Advertisement

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

01:54 PM Jan 10, 2025 | Team Udayavani |

ಬೆಂಗಳೂರು: ಸ್ಟಾರ್‌ ಕ್ರಿಕೆಟಿಗ ಯುಜುವೇಂದ್ರ ಚಾಹಲ್‌ ಮತ್ತು ಧನಶ್ರೀ ವರ್ಮಾ ದಂಪತಿ ಪರಸ್ಪರ ದೂರವಾಗುತ್ತಿದ್ದಾರೆ ಎಂಬ ವರದಿಗಳ ನಡುವೆ ಮತ್ತೊಂದು ತಾರಾ ದಂಪತಿಯ ವಿಚ್ಛೇದನದ ಬಗ್ಗೆ ಸುದ್ದಿಯಾಗುತ್ತಿದೆ. ಕನ್ನಡಿಗ ಮನೀಶ್‌ ಪಾಂಡೆ (Manish Pandey) ದಂಪತಿಯ ಬಗ್ಗೆ ವರದಿಗಳು ಬರುತ್ತಿದೆ.

Advertisement

ಭಾರತ ತಂಡವನ್ನು ಪ್ರತಿನಿಧಿಸಿರುವ ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದು, ಇದು ವಿಚ್ಛೇದನದ ವದಂತಿಗಳನ್ನು ಹುಟ್ಟುಹಾಕಿದೆ.

ಮನೀಶ್ ಪಾಂಡೆ 2019ರ ಡಿಸೆಂಬರ್ 2ರಂದು ಮುಂಬೈನಲ್ಲಿ ಮಂಗಳೂರಿನ ಮೂಲ್ಕಿ ಮೂಲದ ನಟಿ ಆಶ್ರಿತಾ ಶೆಟ್ಟಿ ಅವರನ್ನು ವಿವಾಹವಾಗಿದ್ದರು.

ಹಲವಾರು ವರದಿಗಳ ಪ್ರಕಾರ, ಈ ಜೋಡಿ ತಮ್ಮ ಮದುವೆಯ ಆರಂಭಿಕ ವರ್ಷಗಳಲ್ಲಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು ಆದರೆ ಸ್ವಲ್ಪ ಸಮಯದಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

Advertisement

ಕಳೆದ ವರ್ಷ ಜೂನ್‌ ನಲ್ಲಿ ಆಶ್ರಿತಾ ಶೆಟ್ಟಿ ಅವರರು ಮನೀಶ್ ಪಾಂಡೆ ಜೊತೆಗಿನ ತನ್ನ ಎಲ್ಲಾ ಚಿತ್ರಗಳನ್ನು ತೆಗೆದುಹಾಕಿದ್ದಾರೆ ಎಂದು ವರದಿ ಹೇಳುತ್ತದೆ. ಪಾಂಡೆ ಕೂಡಾ ತಮ್ಮ ಪತ್ನಿ ಜೊತೆಗಿನ ಎಲ್ಲಾ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಅಳಿಸಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ, ಮನೀಶ್ ಪಾಂಡೆ ಅವರನ್ನು ಕರ್ನಾಟಕದ ವಿಜಯ್ ಹಜಾರೆ ಟ್ರೋಫಿ ತಂಡದಿಂದ ಕೈಬಿಡಲಾಯಿತು. ಅವರು ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಕರ್ನಾಟಕದ ರಣಜಿ ಟ್ರೋಫಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next