Advertisement

Karnataka polls: ಸಹೋದರ ನಿತೀನ್ ಗೆ ಬುದ್ಧಿವಾದ ಹೇಳಿ ಮನವೊಲಿಸುವೆ: ಮಾಲಿಕಯ್ಯ

02:25 PM Apr 12, 2023 | Team Udayavani |

ಕಲಬುರಗಿ: ಅಫಜಲಪುರ  ಕ್ಷೇತ್ರದಿಂದ ನಿರೀಕ್ಷೆಯಂತೆ ನನಗೆ ಬಿಜೆಪಿ ಟಿಕೆಟ್ ಸಿಕ್ಕಿದೆ ಇದರಿಂದಾಗಿ ಕ್ಷೇತ್ರದಲ್ಲಿ ಉಂಟಾಗಿರುವ ಗೊಂದಲ ಒಂದು ಹಂತಕ್ಕೆ ಕಡಿಮೆಯಾಗಿದ್ದು ನನ್ನ ಸಹೋದರ ನಿತಿನ್ ಗುತ್ತೇದಾರ್ ಅವರನ್ನು ಕರೆದು ಬುದ್ಧಿವಾದ ಹೇಳಿ ಮನವೊ ಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಅಫಜಲಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲಿಕಯ್ಯ ಗುತ್ತೇದಾರ ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಕೇಂದ್ರ ಉದ್ಘಾಟನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಖುಷಿ ಹಂಚಿಕೊಂಡ ಮಾಲೀಕಯ್ಯ ಅವರು, ಸಹೋದರ ನಿತಿನ್ ಗುತ್ತೇದಾರ್ ಪಕ್ಷೇತರರಾಗಿ ಅಫಜಲಪುರ ಕ್ಷೇತ್ರದಿಂದ ಕಣಕ್ಕಿಳಿಯುವ ಕುರಿತು ಪ್ರಸ್ತಾಪಿಸಿದರು. ಇವತ್ತಿದ್ದರೂ, ನಾಳೆ ಇದ್ದರೂ ನಿತಿನ್ ನನ್ನ ರಾಜಕೀಯ ಉತ್ತರಾಧಿಕಾರಿ. ನನ್ನ ಮಕ್ಕಳನ್ನು ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ತರುವುದಿಲ್ಲ. ಹೀಗಾಗಿ ನಿತಿನ್ ಸೇರಿದಂತೆ ಅವರ ಬೆಂಬಲಿಗರಲ್ಲಿ ಮತ್ತು ನನ್ನ ಕುಟುಂಬದ ಇತರೆ ಸದಸ್ಯರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.

ಕಳೆದ ಹಲವು ದಿನಗಳಿಂದ ಕ್ಷೇತ್ರದಲ್ಲಿ ತುಸು ವಿರೋಧಭಾಸ ಉಂಟಾಗಿರುವುದು ನಿಜ ಎಂದು ಒಪ್ಪಿಕೊಂಡ ಅವರು, ಇದೆಲ್ಲವೂ ಕ್ಷಣಿಕವಾದದ್ದು ಮತ್ತು ರಾಜಕೀಯ ನಡೆಗಳಾಗಿದ್ದರಿಂದ ನಾನು ಇದೆಲ್ಲವನ್ನು ಶಮನ ಮಾಡಿಕೊಂಡು  ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದರು.

ಕುಟುಂಬಕ್ಕೊಂದು ಟಿಕೆಟ್ ಸೂತ್ರ:

ಪಕ್ಷದಲ್ಲಿ ಕುಟುಂಬಕ್ಕೊಂದು ಟಿಕೆಟ್ ಎನ್ನುವ ಸೂತ್ರದಡಿಯ ಟಿಕೇಟ್ ಹಂಚಿಕೆ ಮಾಡಲಾಗಿದೆ. ಆದರೆ ಕಲ್ಬುರ್ಗಿ ಉತ್ತರ ಕ್ಷೇತ್ರಕ್ಕೆ ಚಂದ್ರಕಾಂತ್ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆಯಾಗಿರುವುದು ಸಂತೋಷದ ವಿಚಾರ. ಆದರೆ ಕುಟುಂಬಕ್ಕೊಂದು ಟಿಕೆಟ್ ಎನ್ನುವ ಸೂತ್ರದ ಅನುಸಾರ ನೋಡುವುದಾದರೆ ಈಗಾಗಲೇ ಬಿ.ಜಿ. ಪಾಟೀಲರು ಎಂಎಲ್‌ಸಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದಲ್ಲಿ ಗೊಂದಲ ಉಂಟಾಗಿ ಎಂಎಲ್ಸಿ ಸ್ಥಾನಕ್ಕೆ ಕಂಟಕ ಎದುರಾದರೆ ತಾವು ರಾಜೀನಾಮೆ ನೀಡುವ ಬಗ್ಗೆಯೂ ಬಿ.ಜಿ. ಪಾಟೀಲರೇ ಸ್ವತಃ ಹೇಳಿಕೊಂಡಿದ್ದಾರೆ. ಈ ವಿಚಾರ ಹೈಕಮಾಂಡ್ ಮತ್ತು ಪಕ್ಷದ ವರಿಷ್ಠರಿಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.

Advertisement

ಇದನ್ನೂ ಓದಿ:Threat Call: ದೆಹಲಿಯ ಶಾಲೆ ಹಾಗೂ ಪಾಟ್ನಾದ ಏರ್​ರ್ಪೋರ್ಟ್ ಗೆ ಬಾಂಬ್‌ ಬೆದರಿಕೆ: ಪರಿಶೀಲನೆ

ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಸಾಮಾಜಿಕ ನ್ಯಾಯ; ಓಬಿಸಿ ವರ್ಗಕ್ಕೆ ಹೆಚ್ಚು ಆದ್ಯತೆ: ಮಾಲೀಕಯ್ಯ

ಕಲಬುರಗಿ: ರಾಜ್ಯದಲ್ಲಿನ ಎಲ್ಲ ವರ್ಗಗಳ ಹಿತ ಕಾಯುವ ನಿಟ್ಟಿನಲ್ಲಿ  ಸಾಮಾಜಿಕ ನ್ಯಾಯದ ಆಧಾರದ ಮೇಲೆ ಬಿಜೆಪಿ ಟಿಕೆಟ್ ಹಂಚಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ ಎಂದು ಮಾಜಿ ಸಚಿವ ಹಾಗೂ ಅಫಜಲಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಘೋಷಣೆಯಾಗಿರುವ 180 ಸ್ಥಾನಗಳ ಪೈಕಿ, ಐವತ್ತಕ್ಕೂ ಹೆಚ್ಚು ಸ್ಥಾನಗಳಲ್ಲಿ ಹಿಂದು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಅದು ಅಲ್ಲದೆ ೮ ಜನ ಮಹಿಳೆಯರಿಗೂ ಕೂಡ ಟಿಕೆಟ್ ನೀಡಲಾಗಿದೆ ಇದು ಸಾಮಾಜಿಕ ನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದರು.

ಬಹುತೇಕ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವರಿಷ್ಠರು ಕ್ಷೇತ್ರಗಳಲ್ಲಿ ಮುಖಬೆಲೆ ಹೊಂದಿರುವ ಹಾಗೂ ತಳಹಂತದಲ್ಲಿ ಕೆಲಸ ಮಾಡಿರುವ ಹಾಗೂ ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಹುಡುಕಿ ಹುಡುಕಿ ಕಣಕ್ಕೆ ಸಜ್ಜು ಮಾಡಲಾಗಿದೆ ಎಂದರು.

ಅಪರಾಧ ಹಿನ್ನೆಲೆ ಅವರಿಗೆ ಟಿಕೆಟ್

ಬಿಜೆಪಿಯಿಂದ ಚಿತ್ತಾಪುರ ಕ್ಷೇತ್ರಕ್ಕೆ ಅಪರಾಧ ಹಿನ್ನೆಲೆವುಳ್ಳ ಮಣಿಕಂಠ ರಾಟೋಡ್ ಗೆ ಟಿಕೆಟ್ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಸಣ್ಣಗೆ ನಸುನಕ್ಕ ಮಾಲಿಕಯ್ಯ, ಕಾಂಗ್ರೆಸ್ ಪಕ್ಷದಲ್ಲಿ ಜೈಲಿಗೆ ಹೋಗಿ ಬಂದವರಿಗೆ ಟಿಕೆಟ್ ನೀಡಿದ್ದಾರಲ್ಲ ಎಂದು ಟಾಂಗ್ ನೀಡಿದರು.

ಅಲ್ರಿ… ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಲವಾರು ಆರೋಪಗಳನ್ನು ಹೊತ್ತು ಜೈಲಿಗೆ ಹೋಗಿ ಬಂದಿದ್ದರು. ಅಂತಹವರಿಗೆ ಟಿಕೆಟ್ ನೀಡಲಾಗಿದೆಯಲ್ಲ ಎಂದು ಮರು ಪ್ರಶ್ನೆ ಮಾಡಿದರು.

ಪ್ರಾಮುಖ್ಯನಾ ಚಿತ್ತಾಪುರ ಮೀಸಲು ಕ್ಷೇತ್ರಕ್ಕೆ ಮಣಿಕಂಠ ಅವರಿಗೆ ಟಿಕೆಟ್ ನೀಡಿರುವುದನ್ನು ಸಮರ್ಥಿಸಿಕೊಂಡರು.

ಈ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಬಿಜೆಪಿ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next