Advertisement
ಆಫ್ಘಾನ್‌ನಿಂದ ಪಾಕ್ ಗಡಿ ಮೂಲಕ ಭಾರತ ಪ್ರವೇಶಿಸುತ್ತಿದ್ದ ಒಣ ದ್ರಾಕ್ಷಿ, ಅಂಜೂರ ಸೇರಿದಂತೆ ಡ್ರೈ ಪ್ರೂಟ್ಸ್ ಸಾಗಣೆ ಸ್ಥಗಿತವಾಗಿದ್ದು, ಅದರಪರಿಣಾಮ ಶುಷ್ಕಫಲಗಳ ಬೆಲೆ ದುಪ್ಪಟ್ಟಾಗಿದೆ.
Related Articles
Advertisement
ಈ ಮಧ್ಯೆ, ಡ್ರೈ ಫ್ರೂಟ್ಸ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಹೋಲ್‌ಸೇಲ್ ದಾಸ್ತಾನುದಾರರು ಸ್ಟಾಕ್ ಮಾರುಕಟ್ಟೆಗೆ ಬಿಡುತ್ತಿಲ್ಲ. ಇದುಕೃತಕ ಅಭಾವ ಹಾಗೂ ಬೆಲೆ ಏರಿಕೆಗೆಕಾರಣವಾಗಿದೆ. ಆಫ್ಘಾನಿಸ್ತಾನದಲ್ಲಿ ಉಂಟಾಗಿರುವ ಪರಿಸ್ಥಿಯ ಲಾಭ ಪಡೆಯುವಲ್ಲಿ ಕೆಲವು ಹೋಲ್ಸೇಲ್ವ್ಯಾಪಾರಿಗಳು ನಿರತರಾಗಿದ್ದು, ಇದರಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ಎಂದು ಕಂಟೋನ್ಮೆಂಟ್ ಡ್ರೈ ಫ್ರೂಟ್ಸ್ ವ್ಯಾಪಾರಿ ಜಾವೇದ್ ಹೇಳುತ್ತಾರೆ. ಆಫ್ಘಾನ್‌ನ ಈಗಿನ ಪರಿಸ್ಥಿತಿ ಎಷ್ಟು ದಿನ ಹೀಗೆ ಮುಂದುವರಿಯುತ್ತೆ ಎಂದು ಹೇಳಲಾಗದು. ಹೀಗಾಗಿ ಒಣಹಣ್ಣುಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆ
ಆಗುವ ನಿರೀಕ್ಷೆಯಿದೆ ಎಂದಿದ್ದಾರೆ. ದೀಪಾವಳಿಗೂ ಹೊಡೆತ: ದೀಪಾವಳಿ ಹಬ್ಬವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉಡುಗೊರೆ ರೂಪದಲ್ಲಿ ಒಣ ಹಣ್ಣಿನ ಪದಾರ್ಥಗಳನ್ನು ನೀಡುತ್ತಾರೆ. ದೊಡ್ಡ ದೊಡ್ಡ ಕಂಪನಿಗಳು ಮತ್ತು ರಾಜಕೀಯ ಮುಖಂಡರು,ಉದ್ಯಮಿಗಳು ಶುಭಾಷಯ ಕೋರಲು ಡ್ರೈ ಫ್ರೂಟ್ಸ್ ನೀಡುತ್ತಾರೆ.
ಆದರೆ ಈಗಿನ ಪರಿಸ್ಥಿತಿ ನೋಡಿದರೆ ದೀಪಾವಳಿ ವಹಿವಾಟಿಗೂ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ. ಇದು ಸಹಜವಾಗಿ ನಮ್ಮ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಎಂದು ಡ್ರೈ ಫ್ರೂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ. ಆಫ್ಘಾನಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಅಂಜೂರ, ಬಾದಾಮಿ, ಆಫ್ಘಾನ್‌ಕೇಸರಿ ಬೆಲೆದುಪ್ಪಟ್ಟಾಗಿದೆ. ದೀಪಾವಳಿ ಹಬ್ಬದ ವೇಳೆಗೆ ಈ ಪದಾರ್ಥಗಳ ಬೆಲೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ.
–ಮಹಮ್ಮದ್ ಇದ್ರೀಸ್ ಚೌದ್ರಿ, ಅಧ್ಯಕ್ಷರು
ಕಂಟೋನ್ಮೆಂಟ್ ಡ್ರೈ ಫ್ರೂಟ್ಸ್ ಅಸೋಸಿಯೇಷನ್ – ದೇವೇಶ ಸೂರಗುಪ್ಪ