Advertisement

Asia Cup 2023; ತಂಡ ಪ್ರಕಟಿಸಿದ ಅಫ್ಘಾನ್: ನವೀನ್ ಉಲ್ ಹಕ್ ಗಿಲ್ಲ ಅವಕಾಶ

06:36 PM Aug 27, 2023 | Team Udayavani |

ಮುಂಬೈ: ಪಾಕಿಸ್ತಾನ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ಇದೀಗ ಅಫ್ಘಾನಿಸ್ತಾನವು ಮುಂಬರುವ ಏಷ್ಯಾ ಕಪ್ ಕೂಟಕ್ಕೆ ತಂಡ ಪ್ರಕಟಿಸಿದೆ. 17 ಜನರ ತಂಡ ಪ್ರಕಟಿಸಿದ್ದು, ವೇಗಿ ನವೀನ್ ಉಲ್ ಹಕ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

Advertisement

ತಂಡವನ್ನು ಮಧ್ಯಮ ಕ್ರಮಾಂಕದ ಆಟಗಾರ ಹಶ್ಮತುಲ್ಲಾ ಶಾಹಿದಿ ಮುನ್ನಡೆಸಲಿದ್ದಾರೆ. ಅಲ್ಲದೆ ಏಷ್ಯಾಕಪ್ ಗೆ ಅನುಭವಿ ಆಟಗಾರರಾದ ಕರೀಂ ಜನ್ನತ್ ಮರಳಿದ್ದಾರೆ.

ಗಾಯದ ಕಾರಣದಿಂದ ಪಾಕ್ ವಿರುದ್ಧದ ಸರಣಿಯಲ್ಲಿ ಆಡಿರದ ರಹಮತ್ ಶಾ ಮತ್ತು ನಜಿಬುಲ್ಲಾಹ್ ಝದ್ರಾನ್ ಏಷ್ಯಾ ಕಪ್ ಕೂಟಕ್ಕೆ ಮರಳಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದ ವಿರುದ್ಧ ಅಮೋಘ ಆಟವಾಡಿದ ರಹಮಾನುಲ್ಲಾ ಗುರ್ಬಾಜ್ ಅವರು ಇಬ್ರಾಹಿಂ ಜದ್ರಾನ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದರೆ. ರಹಮತ್ ಶಾ, ನಜೀಬುಲ್ಲಾಹ್ ಝದ್ರಾನ್ ಮತ್ತು ಮೊಹಮ್ಮದ್ ನಬಿ ಅವರು ನಾಯಕ ಶಾಹಿದಿ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ಇಕ್ರಮ್ ಅಲಿ ಖಿಲ್ ರಿಸರ್ವ್ಸ್‌ ನಲ್ಲಿ ಸ್ಥಾನ ಪಡೆದರೆ, ಪಾಕಿಸ್ತಾನ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಅಗ್ರ ಕ್ರಮಾಂಕದ ಬ್ಯಾಟರ್ ರಿಯಾಜ್ ಹಸನ್ ಕೂಡ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ:Asia Cup 2023: ಕೆಎಲ್ ರಾಹುಲ್ ಫಿಟ್ನೆಸ್ ಬಗ್ಗೆ ಸಿಕ್ಕಿತು ಮೇಜರ್ ಅಪ್ಡೇಟ್

Advertisement

ಅಫ್ಘಾನ್ ಬೌಲಿಂಗ್ ಘಟಕದಲ್ಲಿ ಅನುಭವಿ ನಬಿ ಜೊತೆಗೆ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಮತ್ತು ನೂರ್ ಅಹ್ಮದ್ ಒಳಗೊಂಡಿರುವ ಸ್ಪಿನ್ ವಿಭಾಗವನ್ನು ಹೊಂದಿದೆ. ಮತ್ತೊಂದೆಡೆ, ಫಜಲ್ಹಕ್ ಫಾರೂಕಿ ಅಫ್ಘಾನಿಸ್ತಾನದ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ, ಅಬ್ದುಲ್ ರಹಮಾನ್ ಅವರೊಂದಿಗೆ ಕೂಡಿದ್ದಾರೆ.

ಅಫ್ಘಾನ್ ತಂಡ: ಹಶ್ಮತುಲ್ಲಾ ಶಾಹಿದಿ (ಸಿ), ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಜದ್ರಾನ್, ರಹಮತ್ ಶಾ, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ರಿಯಾಜ್ ಹಸನ್, ಇಕ್ರಮ್ ಅಲಿ ಖಿಲ್, ಗುಲ್ಬದಿನ್ ನಯಿಬ್, ಕರೀಂ ಜನ್ನತ್, ಅಬ್ದುಲ್ ರಹಮಾನ್, ರಶೀದ್ ಖಾನ್, ನೂರ್ ಅಹಮದ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರಫ್, ಸುಲಿಮಾನ್ ಸಫಿ, ಫಜಲಹಕ್ ಫಾರೂಕಿ

Advertisement

Udayavani is now on Telegram. Click here to join our channel and stay updated with the latest news.

Next