ಕಾಬೂಲ್: ಕೆಲವು ವಾರಗಳ ಕಾಲ ಅಫ್ಘಾನ್ ನಲ್ಲಿ ದೊಂಬಿ ನಡೆಸಿ, ಒಂದೊಂದೇ ಪ್ರದೇಶಗಳನ್ನು ವಶಕ್ಕೆ ಪಡೆದುಕೊಂಡಿದ್ದ ತಾಲಿಬಾನ್ ಉಗ್ರ ಸಂಘಟನೆಗೆ ಇದೀಗ ಅಫ್ಘಾನ್ ಸರ್ಕಾರ ಶರಣಾಗಿದೆ. ಅಫ್ಘಾನ್ ಅಧ್ಯಕ್ಷ ಘನಿ ಉಗ್ರರಿಗೆ ಅಧಿಕಾರ ಹಸ್ತಾಂತರ ನಡೆಸಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರು ಮಾಜಿ ಆಂತರಿಕ ಸಚಿವ ಅಲಿ ಅಹ್ಮದ್ ಜಲಾಲಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ತಾಲಿಬಾನ್ ನ ಉಪ ನಾಯಕ ಮುಲ್ಲಾ ಬರದಾರ್ ಕೂಡ ಅಫ್ಘಾನಿಸ್ತಾನಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.
ನಾವು ಕಾಬೂಲ್ ನಲ್ಲಿ ರಕ್ತ ಹರಿಸುವುದಿಲ್ಲ. ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ನಡೆಯಬೇಕು ಎಂದು ತಾಲಿಬಾನ್ ಸೂಚಿಸಿತ್ತು.
ಇದನ್ನೂ ಓದಿ:ಪೋರ್ನೋಗ್ರಫಿ ಸ್ಟಾರ್ ಮಿಯಾ ಕಲೀಫ ಮತೀಯ ವೈಷಮ್ಯದಲ್ಲಿ ಬೆಂದಿದ್ದೇಕೆ..?
ತಾಲಿಬಾನ್‌ಗಳು ಈಗ ದೇಶದಾದ್ಯಂತದ ದಾಳಿಯ ನಡುವೆ ಅಫ್ಘಾನಿಸ್ತಾನದ ಎಲ್ಲ ಗಡಿಗಳನ್ನು ಮುಚ್ಚಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಹೇಳಿದೆ. ಈಗ, ಕಾಬೂಲ್ ವಿಮಾನ ನಿಲ್ದಾಣವೊಂದೇ ದೇಶದಿಂದ ಹೊರಹೋಗುವ ಏಕೈಕ ಮಾರ್ಗವಾಗಿದೆ.
ಕಾಬೂಲ್ ಮೇಲೆ ದಾಳಿ ಮಾಡುವುದಿಲ್ಲ ಮತ್ತು ವರ್ಗಾವಣೆ ಶಾಂತಿಯುತವಾಗಿ ನಡೆಯುತ್ತದೆ ಎಂದು ಅಫ್ಘಾನಿಸ್ತಾನದ ಹಂಗಾಮಿ ಆಂತರಿಕ ಸಚಿವ ಅಬ್ದುಲ್ ಸತ್ತಾರ್ ಮಿರ್ಜ್ಕ್ವಾಲ್ ಭಾನುವಾರ ಹೇಳಿದ್ದಾರೆ. ರಾಜಧಾನಿಯಲ್ಲಿನ ನಿವಾಸಿಗಳ ಸುರಕ್ಷತೆಯನ್ನು ಅಫಘಾನ್ ಪಡೆಗಳು ಖಚಿತಪಡಿಸಿದೆ ಎಂದು ಅವರು ಭರವಸೆ ನೀಡಿದರು.