Advertisement
ಇರಾನ್ ನೊಂದಿಗಿನ ಪ್ರಮುಖ ಗಡಿ ಕ್ರಾಸಿಂಗ್ ಇಸ್ಲಾಂ ಖಲಾವನ್ನು ಕೂಡ ಶುಕ್ರವಾರ ತಾಲಿಬಾನ್ ಉಗ್ರರು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೇ ಅಫ್ಘಾನ್‌ನ 398 ಜಿಲ್ಲೆಗಳ ಪೈಕಿ 250 ಜಿಲ್ಲೆಗಳು ಈಗ ನಮ್ಮ ವಶದಲ್ಲಿವೆ ಎಂದು ತಾಲಿಬಾನ್ ನಾಯಕರು ಹೇಳಿಕೊಂಡಿದ್ದಾರೆ. ಆದರೆ, ಇದನ್ನು ಅಫ್ಘಾನಿಸ್ಥಾನ ಸರಕಾರ ಅಲ್ಲಗಳೆದಿದೆ. ಇಸ್ಲಾಂ ಖಲಾ ಗಡಿಯು ಸಂಪೂರ್ಣವಾಗಿ ನಮ್ಮ ನಿಯಂತ್ರಣಕ್ಕೆ ಬಂದಿದೆ ಎಂದು ತಾಲಿಬಾನ್ ವಕ್ತಾರ ಝಬೀ ಹುಲ್ಲಾ ಮುಜಾಹಿದ್ ಹೇಳಿದ್ದರೆ, ನಮ್ಮ ಸೇನೆಯು ತಕ್ಕ ಪ್ರತ್ಯುತ್ತರ ನೀಡುತ್ತಿದ್ದು ಹೋರಾಟ ಮುಂದುವರಿದಿದೆ ಎಂದು ಅಫ್ಘನ್ ಸರಕಾರ ಹೇಳಿ ಕೊಂಡಿದೆ.ಇದರ ಜತೆಗೆ ತುರ್ಕ್‌ಮೇನಿಸ್ಥಾನ್ ಜತೆಗೆ ಹೊಂದಿಕೊಂಡಿರುವ ಅಫ್ಘಾನಿಸ್ಥಾನಹೊಂದಿರುವ ಗಡಿ ಪ್ರದೇಶ ಕೂಡ ಉಗ್ರರ ವಶಕ್ಕೆ ಬಂದಿದೆ.ಇನ್ನೊಂದೆ ಡೆ, ಅಫ್ಘಾನ್-ತಜಕಿಸ್ಥಾನದ ಗಡಿಯ ಮೂರನೇ ಎರಡರಷ್ಟು ಭಾಗವನ್ನು ತಾಲಿಬಾನ್ ವಶಕ್ಕೆ ಪಡೆದಿದ್ದು, ಎಲ್ಲೆಡೆಯಿಂದಲೂ ತಕ್ಕ ಪ್ರತ್ಯುತ್ತರ ನೀಡಬೇಕಿದೆ ಎಂದು ರಷ್ಯಾ ಹೇಳಿದೆ.
Related Articles
Advertisement
ಪಾಕ್ ವಿರುದ್ಧ ಆಕ್ರೋಶ: ಎಲ್ಲಿಯವರೆಗೆ ಪಾಕಿಸ್ಥಾನವು ತನ್ನ ನೆಲದಲ್ಲಿ ತಾಲಿಬಾನ್ ಉಗ್ರರಿಗೆ ಆಶ್ರಯ ನೀಡುತ್ತದೋ, ಅಲ್ಲಿಯವರೆಗೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಯೊಂದಿಗೆ ತಾಲಿಬಾನ್ ಮಾತುಕತೆ ನಡೆಸುವುದಿಲ್ಲ ಎನ್ನುವುದು ಸ್ಪಷ್ಟ ಎಂದು ಅಫ್ಘಾನಿಸ್ಥಾನದ ಖ್ಯಾತ ತಜ್ಞ , ಪತ್ರಕರ್ತ ಅಹ್ಮದ್ ರಶೀದ್ ಹೇಳಿದ್ದಾರೆ. ಪಾಕಿಸ್ಥಾನಕ್ಕೆ ನಿಜಕ್ಕೂ ಪ್ರಾಮಾಣಿಕತೆ ಎಂಬುದು ಇದ್ದರೆ ಕೂಡಲೇ ತನ್ನ ನೆಲದಲ್ಲಿರುವ ತಾಲಿಬಾನ್ ನಾಯಕರಿಗೆ “ಸಂಧಾನ ಮಾತುಕತೆ ನಡೆಸುವಂತೆ’ ಅಥವಾ “ಪಾಕ್ ತೊರೆಯುವಂತೆ’ ಖಡಕ್ಕಾಗಿ ಸೂಚಿಸಲಿ. ಪಾಕ್ ತನ್ನ ಲಾಭಕ್ಕಾಗಿ ತಾಲಿಬಾನ್ ಅನ್ನು ಬಳಸಿಕೊಳ್ಳುತ್ತಿದೆ. ಇದು ಹೀಗೇ ಮುಂದುವರಿದರೆ ಅಫ್ಘಾನಿಸ್ಥಾನದ ಅಂತ್ಯವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ರಶೀದ್ ಕಳವಳ ವ್ಯಕ್ತಪಡಿಸಿದ್ದಾರೆ.
ಅಫ್ಘಾನ್‌ನ ಸದ್ಯದ ಪರಿಸ್ಥಿತಿ ಕಳವಳಕಾರಿ. ಹಿಂಸೆ ಯಾವುದಕ್ಕೂ ಪರಿಹಾರವಲ್ಲ. ಮೊದಲು ಆ ದೇಶದಲ್ಲಿನ ಹಿಂಸಾಚಾರ ಕೊನೆಯಾಗಬೇಕು. ದೇಶವನ್ನು ಯಾರು ಆಳಬೇಕು ಎನುವುದನ್ನು ನಿರ್ಲಕ್ಷಿಸಬಾರದು.– ಎಸ್.ಜೈಶಂಕರ್, ವಿದೇಶಾಂಗ ಸಚಿವ