Advertisement
ತಾಲಿಬಾನ್ ಆಡಳಿತ ಶುರುವಾದ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳು ಮೂಲೆ ಗುಂಪಾಗಿವೆ. ಷರಿಯತ್ ಕಾನೂನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿರುವ ತಾಲಿಬಾನಿಗಳು ಮಹಿಳೆಯರ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಿದ್ದಾರೆ. ಮನೆಯಿಂದ ಹೊರ ಬರಬೇಕಾದರೆ ಮುಖ ಮುಚ್ಚುವಂತೆ ಬುರ್ಖಾ ಧರಿಸುವುದು ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ತಾಲಿಬಾನಿಗಳ ಈ ಆದೇಶ ಅಲ್ಲಿಯ ಹೆಣ್ಣು ಮಕ್ಕಳಿಗೆ ಉಸಿರುಗಟ್ಟುವಂತೆ ಮಾಡಿದೆ.
Related Articles
Advertisement
ಪ್ರಜ್ಞಾವಂತ ಯುವತಿಯರು ಅಫ್ಗಾನ್ ಸಾಂಸ್ಕೃತಿಕ ಉಡುಗೆಗಳನ್ನು ತೊಟ್ಟು, ಆ ಧಿರಿಸಿನಲ್ಲಿರುವ ತಮ್ಮ ಫೋಟೊಗಳನ್ನು #DoNotTouchMyClothes, #AfghanistanCulture ಹ್ಯಾಷ್ ಟ್ಯಾಟ್ ನಡಿ ಟ್ವಿಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಅಭಿಯಾನಕ್ಕೆ ಎಲ್ಲೆಡೆ ಪಾರ ಬೆಂಬಲ ವ್ಯಕ್ತವಾಗಿದೆ.