Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮೇಲೆ ಐಟಿ, ಸಿಬಿಐ ದಾಳಿ ಮಾಡಲಿ ಅಥವಾ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಬಂದು ತನಿಖೆ ಮಾಡಿದರೂ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಸಚಿವರು ಸರಕಾರದ ಕಾರುಗಳನ್ನು ತ್ಯಾಗ ಮಾಡಿ ತಮ್ಮ ಸ್ವಂತ ಕಾರುಗಳಲ್ಲಿ ಓಡಾಡಬೇಕು. ರಾಜ್ಯ ಸರಕಾರ ಸಚಿವರಿಗಾಗಿ ನೂತನ ವಾಹನಗಳನ್ನು ಖರೀದಿಸಬಾರದು. ಸಚಿವರಾದವರೂ ಹೊಸ ವಾಹನಗಳನ್ನು ತೆಗೆದುಕೊಳ್ಳಬಾರದು. ಪ್ರಸ್ತುತ ರಾಜ್ಯ ಸರಕಾರ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುತ್ತಿದೆ. ರಾಜ್ಯದಲ್ಲಿ ಬರಗಾಲವೂ ಇದೆ. ಹೀಗಿರುವಾಗ ಸಚಿವರಿಗಾಗಿ ಹೊಸ ಕಾರು ಖರೀದಿಸುವುದು ಸರಿಯಲ್ಲ. ಪ್ರತಿಯೊಬ್ಬ ಸಚಿವರ ಬಳಿಯೂ ಸ್ವಂತ ಕಾರುಗಳಿದ್ದು, ಸ್ವಲ್ಪ ದಿನ ಅದನ್ನು ಬಳಸಲಿ. ಹೊಸ ಕಾರು ಖರೀದಿಸಲು ಬಳಸುವ ಹಣವನ್ನೇ ಜನಪರ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಥವಾ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಿ ಎಂದು ಸಲಹೆ ನೀಡಿದರು.