Advertisement
ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನ ಕುಮಾರ ಸ್ವಾಮಿ ಗೆದ್ದಿದ್ದ ಕ್ಷೇತ್ರವನ್ನು ಜೆಡಿಎಸ್ಗೆಬಿಟ್ಟು ಕೊಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಬಂದಿದ್ದು, ಅಭ್ಯರ್ಥಿ ಆಯ್ಕೆ ಸ್ವಾತಂತ್ರ್ಯವನ್ನೂ ಜೆಡಿಎಸ್‌ಗೆ ನೀಡಿದೆ.
ಇದರ ಬೆನ್ನಲ್ಲೇ ಜೆಡಿಎಸ್ ಕೂಡ ಬಿಜೆಪಿಗೆ ಸಿ.ಪಿ. ಯೋಗೇಶ್ವರ್ ಸ್ಪರ್ಧಿಸುವುದಾದರೆ ಜೆಡಿಎಸ್ ಚಿಹ್ನೆ ಯಡಿ ಸ್ಪರ್ಧಿಸಬಹುದು ಎನ್ನುವ ಕೊಡುಗೆ ಕೊಟ್ಟಿ ತ್ತಲ್ಲದೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಾ| ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದನ್ನು ನೆನಪು ಮಾಡಿಕೊಟ್ಟಿದೆ. ಎಚ್‌ಡಿಕೆ ಆರೋಪ
ದಳಪತಿಗಳ ಈ ಕೊಡುಗೆಯನ್ನು ಯೋಗೇಶ್ವರ್ ಒಪ್ಪಿಲ್ಲ. ಸ್ಪರ್ಧಿಸುವುದಾದರೆ ಬಿಜೆಪಿ ಚಿಹ್ನೆಯಡಿ ಮಾತ್ರ. ಇಲ್ಲದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎನ್ನುವ ನಿಲುವು ತಳೆದಿದ್ದಾರೆ ಎನ್ನಲಾಗಿದೆ. ಇದರಿಂದ ಕೆರಳಿರುವ ಕುಮಾರಸ್ವಾಮಿ, ಯೋಗೇಶ್ವರ್ ದೊಡ್ಡ ವ್ಯಕ್ತಿ. ಅವರ ಬಗ್ಗೆ ಚರ್ಚಿಸುವುದಿಲ್ಲ. ಅವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನುವ ಮಾತುಗಳೂ ಇವೆ. ಆದರೆ ಇದುವರೆಗೆ ಅವರ ತೀರ್ಮಾನ ಏನೆಂಬುದನ್ನು ನಮಗ್ಯಾರಿಗೂ ತಿಳಿಸಿಲ್ಲ ಎನ್ನುವ ಮೂಲಕ ಸಂಶಯ ವ್ಯಕ್ತಪಡಿಸಿದ್ದಾರೆ.
Related Articles
ಬಿಜೆಪಿಯಲ್ಲೂ ಹುಳಿ ಹಿಂಡುವ ಕೆಲವರಿದ್ದಾರೆ ಎಂದಿರುವ ಕುಮಾರಸ್ವಾಮಿ, ಕೇಂದ್ರದಲ್ಲಿ ಪ್ರಧಾನಿ ಮೋದಿ ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮೋದಿ ಯವರ ಕೈ ಬಲಪಡಿಸುವುದಷ್ಟೇ ನನ್ನ ಮುಂದಿರುವ ಆಯ್ಕೆ ಎನ್ನುವ ಮೂಲಕ ಬಿಜೆಪಿ ಎದುರು ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಈ ಮಾತಿನ ಮುಖಾಂತರ ಯೋಗೇಶ್ವರ್ ಅವರನ್ನು ಕಟ್ಟಿಹಾಕಬೇಕೆಂಬ ಸಂದೇಶವನ್ನೂ ಬಿಜೆಪಿಗೆ ಕುಮಾರಸ್ವಾಮಿ ಕೊಟ್ಟಂತಿದೆ.
Advertisement
ಜಯಮುತ್ತು ಮೈತ್ರಿ ಅಭ್ಯರ್ಥಿ?ಸಿ.ಪಿ. ಯೋಗೇಶ್ವರ್ ಸ್ವತಂತ್ರವಾಗಿ ಸ್ಪರ್ಧಿಸಬಾರದು, ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಪ್ರತಿಯಾಗಿ ಶಿಗ್ಗಾವಿ ಮತ್ತು ಸಂಡೂರಿನಲ್ಲಿ ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಲಿದೆ ಎನ್ನುವ ದಾಳ ಉರುಳಿಸಿರುವ ಎಚ್‌ಡಿಕೆ, ಕುಟುಂಬ ರಾಜಕಾರಣದ ಆರೋಪಗಳಿಂದ ಮುಕ್ತರಾಗಲೂ ಬಯಸಿದ್ದಾರೆ. ಪತ್ನಿ ಅನಿತಾ ಅಥವಾ ಪುತ್ರ ನಿಖಿಲ್‌ಗೆ ಟಿಕೆಟ್ ಕೊಟ್ಟರೆ ಕುಟುಂಬ ರಾಜಕಾರಣದ ಆರೋಪ ಬರುವುದರ ಜತೆಗೆ ಒಂದು ವೇಳೆ ಸೋಲು ಅನುಭವಿಸಿದರೆ ಅರಗಿಸಿಕೊಳ್ಳುವುದು ಕಷ್ಟವಾಗಬಹುದೆಂಬ ಲೆಕ್ಕಾಚಾರವೂ ಇದೆ. ಕಾರ್ಯಕರ್ತರಿಗೆ ಮಣೆ ಹಾಕಬೇಕೆಂದಿದ್ದೇನೆ ಎನ್ನುವ ಮೂಲಕ ಈ ಹಿಂದೆ ಕೇಳಿಬಂದಿದ್ದಂತೆ ಜಯಮುತ್ತುಗೆ ಟಿಕೆಟ್ ಕೊಟ್ಟು ತಲೆಭಾರ ಇಳಿಸಿಕೊಳ್ಳುವ ಅಂದಾಜಿದೆ. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರವನ್ನು ಬಿಜೆಪಿಗೆ ಬಿಟ್ಟು ಕೊಟ್ಟು ನಮ್ಮ ಕುಟುಂಬದವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. ಈಗ ಚನ್ನಪಟ್ಟಣ ಕ್ಷೇತ್ರದಲ್ಲಿಯೂ ಅಂಥ ಹೊಂದಾಣಿಕೆ ಆಗಬೇಕು. ಆ ರೀತಿಯ ಔದಾರ್ಯ ಅವರ ಕಡೆಯಿಂದಲೂ ಬರಬೇಕು.
– ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ಬಿಜೆಪಿಯವರು ಜೆಡಿಎಸ್ ಚಿಹ್ನೆಯಲ್ಲಿ ನಿಲ್ಲುವ ಪ್ರಸ್ತಾವ ಇಲ್ಲ. ಆದರೆ ಬಿಜೆಪಿ-ಜೆಡಿಎಸ್ ಎರಡೂ ಸೇರಿ ಮೂರೂ ಕ್ಷೇತ್ರಗಳನ್ನು ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಯೋಗೇಶ್ವರ್ ಸ್ಪರ್ಧೆ ಬಗ್ಗೆ ನಾವ್ಯಾರೂ ಚರ್ಚೆ ಮಾಡಿಲ್ಲ.
– ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ನಾಳೆ ಚನ್ನಪಟ್ಟಣದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ರಾಮನಗರ: ಚನ್ನಪಟ್ಟಣ ಟಿಕೆಟ್‌ಗಾಗಿ ಜೆಡಿಎಸ್ ಹಾಗೂ ಸಿ.ಪಿ. ಯೋಗೇಶ್ವರ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಂಡು ನಿಖೀಲ್ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಆಗ್ರಹಿಸಿ ಮಂಗಳವಾರ ಶಕ್ತಿಪ್ರದರ್ಶನ ನಡೆಸಲು ಜೆಡಿಎಸ್ ಮುಖಂಡರು ನಿರ್ಣಯ ಕೈಗೊಂಡಿದ್ದಾರೆ.