Advertisement

ಕೈಮೀರಿದ ಅಫ್ಘಾನ್‌ ಸಂಘರ್ಷ

11:41 PM Aug 05, 2021 | Team Udayavani |

ಕಾಬೂಲ್‌/ಹೊಸದಿಲ್ಲಿ: ಉಗ್ರ ಸಂಘಟನೆ ತಾಲಿಬಾನ್‌ ವಿರುದ್ಧ ಅಫ್ಘಾನಿಸ್ಥಾನದ ಸೇನೆ ಮುಗಿ ಬಿದ್ದಿದೆ. ಯುದ್ಧಗ್ರಸ್ತ ರಾಷ್ಟ್ರದ ದಕ್ಷಿಣ ಭಾಗದಲ್ಲಿ ಅಫ್ಘಾನ್‌ ವಾಯುಪಡೆ ಉಗ್ರರ ನೆಲೆಗಳನ್ನು ಗುರಿಯಾಗಿರಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ.

Advertisement

ಆದರೆ, ಉತ್ತರದ ಭಾಗದಲ್ಲಿ ಉಗ್ರರ ಪಡೆ ಸರಕಾರಿ ಪಡೆಗಳ ವಿರುದ್ಧ ಮೇಲುಗೈ ಸಾಧಿಸಿದೆ. ದಕ್ಷಿಣ ಭಾಗದಲ್ಲಿರುವ ಹೆಲ್ಮಂಡ್‌ ಪ್ರಾಂತ್ಯದಲ್ಲಿ ಉಗ್ರರು ಮತ್ತು ಸೇನೆಯ ನಡುವೆ ಘನಘೋರ ಕಾಳಗ ನಡೆದಿದೆ. ಲಷ್ಕರ್‌ ಘಾ ಎಂಬಲ್ಲಿರುವ ಸರಕಾರಿ ರೇಡಿಯೋ ಮತ್ತು ಟಿವಿ ಕೇಂದ್ರದ ಸಮೀಪದಲ್ಲಿಯೇ ಪ್ರಬಲ ಬಾಂಬ್‌ ಸ್ಫೋಟ ಸಂಭವಿಸಿದೆ.

ಜತೆಗೆ ಆ ಕೇಂದ್ರವನ್ನು ಉಗ್ರರು ವಶಕ್ಕೆ ಪಡೆದುಕೊಂಡಿದ್ದಾರೆ. ಸರಕಾರ ನೀಡಿರುವ ಮಾಹಿತಿ ಪ್ರಕಾರ ಮೂವರು ನಾಗರಿಕರು ಮತ್ತು 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ತಾಲಿಬಾನ್‌ ನಿಯಂತ್ರಣ: ದೇಶದ ಉತ್ತರ ಭಾಗದಲ್ಲಿ ತಾಲಿಬಾನಿಗಳು ಸಾರ್‌-ಎ-ಪೌಲ್‌ ಎಂಬ ಸ್ಥಳದ ಮೇಲೆ ನಿಯಂತ್ರಣ ಸಾಧಿಸಿದ್ದಾರೆ.  ಜಜ್ವಾನ್‌ ಪ್ರಾಂತ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಸರಕಾರಿ ಪಡೆಗಳು ಹೆಚ್ಚಿನ ಹೋರಾಟ ನಡೆಸದೆ ಉಗ್ರರಿಗೆ ಶರಣಾಗತಿಯಾಗಿವೆ.

ಪಶ್ಚಿಮ ಭಾಗದ ಹೆರಾತ್‌ನ ಹಲವು ಭಾಗಗಳನ್ನು ಉಗ್ರರು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ನಡೆದ ಹೋರಾಟದಲ್ಲಿ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಭಾರತಕ್ಕಿಲ್ಲ ಆಹ್ವಾನ: ಅಫ್ಘಾನಿಸ್ಥಾನದಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ರಷ್ಯಾ ನೇತೃತ್ವದಲ್ಲಿ ಪಾಕಿಸ್ಥಾನ, ಚೀನ ಮತ್ತು ಅಮೆರಿಕ ಸರಕಾರಗಳ ನಡುವೆ ಆ.11ರಂದು ಕತಾರ್‌ನಲ್ಲಿ ಸಭೆ ನಡೆಯಲಿದೆ. ಅದಕ್ಕೆ ಭಾರತಕ್ಕೆ ಆಹ್ವಾನ ನೀಡಲಾಗಿಲ್ಲ. ಇದೇ ವೇಳೆ, ಶುಕ್ರವಾರ ಭಾರತದ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹಾಲಿ ಸ್ಥಿತಿ ಕುರಿತು ಚರ್ಚಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next