Advertisement

ಅಫ್ಘಾನಿಸ್ಥಾನ ತಂಡದ ನಾಯಕತ್ವದಿಂದ ಅಸ್ಗರ್ ಗೆ ಕೊಕ್: ಹೊಸ ನಾಯಕನ ನೇಮಕ

11:38 AM Jun 01, 2021 | Team Udayavani |

ಕಾಬೂಲ್: ಅಫ್ಘಾನಿಸ್ಥಾನ ಕ್ರಿಕೆಟ್ ತಂಡದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ. ತಂಡದ ನಾಯಕನಾಗಿದ್ದ ಅಸ್ಗರ್ ಅಫ್ಘಾನ್ ಗೆ ಕೊಕ್ ನೀಡಲಾಗಿದ್ದು, ಟೆಸ್ಟ್ ಮತ್ತು ಏಕದಿನ ತಂಡದ ನಾಯಕತ್ವವನ್ನು ಹಶ್ಮತುಲ್ಲಾಹ್ ಶಾಹಿದಿಗೆ ನೀಡಲಾಗಿದೆ.

Advertisement

ಅಫ್ಘಾನಿಸ್ಥಾನ್ ಕ್ರಿಕೆಟ್ ಬೋರ್ಡ್ ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲಾ ಮಾದರಿ ಕ್ರಿಕೆಟ್ ತಂಡದ ನಾಯಕತ್ವದಿಂದ ಅಸ್ಗರ್ ಅಫ್ಗಾನ್ ರನ್ನು ಕೈಬಿಡಲಾಗಿದೆ.

ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಎಡಗೈ ಆಟಗಾರ ಹಶ್ಮತುಲ್ಲಾಹ್ ಶಾಹಿದಿ ಅವರನ್ನು ಟೆಸ್ಟ್ ಮತ್ತು ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ರಹಮತ್ ಶಾ ಅವರು ಅವರು ಉಪನಾಯಕನಾಗಿರಲಿದ್ದಾರೆ ಎಂದು ಎಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಲ್ ರೌಂಡರ್ ರಶೀದ್ ಖಾನ್ ಅವರು ಟಿ20 ತಂಡದ ಉಪನಾಯಕನಾಗಿ ಮುಂದುವರಿಯಲಿದ್ದಾರೆ. ಟಿ20 ತಂಡಕ್ಕೆ ನಾಯಕನನ್ನು ಆದಷ್ಟು ಶೀಘ್ರ ಆಯ್ಕೆ ಮಾಡಲಾಗುತ್ತದೆ ಎಂದು ಎಸಿಬಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next