Advertisement

ಅಫಜಲಪುರ ಟಿಕೆಟ್ ಗೆ ಸಹೋದರರ ಸವಾಲ್: ಇಕ್ಕಟ್ಟಿನಲ್ಲಿ ಹೈಕಮಾಂಡ್

08:26 PM Mar 09, 2023 | Team Udayavani |

ಕಲಬುರಗಿ: ಚುನಾವಣೆ ಕಾವು ಬಿಸಿಲಿನಂತೆ ಹೆಚ್ಚಳವಾಗುತ್ತಿದ್ದು, ಸ್ಪರ್ಧಾ ಆಕಾ‌ಂಕ್ಷಿಗಳಲ್ಲಿ ಹಿಂದೆಂದೂ ಕಂಡರೀಯದ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಇನ್ನಿಲ್ಲದ ಕಸರತ್ತು ಗಳು ನಡೆಯುತ್ತಿವೆ.

Advertisement

ಟಿಕೆಟ್ ಗಾಗಿ ಸಹೋದರರ ನಡುವೆ ಸವಾಲ್ ಎನ್ನುವಂತೆ ಜಿಲ್ಲೆಯ ಅಫಜಲಪುರ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಟಿಕೆಟ್ ಗಾಗಿ ಸಹೋದರರ ನಡುವೆ ದೊಡ್ಡ ಕಾಳಗ ನಡೆದಿದ್ದು,ಪಕ್ಷದ ಹೈಕಮಾಂಡ್ ಗಳು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ.

ಅಫಜಲಪುರ ಕ್ಷೇತ್ರದಲ್ಲಿ ಆರು ಸಲ ಗೆದ್ದಿರುವ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಗಿರುವ ಮಾಲೀಕಯ್ಯ ಗುತ್ತೇದಾರ ತಾವೇ ಈ ಸಲವೂ ಸ್ಪರ್ಧೆ ಮಾಡುವುದು ನಿಶ್ಚಿತ. ಪಕ್ಷದ ರಾಜ್ಯ ಉಪಾಧ್ಯಕ್ಷ ರಾಗಿದ್ದು, ತಮಗೊಂದು ಟಿಕೆಟ್ ಸಿಗೋದಿಲ್ಲವೇ? ಸಹೋದರಗೆ ತಿಳಿ ಹೇಳಿ ಹೇಳುತ್ತೇನೆ. ‌ಇಲ್ಲದಿದ್ದರೆ ಅನುಭವಿಸುತ್ತಾನೆ ಎಂದು ಹೇಳಿರುವುದನ್ನು ಸಹೋದರ. ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ ಸವಾಲು ಎನ್ನುವಂತೆ ಸ್ವೀಕರಿಸಿದ್ದು, ಕಳೆದ ಸಲ ಮುಂದಿನ ಅಭ್ಯರ್ಥಿ ನಿತೀನ ಗುತ್ತೇದಾರ ಎಂಬುದಾಗಿ ಆಣೆ ಮಾಡಿರುವಂತೆ ಈಗ ನಡೆದುಕೊಳ್ಳುವಂತೆ ಸವಾಲೊಡ್ಡಿದ್ದಾರೆ.

ಕಳೆದ ಐದು ವರ್ಷಗಳಿಂದ ಪಕ್ಷದ ಸಂಘಟನೆ ಮಾಡಿದ್ದಲ್ಲದೇ ಇಡೀ ಕ್ಷೇತ್ರದ ಜನ ತಮ್ಮ ಪರ ಇದ್ದಾರೆ. ಸಮೀಕ್ಷೆಯಲ್ಲಿ ತಾವೇ ಮುಂಚೂಣಿಯಲ್ಲಿರುವುದರಿಂದ ಟಿಕೆಟ್ ತಮಗೆ ಸಿಗುತ್ತದೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಲ್ಲದೇ ಒಂದು ವೇಳೆ ಟಿಕೆಟ್ ದೊರಕದಿದ್ದರೂ ಸ್ಪರ್ಧಿಸುವುದು ನಿಶ್ಚಿತ ಎಂದು ಪರೋಕ್ಷವಾಗಿ ಹೇಳಿರುವುದರಿಂದ ಪಕ್ಷದ ಹೈಕಮಾಂಡ್ ವು ಯಾರಿಗೆ ಮಣೆ ಹಾಕಬೇಕು ಎಂಬ ಗೊಂದಲದಲ್ಲಿ ಮುಳುಗುವಂತಾಗಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷರಿಗೆ ಇಲ್ಲವೋ ಪಕ್ಷದ ಸಂಘಟನೆಗೆ ದುಡಿಯುತ್ತಿರುವ ಅದರಲ್ಲೂ ಕ್ಷೇತ್ರದ ಜನಾಭಿಪ್ರಾಯ ಮೇರೆಗೆ ಟಿಕೆಟ್ ನೀಡಲಾಗುತ್ತದೆ ಎಂಬುದು ಕುತೂಹಲ ಎದುರಾಗಿದೆ.

ಕಾಂಗ್ರೆಸ್ ನಲ್ಲೂ ಇದೇ ಪರಿಸ್ಥಿತಿ: ಬಿಜೆಪಿಯಲ್ಲಿ ಟಿಕೆಟ್ ಗಾಗಿ ಸಹೋದರ ನಡುವೆ ಕಾಳಗ ಏರ್ಪಟ್ಟರೆ ಇನ್ನೂ ಕಾಂಗ್ರೆಸ್ ನಲ್ಲೂ ಇದೇ ತೆರನಾಗಿ ಟಿಕೆಟ್ ಸಲುವಾಗಿ ಪೈಪೋಟಿ ಎದುರಾಗಿದೆ.‌

Advertisement

ಕಾಂಗ್ರೆಸ್ ನ ಹಾಲಿ ಶಾಸಕ ಎಂ. ವೈ .ಪಾಟೀಲ್ ವಯಸ್ಸಿನ ಕಾರಣ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದರಿಂದ ಅವರ ಮಕ್ಕಳಲ್ಲಿ ಟಿಕೆಟ್ ಗೆ ಸ್ಪರ್ಧೆ ಏರ್ಪಟ್ಟಿದೆ.
ಎಂ ವೈ ಪಾಟೀಲ್ ಹಿರಿಯ ಪುತ್ರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್ ಕಾಂಗ್ರೆಸ್ ಟಿಕೆಟ್ ಪ್ರಬಲ ಒತ್ತಡ ಹಾಕುತ್ತಿದ್ದರೆ, ಶಾಸಕರ ಇನ್ನೋರ್ವ ಪುತ್ರ ಡಾ. ಸಂಜು ಪಾಟೀಲ್ ಸಹ ತಮಗೆ ಪಕ್ಷದ ಟಿಕೆಟ್ ನೀಡುವಂತೆ ಅರ್ಜಿ ಹಾಕಿದ್ದಾರಲ್ಲದೇ ತಮಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಅನುಕೂಲ ಆಗುವುದು ಎಂದು ಹೇಳುತ್ತಿರುವುದು ಪಕ್ಷ ಇಕ್ಕಟ್ಟಿಗೆ ಸಿಲುಕಿದೆ.

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಜಿಲ್ಲೆಯಾಗುವುದರಿಂದ ಎಲ್ಲ ಕ್ಷೇತ್ರಗಳು ಸವಾಲು ಆಗಿ ಮಾರ್ಪಟ್ಟಿವೆ.‌ ಹೀಗಾಗಿ ಅಫಜಲಪುರ ಟಿಕೆಟ್ ಹಂಚಿಕೆ ಹೇಗೆ? ಎಂಬುದೇ ಹೈಕಮಾಂಡ್ ಗೆ ತಲೆ ನೋವಾಗಿ ಪರಿಣಮಿಸಿದೆ.

ಒಂದು ವೇಳೆ ಅಫಜಲಪುರದಲ್ಲಿ ಗುತ್ತೇದಾರ ಸಹೋದರರಿಬ್ಬರು ಎದುರು- ಬದುರು ಸ್ಪರ್ಧಿಸಿದರೆ ಏನಾಗಬಹುದು ಎಂದು ಒಂದು ನಿಟ್ಟಿನಲ್ಲಿ ಅವಲೋಕಿಸಲಾಗುತ್ತಿದೆ. ಕಾಂಗ್ರೆಸ್ ದಿಂದ ಶಾಸಕರ ಪುತ್ರರಿಗೆ ಟಿಕೆಟ್ ಬೇಡ ಎಂದು ಕೆಲವರು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮುಖಂಡರಾದ ರಾಜೇಂದ್ರ ಪಾಟೀಲ್ ರೇವೂರ, ಜೆ.ಎಂ ಕೊರಬು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದು,‌ಮಣೆ ಹಾಕಬಹುದೇ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿನ 59 ಪ್ರಕರಣಗಳು ಲೋಕಾಯುಕ್ತಕ್ಕೆ : ಸಿಎಂ ಬೊಮ್ಮಾಯಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next