Advertisement

‘ತಾಲಿಬಾನ್ ಗಳಿಂದ ಹತಳಾಗಲು ಕಾಯುತ್ತಿದ್ದೇನೆ’ : ಅಫ್ಘಾನ್ ಮೊದಲ ಮಹಿಳಾ ಮೇಯರ್  

06:41 PM Aug 17, 2021 | Team Udayavani |

ಕಾಬೂಲ್ : ತಾಲಿಬಾನ್ ಉಗ್ರರಿಂದ ಹತ್ಯೆಯಾಗಲು ಕಾಯುತ್ತಿದ್ದೇನೆ ಎಂದು ಅಫ್ಘಾನ್ ನ ಮೊದಲ ಮಹಿಳಾ ಮೇಯರ್ ಜರೀಫಾ ಗಫಾರಿ ನೋವಿನಿಂದ ನುಡಿದಿದ್ದಾರೆ.

Advertisement

ಅಫ್ಘಾನಿಸ್ತಾನದ ಆಡಳಿತ ತಾಲಿಬಾನ್ ಉಗ್ರರ ಕೈ ಸೇರುತ್ತಿದ್ದಂತೆ ತನ್ನ ನೋವು ಹೊರ ಹಾಕಿರುವ ಜರೀಫಾ, ಅವರು ಬರುವುದನ್ನು ಎದುರು ನೋಡುತ್ತಾ ಇಲ್ಲಿಯೆ ಕುಳಿತಿದ್ದೇನೆ. ನನ್ನ ಕುಟುಂಬ ಹಾಗೂ ನನಗೆ ಸಹಾಯ ಮಾಡಲು ಇಲ್ಲಿ ಯಾರೂ ಇಲ್ಲ. ಆದ್ದರಿಂದ ದಿಕ್ಕು ತೋಚದಂತಾಗಿ ನನ್ನ ಗಂಡ ಹಾಗೂ ಕುಟುಂಬದ ಜೊತೆ ಮನೆ ಎದುರು ಕುಳಿತಿದ್ದೇನೆ. ನನ್ನ ಕುಟುಂಬ ಮತ್ತು ನನ್ನಂತಹ ಜನರನ್ನು ಅವರು ಕೊಲ್ಲಲಿ. ನಾನು ನನ್ನ ಕುಟುಂಬ ಬಿಟ್ಟಿ ಹೋಗುವುದಿಲ್ಲ. ಅಷ್ಟಕ್ಕೂ ನಾವು ಎಲ್ಲಿಹೆ ಹೋಗಬೇಕು ? ಕಣ್ಣೀರು ಸುರಿಸುತ್ತಲೆ ಪ್ರಶ್ನಿಸಿದ್ದಾರೆ ಜರೀಫಾ.

27 ವರ್ಷ ವಯಸ್ಸಿನ ಈ ಯುವರಾಜಕಾರಣಿ ಅಫ್ಘಾನಿಸ್ತಾನದಲ್ಲಿ ಇತಿಹಾಸ ಬರೆದವಳು. 2018ರಲ್ಲಿ ಮೊದಲ ಮಹಿಳಾ ಮೇಯರ್ ಆಗಿ ಈಕೆ ಆಯ್ಕೆಯಾಗಿದ್ದಾಳೆ. ಅಚ್ಚು ಕಟ್ಟಾದ ಆಡಳಿತ ನೀಡಬೇಕೆಂಬ ಈಕೆಯ ಕನಸಿಗೆ ಇದೀಗ ತಾಲಿಬಾನ್ ಉಗ್ರರು ತಣ್ಣೀರೆರಚಿದ್ದಾರೆ.

ಇನ್ನುಇದು ಕೇವಲ ಜರೀಫಾ ಅವರ ಆತಂಕ ಮಾತ್ರವಲ್ಲ. ಇಲ್ಲಿರುವ ಅನೇಕ ಮಹಿಳೆಯರು ಇದೇ ಆತಂಕ ಹೊರ ಹಾಕಿದ್ದಾರೆ. ನಮ್ಮ ಜೀವಗಳಿಗೆ ರಕ್ಷಣೆ ಇಲ್ಲ ಎನ್ನುತ್ತಿದ್ದಾರೆ. ಜೀವ ಉಳಿದರೆ ಸಾಕು ಎಂದು ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ.

Advertisement

20 ವರ್ಷಗಳ ನಂತರ ಅಫ್ಘಾನಿಸ್ತಾನದ ಆಡಳಿತ ತಮ್ಮ ಕೈಗೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರು ಷರಿಯಾ ಕಾನೂನಿನಡಿ ಆಡಳಿತ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next