Advertisement
ವಿಷಕ್ಕೂ ಜಗ್ಗುತ್ತಿಲ್ಲನಿಶಾಚರಿಯಾಗಿರುವ ಇವು ಅಡಿಕೆಯ ಹಿಂಗಾರ, ತರ ಕಾರಿ ಬೆಳೆಗಳನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ತಿಂದುಬಿಡುತ್ತಿವೆ. ಅನೇಕ ಕೀಟನಾಶಕಗಳನ್ನು ಪ್ರಯೋಗಿಸಿದರೂ ಪ್ರಯೋಜನ ಶೂನ್ಯ ಎನ್ನುತ್ತಾರೆ ರೈತರು. ತೋಟಗಾರಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಗಣನೆಗೆ ತೆಗೆದುಕೊಂಡಂತಿಲ್ಲ ಎಂಬುದು ಕೃಷಿಕರ ಅಳಲು.
ಉರುವಾಲು ಗ್ರಾಮದ ಕೃಷಿಕರು ಕೋಳಿ, ಕುರಿ ಗೊಬ್ಬರವನ್ನು ಹೊರ ಜಿಲ್ಲೆಗಳಿಂದ ತರಿಸಿದ್ದು, ಅದರೊಂದಿಗೆ ಇವು ಬಂದಿರಬಹುದೇ ಎಂಬ ಶಂಕೆ ಕೃಷಿಕರದು. ವೈರಿಗಳಿಗೂ ಬೇಡ!
ಆಫ್ರಿಕನ್ ಹುಳುಗಳು ತರಕಾರಿ, ಬಸಳೆ, ಸುವರ್ಣಗೆಡ್ಡೆ, ಕೆಸುಗಳನ್ನು ಕೂಡ ನಾಶ ಮಾಡುತ್ತಿವೆ. ಗದ್ದೆಯಲ್ಲಿ ಪೈರು ತಿಂದು ಮುಗಿದ ಬಳಿಕ ಮಣ್ಣನ್ನು ತಿನ್ನಲು ಆರಂಭಿಸುತ್ತವೆ. ಇವು ಸತ್ತರೆ ಪರಿಸರವಿಡೀ ದುರ್ನಾತ. ಚಿಪ್ಪು ತುಂಬಾ ಗಟ್ಟಿ ಜತೆಗೆ ವಿಷಕಾರಿ. ಮನುಷ್ಯನ ಕಾಲಿಗೆ ಚುಚ್ಚಿದಲ್ಲಿ ಕೊಳೆಯಲಾರಂಭಿಸುತ್ತದೆ. ಇತರ ಕೀಟಗಳ ವೈರಿಗಳು ಎನಿಸಿಕೊಂಡಿರುವ ಸಣ್ಣಪುಟ್ಟ ಪ್ರಾಣಿ-ಪಕ್ಷಿಗಳಿಗೂ ಈ ಹುಳು ವಜ್ಯì. ಆದ್ದರಿಂದ ಸಂತಾನ ವೃದ್ಧಿಯಾಗುತ್ತಿದೆ.
Related Articles
ಒಂದು ಹುಳು ವರ್ಷಕ್ಕೆ 10,000ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಮಳೆ ಆರಂಭದೊಂದಿಗೆ ಕಾಣಿಸುವ ಇವು ಬಿಸಿಲು ಬಂದಾಕ್ಷಣ ನೆರಳಿಗಾಗಿ ಪಂಪ್ ಶೆಡ್, ಮರ, ಮನೆಗಳ ಗೋಡೆಗಳನ್ನು ಆಶ್ರಯಿಸುತ್ತವೆ. ಕನಿಷ್ಠ 150ರಿಂದ 200 ಗ್ರಾಂ ತೂಕ ಹೊಂದಿರುತ್ತವೆ.
Advertisement
ಸೂಕ್ತ ಔಷಧ ಸಿಂಪಡಿಸಿದಲ್ಲಿ ಆಫ್ರಿಕನ್ ಬಸವನ ಹುಳು ಬಾಧೆ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ. Metaldehyde ಔಷಧ ಸಿಂಪಡಿಸಬೇಕು. ಯಾವ ಪ್ರಮಾಣ ಎಂಬುದನ್ನು ತಿಳಿಯ ಪಡಿಸಲು ತೋಟಗಾರಿಕೆ ಇಲಾಖೆ ಅಧಿ ಕಾರಿ ಗಳನ್ನು ಸ್ಥಳಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು.– ಎಚ್.ಆರ್. ನಾಯಕ್, ಉಪ ನಿರ್ದೇಶಕರು