Advertisement

ಪಾಕಿಸ್ಥಾನಕ್ಕೆ ಆಘಾತವಿಕ್ಕಿದ ಅಫ್ಘಾನ್‌

09:36 AM May 26, 2019 | keerthan |

ಬ್ರಿಸ್ಟಲ್‌: ಕ್ರಿಕೆಟ್‌ ತವರಲ್ಲಿ ಪಾಕಿಸ್ಥಾನದ ಸೋಲಿನ ಸರಪಳಿ ಮುಂದುವರಿದಿದೆ. ತನ್ನ ಮೊದಲ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಅದು ಅಫ್ಘಾನಿಸ್ಥಾನದ ವಿರುದ್ಧ 3 ವಿಕೆಟ್‌ ಸೋಲಿಗೆ ತುತ್ತಾಗಿದೆ. ಇದರೊಂದಿಗೆ ಗುಲ್ಬದಿನ್‌ ನೈಬ್‌ ಸಾರಥ್ಯದ ಅಫ್ಘಾನ್‌ ಎಚ್ಚರಿಕೆಯ ಗಂಟೆಯೊಂದನ್ನು ಮೊಳಗಿಸಿದೆ.

Advertisement

ಶುಕ್ರವಾರದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ ಬಾಬರ್‌ ಆಜಂ ಅವರ ಶತಕ (112) ಸಾಹಸದ ಹೊರತಾಗಿಯೂ 47.5 ಓವರ್‌ಗಳಲ್ಲಿ 262ಕ್ಕೆ ಆಲೌಟ್‌ ಆಯಿತು. ಅಫ್ಘಾನ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿ 49.4 ಓವರ್‌ಗಳಲ್ಲಿ 7 ವಿಕೆಟಿಗೆ 263 ರನ್‌ ಬಾರಿಸಿ ಗೆಲುವು ಸಾರಿತು.

ಅಫ್ಘಾನ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪಾಕ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಮೊಹಮ್ಮದ್‌ ಶಾಜಾದ್‌ 23, ಹಜ್ರತುಲ್ಲ ಜಜಾರಿ 49, ರಹಮತ್‌ ಶಾ 32, ನಬಿ 34 ರನ್‌ ಮಾಡಿದರೆ, ಹಶ್ಮತುಲ್ಲ ಶಾಹಿದಿ ಅಜೇಯ 74 ರನ್‌ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌
ಪಾಕಿಸ್ಥಾನ-47.5 ಓವರ್‌ಗಳಲ್ಲಿ 262 (ಬಾಬರ್‌ 112, ಮಲಿಕ್‌ 44, ಹಕ್‌ 32, ನಬಿ 46ಕ್ಕೆ 2, ರಶೀದ್‌ 27ಕ್ಕೆ 2). ಅಫ್ಘಾನಿಸ್ಥಾನ-49.4 ಓವರ್‌ಗಳಲ್ಲಿ 7 ವಿಕೆಟಿಗೆ 263 (ಶಾಹಿದಿ ಅಜೇಯ 74, ಜಜಾರಿ 49, ನಬಿ 34, ರಿಯಾಜ್‌ 46ಕ್ಕೆ 3,
ಇಮಾದ್‌ 29ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next