Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನ್‌ಗೆ ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಅಡಿಪಾಯ ನಿರ್ಮಿಸಿದರು. ಆರಂಭಿಕರಾದ ಮೊಹಮ್ಮದ್ ಶಾಜಾದ್ (34) ಮತ್ತು ಇಹ್ಸಾನುಲ್ಲ (45) 11.4 ಓವರ್‌ಗಳಿಂದ 57 ರನ್ ಒಟ್ಟುಗೂಡಿಸಿದ ಬಳಿಕ ರಹಮತ್ ಷಾ ಕ್ರೀಸ್ ಆಕ್ರಮಿಸಿಕೊಂಡರು.
ಅಫ್ಘಾನ್ ಸರದಿಯಲ್ಲಿ ಸರ್ವಾಧಿಕ ರನ್ ಬಾರಿಸಿದ ಹೆಗ್ಗಳಿಕೆ ಷಾ ಅವರದಾಯಿತು. 90 ಎಸೆತ ನಿಭಾಯಿಸಿದ ಷಾ 5 ಬೌಂಡರಿ ನೆರವಿನಿಂದ 72 ರನ್ ಬಾರಿಸಿದರು. ಇದು ಅವರ 12ನೇ ಅರ್ಧ ಶತಕ. ನಾಯಕ ಅಸರ್ ಅಫ್ಘಾನ್ (1) ಬೇಗನೇ ಪೆವಿಲಿಯನ್ ಸೇರಿಕೊಂಡ ಬಳಿಕ ಷಾ-ಹಶ್ಮತುಲ್ಲ ಶಾಹಿದಿ (37) 4ನೇ ವಿಕೆಟಿಗೆ 80 ರನ್ ಜತೆಯಾಟ ನಿಭಾಯಿಸಿದರು. ತಿಸರ ಪೆರೆರ ಘಾತಕ ದಾಳಿ
ಕೊನೆಯ 10 ಓವರ್‌ಗಳಲ್ಲಿ ತಿಸರ ಪೆರೆರ ಘಾತಕ ದಾಳಿ ಸಂಘಟಿಸಿದ್ದರಿಂದ ಅಫ್ಘಾನ್‌ನ ದೊಡ್ಡ ಮೊತ್ತದ ಯೋಜನೆ ವಿಫಲವಾಯಿತು. ಪೆರೆರ 55 ರನ್ನಿನ್ನು 5 ವಿಕೆಟ್ ಕಿತ್ತರು. ಅವರು ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಕಿತ್ತ 4ನೇ ಸಂದರ್ಭ ಇದಾಗಿದೆ.
Related Articles
ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್, ನಬಿ, ನೈಬ್ ಬಿಗು ದಾಳಿಗೆ ಲಂಕನ್ನರು ಪತರುಗುಟ್ಟಿದರು. ಪ್ರತಿಯೊಬ್ಬರೂ ತಲಾ 2 ವಿಕೆಟ್ ಪಡೆದು ಮಿಂಚಿದರು.
Advertisement