Advertisement

ಏಕದಿನ ವಿಶ್ವಕಪ್‌ ಕ್ರಿಕೆಟ್‌ಗೆ ಆಫ್ಘಾನಿಸ್ತಾನಕ್ಕೆ ಅರ್ಹತೆ

06:30 AM Mar 25, 2018 | |

ಹರಾರೆ: ಮುಂಬರುವ ವಿಶ್ವಕಪ್‌ ಕ್ರಿಕೆಟ್‌ಗೆ ವೆಸ್ಟ್‌ ಇಂಡೀಸ್‌ ತಂಡ ಅರ್ಹತೆ ಪಡೆದ ಬೆನ್ನಲ್ಲೇ ಆಫ್ಘಾನಿಸ್ಥಾನ ತಂಡ ಕೂಡ ಅರ್ಹತೆ ಪಡೆದುಕೊಂಡಿದೆ. ಆಸರ್‌ ಸ್ಟಾಯಿನಿಸ್‌ ನಾಯಕತ್ವದ ಆಫ್ಘಾನಿಸ್ಥಾನ ತಂಡ 5 ವಿಕೆಟ್‌ಗಳ ಅಂತರದಿಂದ ಅಯರ್‌ಲ್ಯಾಂಡ್‌ ತಂಡವನ್ನು ಮಣಿಸುವ ಮೂಲಕ ಈ ಸಾಧನೆ ಮಾಡಿತು.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಅಯರ್‌ಲ್ಯಾಂಡ್‌ 50 ಓವರ್‌ಗಳಲ್ಲಿ  7 ವಿಕೆಟಿಗೆ 209 ರನ್‌ ಗಳಿಸಿತು. ಸ್ಪಿನ್ನರ್‌ ರಶೀದ್‌ ಖಾನ್‌ 40ಕ್ಕೆ 3 ವಿಕೆಟ್‌ ಕಬಳಿಸಿ ಅಯರ್‌ಲ್ಯಾಂಡ್‌ ರನ್‌ ಓಟಕ್ಕೆ ತಡೆ ಒಡ್ಡಿದರು. ಅಯರ್‌ಲ್ಯಾಂಡ್‌ ಪರ ಸ್ಟರ್ಲಿಂಗ್‌ (55 ರನ್‌), ಒಬ್ರಿಯಾನ್‌ (41 ರನ್‌)  ಸ್ವಲ್ಪ ಮಟ್ಟಿನ ಪ್ರತಿರೋಧ ತೋರಿದರು. ಇದಕ್ಕೆ ಉತ್ತರಿಸಿದ ಆಫ್ಘಾನಿಸ್ಥಾನ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿತು. ಮೊಹಮ್ಮದ್‌ ಶೆಹಜಾದ್‌ (54 ರನ್‌), ನೈಬ್‌ (45 ರನ್‌) ಹಾಗೂ ಆಸYರ್‌ ಸ್ಟಾಯಿನಿಸ್‌ ಅಜೇಯ (39 ರನ್‌) ಸಿಡಿಸಿದ್ದರು. ಪರಿಣಾಮ ಆಫ್ಘಾನಿಸ್ಥಾನ 49.1 ಓವರ್‌ಗೆ 5 ವಿಕೆಟ್‌ಗೆ 213 ರನ್‌ಗಳಿಸಿ ಗೆಲುವು ಸಾಧಿಸಿತು.

ಸಂಕ್ಷಿಪ್ತ ಸ್ಕೋರ್‌
ಅಯರ್‌ಲ್ಯಾಡ್‌ 50 ಓವರ್‌ಗೆ 7 ವಿಕೆಟಿಗೆ 209 (ಸ್ಟರ್ಲಿಂಗ್‌ 55, ಒಬ್ರಿಯಾನ್‌ 41, ರಶೀದ್‌ ಖಾನ್‌ 40ಕ್ಕೆ3), ಆಫ್ಘಾನಿಸ್ಥಾನ 49.1 ಓವರ್‌ಗೆ 5 ವಿಕೆಟಿಗೆ 213 ಮೊಹಮ್ಮದ್‌ ಶೆಹಜಾದ್‌ 54, ನೈಬ್‌ 45, ಸಿಮಿ ಸಿಂಗ್‌ 30ಕ್ಕೆ3)

Advertisement

Udayavani is now on Telegram. Click here to join our channel and stay updated with the latest news.

Next