Advertisement
ಜತೆಗೆ, ಸೋಂಕಿನ ಜನರನ್ನು ನಿಯಂತ್ರಿಸುವುದು ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಸೋಂಕಿನ ಉಗಮ ಸ್ಥಾನವಾಗಿರುವ ವುಹಾನ್ ನಗರದಲ್ಲಿನ ಎಲ್ಲ ತಾತ್ಕಾಲಿಕ ಆಸ್ಪತ್ರೆಗಳನ್ನು ಮುಚ್ಚಿದ ಚೀನ ಸರಕಾರ, ಲಾಕ್ ಡೌನ್ ಅನ್ನು ತಕ್ಕ ಮಟ್ಟಿಗೆ ಸಡಿಲಿಸಿತ್ತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ನಾಗರಿಕರು, ದಕ್ಷಿಣ ಚೀನದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹುವಾಂಗ್‌ಶಾನ್ ಪರ್ವತ ಶ್ರೇಣಿ ನೋಡಲು ಮುಗಿಬಿದ್ದಿದ್ದಾರೆ.
ಕೋವಿಡ್ 19 ವೈರಸ್ ನ ತವರೂರಾಗಿರುವ ಚೀನದಲ್ಲಿ ಮಂಗಳವಾರಕ್ಕೆ ಸಂಬಂಧಿಸಿದಂತೆ ಹೊಸತಾಗಿ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಜನವರಿಂದ ಈಚೆಗೆ ಸೋಂಕಿನ ಪರಿಣಾಮವಾಗಿ ಸಾವಿನ ಸಂಖ್ಯೆ ಮಾಹಿತಿ ನೀಡುತ್ತಿದ್ದ ರಾಷ್ಟ್ರದಿಂದ ಇದೇ ಮೊದಲ ಬಾರಿಗೆ ಹೊಸ ಸಾವಿನ ಮಾಹಿತಿ ಪ್ರಕಟಗೊಂಡಿಲ್ಲ. ಆದರೆ ವಿದೇಶಗಳಿಂದ ಬಂದ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 983ಕ್ಕೆ ಏರಿಕೆಯಾಗಿದೆ. ಈ ಅಂಶವನ್ನು ಚೀನದ ರಾಷ್ಟ್ರೀಯ ಆರೋಗ್ಯ ಆಯೋಗ ನೀಡಿದೆ. ಅಲ್ಲಿ ಒಟ್ಟು 3, 331 ಸಾವು ಸಂಭವಿಸಿದೆ. ಚೀನದಲ್ಲಿ ಸೋಮವಾರದವರೆಗೆ 81,740 ಪ್ರಕರಣಗಳು ಖಚಿತಪಟ್ಟಿವೆ. ಈ ಪೈಕಿ 1, 242 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 77,167 ಮಂದಿ ಡಿಸ್ಚಾರ್ಜ್ ಆಗಿದ್ದಾರೆಂದು ಆಯೋಗ ತಿಳಿಸಿದೆ.