡಬೇಕಿಲ್ಲ.ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಾಗುತ್ತಿದೆ.ಇವತ್ತು ಜೆಡಿಎಸ್ ಸೋಲಲು ಬಿಜೆಪಿ ಕಾರಣ ಎಂದರು. ಮಂಡ್ಯದಲ್ಲಿ ಬಿಜೆಪಿ ಬೆಳವಣಿಗೆ ಪ್ರಾರಂಭ ಆಯಿತು, ಆದರೆ ಅದರ ಲಾಭ ಕಾಂಗ್ರೆಸ್ ಗೆ ಆಯ್ತು.ನಮ್ಮ ಬೆಳವಣಿಗೆ ಕಾಂಗ್ರೆಸ್ ಗೆ ಲಾಭ ಆಯ್ತು.ನಾನು ಇನ್ನೂ ಮೂರು ವರ್ಷ ಎಂಎಲ್ ಸಿ ಆಗಿ ಇರುತ್ತೇನೆ. ಮುಂದೆ ಏನಾಗುತ್ತೋ ಕಾದುನೋಡೊಣ ಎಂದರು.