Advertisement

ಜಿಂಬಾಬ್ವೆ ವಿರುದ್ಧ ಆಫ್ಘಾನಿಸ್ತಾನದ ಮೊದಲ ಟೆಸ್ಟ್‌?

07:10 AM Aug 01, 2017 | Team Udayavani |

ದುಬೈ: ಐಸಿಸಿಯ ಕಳೆದ ವಾರ್ಷಿಕ ಸಭೆಯಲ್ಲಿ ಆಫ್ಘಾನಿಸ್ತಾನ ಮತ್ತು ಐರೆಲಂಡ್‌ಗೆ ನೂತನವಾಗಿ ಟೆಸ್ಟ್‌ ಮಾನ್ಯತೆ
ನೀಡಲಾಗಿತ್ತು. ಇವೆರಡೂ ತಂಡಗಳು ಈಗಾಗಲೇ ಟಿ20 ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 5 ದಿನಗಳ ಪಂದ್ಯವನ್ನಾಡಲು ತುದಿಗಾಲಲ್ಲಿ ನಿಂತಿವೆ. ಆದರೆ ಯಾವಾಗ, ಯಾರ ವಿರುದ್ಧ ಎಂಬುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ.

Advertisement

ಸೋಮವಾರ ಹರಿದಾಡಿದ ಸುದ್ದಿಯೊಂದರ ಪ್ರಕಾರ ಆಫ್ಘಾನಿಸ್ತಾನ ತನ್ನ ಮೊದಲ ಟೆಸ್ಟ್‌ ಪಂದ್ಯವನ್ನು ಜಿಂಬಾಬ್ವೆ
ವಿರುದಟಛಿ ಆಡುವ ಸಾಧ್ಯತೆ ಇದೆ. ಡಿಸೆಂ ಬರ್‌-ಜನವರಿಯಲ್ಲಿ ಆಫ್ಘಾನಿಸ್ತಾನದ ವಿರುದಟಛಿ 3 ಟೆಸ್ಟ್‌, 5 ಏಕದಿನ ಹಾಗೂ 3 ಟಿ20 ಪಂದ್ಯಗಳ ಪೂರ್ಣ ಪ್ರಮಾಣದ ಕ್ರಿಕೆಟ್‌ ಸರಣಿಯ ಯೋಜನೆಯೊಂದು ಜಿಂಬಾಬ್ವೆ ಮುಂದಿದೆ. ಆಗ ಆಫ್ಘಾನಿಸ್ತಾನ ಟೆಸ್ಟ್‌ ಕ್ರಿಕೆಟಿಗೆ ಪಾದಾರ್ಪಣೆ ಮಾಡಲಿದೆ ಎಂದು ತಿಳಿದು ಬಂದಿದೆ. ಆದರೆ ಐರೆಲಂಡಿನ ಮೊದಲ ಟೆಸ್ಟ್‌ ಬಗ್ಗೆ ಈವರೆಗೆ ಯಾವುದೇ ಸುದ್ದಿ ಬಿತ್ತರ ಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next