Advertisement
ಸೋಮವಾರ ತಡರಾತ್ರಿ ನಡೆಯುವ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಇದು ಇತ್ಯರ್ಥವಾಗಲಿದೆ. ಮಂಡ್ಯ ಮೂಲದ ಇಬ್ಬರು ಕಾಂಗ್ರೆಸ್ ಶಾಸಕರು ಈ ಸಂಬಂಧ ಯೋಗೇಶ್ವರ್ ಜತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಗ್ಗೆ ಪ್ರಹ್ಲಾದ್ ಜೋಶಿ ಅವರಿಂದ ಬರುವ ಸಂದೇಶ ಆಧರಿಸಿ ತಮ್ಮ ನಿಲುವು ತೆಗೆದುಕೊಳ್ಳಲಾಗುವುದು ಎಂದು ಯೋಗೇಶ್ವರ್ ಈಗಾಗಲೇ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಾರೆ. ಒಂದೊಮ್ಮೆ ಅವರು ಪಕ್ಷೇತರವಾಗಿ ನಿಂತರೆ ಪರೋಕ್ಷ ಬೆಂಬಲದೊಂದಿಗೆ ಜೆಡಿಎಸ್ ಮಣಿಸಬೇಕೆಂಬ ಲೆಕ್ಕಾಚಾರವೂ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಒಟ್ಟಾರೆಯಾಗಿ ಕುಮಾರಸ್ವಾಮಿಗೆ ಎದಿರೇಟು ಕೊಡಲು ಬಿಜೆಪಿ, ಕಾಂಗ್ರೆಸ್‌ನ ಒಕ್ಕಲಿಗ ನಾಯಕರು ಸಿ.ಪಿ. ಯೋಗೇಶ್ವರ್ ಅವರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವಂತೆ ಕಾಣುತ್ತಿದೆ.
ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ಯೋಗೇಶ್ವರ ರಾಜೀನಾಮೆ ಬೆನ್ನಲ್ಲೇ ಚನ್ನಪಟ್ಟಣ ಉಪ ಚುನಾವಣೆ ಅಖಾಡ ರಂಗೇರಿದ್ದು, ಕಾಂಗ್ರೆಸ್ ಈಗ ಕಾದುನೋಡುವ ತಂತ್ರ ಅನುಸರಿಸುತ್ತಿದೆ. ಈ ಕುರಿತು ಸೋಮವಾರ ಸುದ್ದಿಗಾರರಿಗೆ ಸ್ವತಃ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿ.ಪಿ. ಯೋಗೇಶ್ವರ್ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ. ಅವರ ಮುಂದಿನ ನಡೆ-ನುಡಿ ಬಗ್ಗೆ ಕಾದು ನೋಡೋಣ ಎಂದು ಹೇಳಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸದಲ್ಲಿ ಸಭೆ ನಡೆಸುತ್ತಿರುವ ಬಗ್ಗೆ ಕೇಳಿದಾಗ, ಅವರ ಪಕ್ಷದ ಸಭೆ ಅವರು ಮಾಡುತ್ತಾರೆ. ಅವರ ಕ್ಷೇತ್ರದ ಬಗ್ಗೆ ಚರ್ಚೆ ಮಾಡುತ್ತಿ¨ªಾರೆ. ಅವರ ಸಭೆ ತಪ್ಪು ಎಂದು ಹೇಳಲು ಸಾಧ್ಯವೇ? ನಾವೂ ರವಿವಾರ ಮುಖ್ಯಮಂತ್ರಿ ನಿವಾಸದಲ್ಲಿ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಸಭೆ ಮಾಡಿದ್ದೇವೆ. ಅವರೂ ಅದೇ ರೀತಿ ಸಭೆ ಮಾಡುತ್ತಿದ್ದಾರಷ್ಟೇ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
Related Articles
Advertisement
ಚಿತ್ರದುರ್ಗ: ಸಿ.ಪಿ. ಯೋಗೇಶ್ವರ್ ನನ್ನ ಸಂಪರ್ಕದಲ್ಲಿಲ್ಲ. ಜೆಡಿಎಸ್ ಹಾಗೂ ಬೇರೆಯವರ ಸಂಪರ್ಕದಲ್ಲಿರಬಹುದು. ಈ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಏನೇನೋ ಮಾಹಿತಿ ಬರುತ್ತಿರಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಚಳ್ಳಕೆರೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಲೋಕಸಭೆ ಚುನಾವಣೆಗಿಂತ ಉಪ ಸಮರದಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೆಚ್ಚಾಗಿದೆ. ಮಳೆಯಿಂದ ಬೆಂಗಳೂರಿನಲ್ಲಿ ಅವಾಂತರ ಆಗಿದೆ. ಜನ ಗ್ರೌಂಡ್ ಲೆವೆಲ್‌ನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಮಳೆ ಕಡಿಮೆಯಾಗುತ್ತಿದ್ದಂತೆ ಅದಕ್ಕೆ ಪರಿಹಾರ ಹುಡುಕುವ ಕಾರ್ಯ ಆಗಲಿದೆ ಎಂದರು.