Advertisement
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಅಯರ್‌ಲ್ಯಾಂಡ್ ತಂಡವು ರಶೀದ್ ಖಾನ್ ದಾಳಿಗೆ ಕುಸಿದು 48.1 ಓವರ್‌ಗಳಲ್ಲಿ 229 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ರಹಮತ್ ಶಾ ಅವರ ಆಕರ್ಷಕ ಅಜೇಯ ಶತಕದಿಂದಾಗಿ ಅಘಾ^ನಿಸ್ಥಾನ ತಂಡವು 48.4 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಮೊದಲೆರಡು ವಿಕೆಟನ್ನು ಕಳೆದುಕೊಂಡ ಬಳಿಕ ರಹಮತ್ ಶಾ ಮತ್ತು ನಾಯಕ ಅಸYರ್ ಸ್ಟಾನಿಜಾಯ್ ಮೂರನೇ ವಿಕೆಟಿಗೆ 73 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು. ಸ್ಟಾನಿಜಾಯ್ ಔಟಾದ ಬಳಿಕ ರಹಮತ್ ಅವರನ್ನು ಸೇರಿಕೊಂಡ ಸಮೀಯುಲ್ಲ ಶೆನ್ವಾರಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡರು. ಮುರಿಯದ ನಾಲ್ಕನೇ ವಿಕೆಟಿಗೆ 133 ರನ್ನುಗಳ ಜತೆಯಾಟ ನಡೆಸಿ ತಂಡಕ್ಕೆ ಸರಣಿ ಗೆಲುವು ತಂದುಕೊಟ್ಟರು. ಈ ನಡುವೆ ಆಕರ್ಷಕ ಶತಕ ದಾಖಲಿಸಿದ ರಹಮತ್ ಶಾ 108 ರನ್ ಗಳಿಸಿ ಔಟಾಗದೆ ಉಳಿದರು. 128 ಎಸೆತ ಎದುರಿಸಿದ ಅವರು 10 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಶೆನ್ವಾರಿ 62 ರನ್ ಗಳಿಸಿದರು. ಶತಕ ಸಿಡಿಸಿದ ರಹಮತ್ ಶಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಅಯರ್‌ಲ್ಯಾಂಡಿನ ಪಾಲ್ ಸ್ಟರ್ಲಿಂಗ್ ಸರಣಿಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತಗೊಂಡರು.
Related Articles
Advertisement