Advertisement
ಮತ್ತೆ ಪೆಟ್ಟು ತಿಂದ ಅಮೆರಿಕ :
Related Articles
Advertisement
ಅಮೆರಿಕ ವಿರುದ್ಧದ ಪ್ರತೀಕಾರಕ್ಕೆ ರಷ್ಯಕ್ಕಿದು ಅವಕಾಶ :
ಅಫ್ಘಾನಿಸ್ಥಾನದಲ್ಲಿ ರಷ್ಯಾದ ಪ್ರಭಾವಕ್ಕೆ ಹಲವು ಐತಿಹ್ಯಗಳಿವೆ. ಶೀತಲ ಸಮರದ ಅವಧಿಯಲ್ಲಿ ಅಮೆರಿಕ ಮತ್ತು ರಷ್ಯಾ ವಿವಿಧ ಕ್ಷೇತ್ರಗಳಲ್ಲಿ ಪೈಪೋಟಿಗೆ ಬಿದ್ದವರಂತೆ ಸ್ಪರ್ಧೆ ನಡೆಸಿದ್ದವು. ಅಫ್ಘಾನ್‌ನಲ್ಲಿ ಈಗ ಯಾವುದೇ ಬೆಳವಣಿಗೆಯಾದರೂ, ಅದರಿಂದ ರಷ್ಯಾಕ್ಕೆ ಅನುಕೂಲವಾಗಲಿದೆ.ಅಮೆರಿಕ ಜಗತ್ತಿನ ರಾಷ್ಟ್ರಗಳ ಬೆಳವಣಿಗೆಗಳಲ್ಲಿ ಮೂಗು ತೂರಿಸಿ ಪೆಟ್ಟು ತಿನ್ನುವಂತೆ ರಷ್ಯಾ ಕೂಡ ಕೇಂದ್ರ ಏಷ್ಯಾದ ರಾಷ್ಟ್ರಗಳ ಮೇಲೆ ತನ್ನದೂ ಒಂದು ಛಾಪು ಇರಬೇಕು ಎಂದು ಮಹತ್ವಾಕಾಂಕ್ಷೆಯನ್ನು ಹೊಂದಿಯೇ ಇದೆ. ತಾಲಿಬಾನ್ ಅಫ್ಘಾನಿಸ್ಥಾನದಲ್ಲಿ ಪ್ರಾಬಲ್ಯ ವೃದ್ಧಿಸಿಕೊಳ್ಳುತ್ತಿರುವಂತೆಯೇ ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರಿ ಝಮೀರ್ ಕುಬಲೋವ್ “ಘನಿ ಆಡಳಿತಕ್ಕಿಂತ ತಾಲಿಬಾನ್ ಉಗ್ರರ ಆಡಳಿತವೇ ವಾಸಿ’ ಎಂದು ಹೇಳಿದ್ದರು. ಅಮೆರಿಕದ ಪ್ರಾಬಲ್ಯ ಸಂಘರ್ಷಕ್ಕೆ ತುತ್ತಾಗಿರುವ ರಾಷ್ಟ್ರದಲ್ಲಿ ಕುಸಿದು ಬಿದ್ದಿರುವುದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಂತಸವೇ. ಏಕೆಂದರೆ, ಕಜಕಿಸ್ಥಾನ, ಕಿರ್ಗಿಸ್ಥಾನ, ತಜಿಕಿಸ್ಥಾನ, ತುರ್ಕ್‌ಮೇನಿಸ್ಥಾನ, ಉಜ್ಬೇಕಿಸ್ಥಾನ, ಅಫ್ಘಾನಿಸ್ಥಾನ, ಮಂಗೋಲಿಯಾದ ಪೂರ್ವ ಭಾಗ, ಚೀನದ ಪಶ್ಚಿಮ ಭಾಗ, ಕ್ಯಾಸ್ಪಿಯನ್ ಸಮುದ್ರ, ರಷ್ಯಾದ ಉತ್ತರ ಭಾಗದಿಂದ ದಕ್ಷಿಣದ ವರೆಗಿನ ಪ್ರದೇಶದಲ್ಲಿ ಮತ್ತೂಮ್ಮೆ ಪ್ರಭಾವ ಬೀರುವ ಬಗ್ಗೆ ಯೋಚನೆ ಮಾಡುತ್ತಿದೆ. ಇಷ್ಟಾದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾನುವಾರ ಮಾತನಾಡಿದ ಅಂಶವೊಂದು ಪ್ರಧಾನ “ನಿರಾಶ್ರಿತರ ಹೆಸರಿನಲ್ಲಿ ಉಗ್ರರು ನಮ್ಮ ದೇಶಕ್ಕೆ ಬರುವುದು ಬೇಡ’ ಎಂದಿದ್ದಾರೆ. ಜತೆಗೆ ನಿರಾಶ್ರಿತರು ಬರದಂತೆ ಗಡಿಗಳನ್ನು ಮುಚ್ಚಿದೆ. ಗಮನಿಸಬೇಕಾದ ಅಂಶವೆಂದರೆ ತಾಲಿಬಾನ್ ಆಡಳಿತಕ್ಕೆ ಬೆಂಬಲ ನೀಡಿದ ರಾಷ್ಟ್ರಗಳ ಪೈಕಿ ರಷ್ಯಾ ಕೂಡ ಒಂದು.
ಭಾರತಕ್ಕೆ ಹೊಸ ಸವಾಲು :
ಭಾರತದಲ್ಲಿರುವ ಸರಕಾರಕ್ಕೆ ಈಗಾಗಲೇ ಪಾಕಿಸ್ಥಾನ, ಚೀನ ವತಿಯಿಂದ ಹಲವು ರೀತಿಯ ಸವಾಲು ಸನ್ನಿವೇಶಗಳು ಎದುರಾಗಿವೆ. ಅದಕ್ಕೊಂದು ಹೊಸ ಸೇರ್ಪಡೆಯೇ ಅಫ್ಘಾನಿಸ್ಥಾನದಲ್ಲಿ ಉಂಟಾಗಿರುವ ಬಿಕ್ಕಟ್ಟು ಕೇಂದ್ರ ಸರಕಾರಕ್ಕೆ ಮಗ್ಗುಲ ಮುಳ್ಳು ಎನ್ನುವುದರಲ್ಲಿ ಸಂಶಯವೇ ಇಲ್ಲ. 2001ರಿಂದ ಈಚೆಗೆ ವಿವಿಧ ಯೋಜನೆಗಳಲ್ಲಿ 224 ಕೋಟಿ ರೂ. ಮೊತ್ತವನ್ನು ಹೂಡಿಕೆ ಮಾಡಿದೆ. ಅವುಗಳ ಭವಿಷ್ಯ ಏನು ಎಂಬ ಆತಂಕ ಇದೆ. ಭಾರತದಲ್ಲಿ ಅಫ್ಘಾನ್ ಸಮುದಾಯದ 21 ಸಾವಿರ ಮಂದಿ ಇದ್ದಾರೆ ಎಂದು ಅವರ ಮುಖಂಡ ಅಹ್ಮದ್ ಜಿಯಾ ಘನಿ ಹೇಳಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳೇ ಹೆಚ್ಚು. ಅವರಂತೂ ಸದ್ಯಕ್ಕೆ ವಾಪಸಾಗುವ ಸಾಧ್ಯತೆ ಇಲ್ಲ. ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮವರನ್ನು ಹಂತ ಹಂತವಾಗಿ ಕರೆಯಿಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರಕ್ಕೆ ಉಗ್ರರ ಆಡಳಿತದ ಜತೆಗೆ ಕೆಲಸ ಮಾಡುವ ಅನಿವಾರ್ಯವೂ ಉಂಟಾಗಬಹುದು. ಏಕೆಂದರೆ ಹೆಚ್ಚಿನ ನಿರಾಶ್ರಿತರಿಗೆ ಅವಕಾಶ ಕಲ್ಪಿಸಿಕೊಟ್ಟರೆ, ಇಲ್ಲಿಯೂ ಸಂಕಷ್ಟದ ಸ್ಥಿತಿ ಉಂಟಾಗಬಹುದು. ಹಾಗೆಂದು ಅವರನ್ನು ಬಿಡುವಂತೆಯೂ ಇಲ್ಲ. ಒಟ್ಟಿನಲ್ಲಿ ಕತ್ತಿಯ ಅಲಗಿನ ಮೇಲೆ ನಡೆಯುವಂಥ ಕಠಿನದಲ್ಲಿ ಕಠಿನ ಸವಾಲು ಮುಂದಿನ ಸರಕಾರಗಳು ಇವೆ. ಪಾಕಿಸ್ಥಾನದ ಚಿತಾವಣೆಯಿಂದಾಗಿ ತಾಲಿಬಾನ್ ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ರೋಹಿ ಕೃತ್ಯಗಳನ್ನು ನಡೆಸದಂತೆ ತಡೆಯುವುದು ಪ್ರಧಾನವಾಗಲಿದೆ.
ಕದಡಿದ ನೀರಲ್ಲಿ ಮೀನು ಹಿಡಿದೀತೇ ಚೀನ? :
ಅಫ್ಘಾನಿಸ್ಥಾನದಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸ್ವಲಾಭಕ್ಕೆ ಬಳಕೆ ಮಾಡಲು ಚೀನ ಯೋಜಿತ ಹೆಜ್ಜೆ ಇಡುತ್ತಿದೆ. ಅಮೆರಿಕ ಸೇನೆ ವಾಪಸು ಕರೆಯಿಸಿಕೊಳ್ಳುತ್ತದೆ ಎಂಬ ನಿರ್ಧಾರ ಹೊರಬೀಳುತ್ತಲೇ, ಅಫ್ಘಾನಿಸ್ಥಾನದಲ್ಲಿ ತನ್ನ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬೆಲ್ಟ್ ಆ್ಯಂಡ್ ರೋಡ್ ಅನ್ನು ವಿಸ್ತರಿಸಲು ಮುಂದಾಗಿದೆ. ಎರಡೂ ದೇಶಗಳ ನಡುವೆ ನಿಯೋಗ ಮಟ್ಟದ ಮಾತುಕತೆ ನಡೆದಿದೆ. 30 ಮಿಲಿಯ ಯುವಾನ್ (34,326 ಕೋಟಿ ರೂ.) ಮತ್ತು 1 ಮಿಲಿಯ ಅಮೆರಿಕನ್ ಡಾಲರ್ ನಗದನ್ನು ಸಾಲವಾಗಿ ನೀಡಿದೆ. ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿ ಅಫ್ಘಾನ್‌ನ ಯೋಧರಿಗೆ ನೆರವು ನೀಡಿತ್ತು. ಸದ್ಯ ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನ್‌ನಲ್ಲಿ 74 ಲಕ್ಷ ಕೋಟಿ ರೂ. ಮೌಲ್ಯದ ಬಾಕ್ಸೆ„ಟ್, ತಾಮ್ರ, ಕಬ್ಬಿಣ ಸೇರಿದಂತೆ ಹಲವು ಅದಿರು ನಿಕ್ಷೇಪಗಳಿವೆ. ಈಗಾಗಲೇ ಮೆಸ್ ಅಯ°ಕ್‌ನಿಂದ 30 ವರ್ಷಗಳ ವರೆಗೆ ತಾಮ್ರ ತೆಗೆವ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.
ಸವಾಲಿನ ಅಂಶವೆಂದರೆ, ಪಾಕಿಸ್ಥಾನದ ಜತೆ ಸೇರಿ, ಚೀನ ಭಾರತದ ವಿರುದ್ಧ ಚಿತಾವಣೆ ಮಾಡಲು ಹೆಜ್ಜೆ ಮುಂದಿಡಬಹುದೇ ಎನ್ನುವುದು ಆತಂಕದ ವಿಚಾರ. ಏಕೆಂದರೆ ಭಾರತದ ವಿರುದ್ಧ ಕೆಲಸ ಮಾಡಲು ಸಿಗುವ ಯಾವುದೇ ಅವಕಾಶವನ್ನು ಚೀನ ಬಿಡುವುದೇ ಇಲ್ಲ. ಚೀನ ತಾಲಿಬಾನ್ ಆಡಳಿತವನ್ನು ಸದ್ಯಕ್ಕೆ ಮಾನ್ಯ ಮಾಡದೇ ಇದ್ದರೂ, ಅವರ ಜತೆಗೆ ಸಹಮತ ಹೊಂದಿದೆ. ಪೂರ್ಣ ಪ್ರಮಾಣದಲ್ಲಿ ಅಫ್ಘಾನಿಸ್ಥಾನ ತಾಲಿಬಾನ್ ವಶವಾಗುವುದಕ್ಕೆ ಮೊದಲು ಉಗ್ರ ಸಂಘಟನೆಯ ರಾಜಕೀಯ ನಿಯೋಗ ಬೀಜಿಂಗ್‌ಗೆ ಭೇಟಿ ನೀಡಿತ್ತು.