Advertisement

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

08:32 PM Jan 22, 2022 | Team Udayavani |

ಮುಂಬೈ: ದೇಶದಲ್ಲಿಯೇ ಮೊದಲ ಬಾರಿಗೆ ಮುಂಬೈ ಪೊಲೀಸ್‌ ವ್ಯಾಪ್ತಿಯಲ್ಲಿ ಉಗ್ರ ನಿಗ್ರಹ ದಳ (ಎಟಿಎಸ್‌)ವನ್ನು ಮೊದಲ ಬಾರಿಗೆ ಸ್ಥಾಪಿಸಿದ ನಿವೃತ್ತ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ಖಾನ್‌ (81) ನಿಧನರಾಗಿದ್ದಾರೆ.

Advertisement

ಕೆಲ ದಿನಗಳ ಹಿಂದೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಡಿಸ್ಚಾರ್ಜ್ ಆಗಿದ್ದರು. ಶನಿವಾರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರೂ, ವೈದ್ಯರು ಅಫ್ತಾಬ್‌ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಿದರು.

1963ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಅವರು 1995ರಲ್ಲಿ ಮುಂಬೈನಲ್ಲಿ ಎಟಿಎಸ್‌ ಅನ್ನು ಸ್ಥಾಪಿಸಿದ್ದರು. 1990ರಲ್ಲಿಯೇ ಉಗ್ರ ಪ್ರಕರಣಗಳ ತನಿಖೆಗೆ ಪ್ರತ್ಯೇಕ ವಿಭಾಗ ರಚಿಸಲಾಗಿತ್ತಾದರೂ, ಅದಕ್ಕೆ ಆಧುನಿಕ ರೂಪ ಕೊಟ್ಟ ಹೆಗ್ಗಳಿಗೆ ಅಫ್ತಾಬ್‌ ಅವರದ್ದು.

Advertisement

Udayavani is now on Telegram. Click here to join our channel and stay updated with the latest news.

Next