Advertisement

ಉದಯವಾಣಿ ಫಾಲೋಅಪ್‌: ಆಫ್ರಿಕನ್‌ ಬಸವನ ಹುಳು: ಅಧಿಕಾರಿಗಳಿಂದ‌ ಅಧ್ಯಯನ

11:23 PM Aug 13, 2020 | mahesh |

ಬೆಳ್ತಂಗಡಿ: ಉರುವಾಲು ಗ್ರಾಮದ 100 ಎಕರೆಗೂ ಅಧಿಕ ಪ್ರದೇಶಕ್ಕೆ ಬಾಧಿಸಿದ ಬೆಳೆ ಭಕ್ಷಕ ಆಫ್ರಿಕನ್‌ ಬಸವನ ಹುಳುಗಳ ಅಧ್ಯಯನಕ್ಕೆ ಬೆಳ್ತಂಗಡಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಭೇಟಿ ಹಲೇಜಿಗೆ ನೀಡಿದೆ.

Advertisement

ಆಫ್ರಿಕನ್‌ ಬಸವನ ಹುಳು ಕಾಟದ ಕುರಿತು ಉದಯವಾಣಿ ಆ. 13ರ ಆವೃತ್ತಿಯಲ್ಲಿ ವರದಿ ಪ್ರಕಟಿಸಿತ್ತು. ಮಂಗಳೂರು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್‌.ಆರ್‌. ನಾಯಕ್‌ ಅವರ ಸೂಚನೆಯಂತೆ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ತಂಡ ಅಧ್ಯಯನ ನಡೆಸಿತು. ಹಿರಿಯ ಸಹಾಯಕ ನಿರ್ದೇಶಕ ಕೆ.ಎಸ್‌. ಚಂದ್ರಶೇಖರ ಮಾತನಾಡಿ, ಹುಳುಗಳ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುತ್ತೂರು ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಪ್ರಕಾಶ್‌, ಬೆಳ್ತಂಗಡಿ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂಜೀವ, ತೋಟಗಾರಿಕೆ ಸಹಾಯಕ ಮಂಜುನಾಥ ಬಿರಾದಾರ್‌, ಸ್ಥಳೀಯ ಕೃಷಿಕರಾದ ಸುಭಾಷ್‌ ಬಂಗೇರ, ಚಿದಾನಂದ ನಾಯ್ಕ, ಲಿಂಗಪ್ಪ ನಾಯ್ಕ, ಶಂಕರಿ ಜಿ. ಭಟ್‌ ತಂಡದಲ್ಲಿದ್ದರು.

ಇಂದು ಮಾಹಿತಿ ಸಭೆ
ತೋಟಗಾರಿಕೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಆ. 14ರಂದು ಅಪರಾಹ್ನ 2.30ಕ್ಕೆ ಹಲೇಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದು ಇಲಾಖೆ ತಿಳಿಸಿದೆ.

ನಿಯಂತ್ರಣ ಹೇಗೆ?
ಮಂಗಳೂರು: ಆಫ್ರಿಕನ್‌ ಬಸವನ ಹುಳುಗಳ (ಶಂಕು ಹುಳು) ನಿಯಂತ್ರಣಕ್ಕೆ ಜಿಲ್ಲಾ ತೋಟಗಾರಿಕಾ ಇಲಾಖೆ ಪರಿಹಾರೋಪಾಯಗಳನ್ನು ಸೂಚಿಸಿದೆ.
 ತೋಟದಲ್ಲಿರುವ ಕಳೆಗಿಡಗಳನ್ನು ತೆಗೆದು ಸ್ವತ್ಛತೆ ಕಾಪಾಡಬೇಕು.
 ಪ್ರಾರಂಭದಲ್ಲೇ ಹುಳುಗಳನ್ನು ಆಯ್ದು ಗುಂಡಿಗೆ ಹಾಕಿ ಸುಣ್ಣ ಸಿಂಪಡಿಸಿ.
 ಹಸಿ ಗೋಣಿ ಚೀಲಗಳನ್ನು ಅಲ್ಲಲ್ಲಿ ಇಡುವುದರಿಂದ ಹುಳುಗಳು ಚೀಲದ ಕೆಳಗೆ ಅವಿತುಕೊಳ್ಳುತ್ತವೆ. ಅವುಗಳನ್ನು ಸಂಗ್ರಹಿಸಿ ಉಪ್ಪು ಅಥವಾ ಕಾಪರ್‌ ಸಲ್ಫೆàಟ್‌ ಹಾಕಿ.
 ಮೆಟಾಲ್ಡಿಹೈಡ್‌ ರಾಸಾಯನಿಕದ ಸಣ್ಣ ಸಣ್ಣ ತುಣುಕುಗಳನ್ನು ಹೊಲದಲ್ಲಿ ಅಲ್ಲಲ್ಲಿ ಚೆಲ್ಲಿದಾಗ ಹುಳುಗಳು ಅವುಗಳನ್ನು ಸೇವಿಸಿ ಸಾಯುತ್ತವೆ.

Advertisement

ಪರಿಸರ ಸ್ನೇಹಿಗಳು!
ಶಂಕುಹುಳುಗಳು ಶೇ. 75ರಿಂದ 80ರಷ್ಟು ತಮ್ಮ ಆಹಾರವನ್ನು ಕೊಳೆಯುತ್ತಿರುವ ಪ್ರಾಣಿ ಮತ್ತು ಸಸ್ಯಜನ್ಯ ಪದಾರ್ಥಗಳನ್ನು ತಿಂದು ನಿಸರ್ಗದ ಸಮತೋಲನ ಕಾಪಾಡುತ್ತವೆ. ಅವುಗಳಿಂದ ತೊಂದರೆ ಎನಿಸಿದಾಗ ಮಾತ್ರ ಹತೋಟಿ ಕ್ರಮ ಕೈಗೊಂಡು ನಿಸರ್ಗದ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

ಎಚ್ಚರವೂ ಅಗತ್ಯ
ಸತ್ತಿರುವ ಹುಳುಗಳನ್ನು ಆಳದಲ್ಲಿ ಹೂಳಬೇಕು. ಇಲ್ಲದಿದ್ದರೆ ಸಾಕುಪ್ರಾಣಿಗಳು ಅವುಗಳನ್ನು ಸೇವಿಸಿ ತೊಂದರೆಗೊಳಗಾಗಬಹುದು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ತಜ್ಞ ರಿಶಲ್‌ ಡಿ’ಸೋಜಾ (8277806372) ಅವರನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next