Advertisement

ಎಎಫ್ ಸಿ ಏಷ್ಯಾ ಕಪ್‌: ಭಾರತಕ್ಕೆ ಸೋಲು

01:00 AM Jan 12, 2019 | |

ಅಬುಧಾಬಿ: “ಎಎಫ್ ಸಿ ಏಷ್ಯನ್‌ ಕಪ್‌ ಫ‌ುಟ್‌ಬಾಲ್‌ ಕೂಟದ ದ್ವಿತೀಯ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ವಿರುದ್ಧ ಸೋತು ನಿರಾಶೆ ಅನುಭವಿಸಿದೆ. 

Advertisement

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಯುಎಇ ಭಾರತವನ್ನು 2-0 ಗೋಲುಗಳಿಂದ ಪರಾಭವಗೊಳಿಸಿತು. ಯುಎಇ ಪರ ಖಫ್ಲಾನ್‌ ಮುಬಾರಕ್‌ (41ನೇ ನಿಮಿಷ) ಹಾಗೂ ಅಲಿ ಅಹ್ಮದ್‌ ಮಬೌRತ್‌ (88ನೇ ನಿಮಿಷ) ಗೋಲು ಹೊಡೆದು ಗೆಲುವಿನ ರೂವಾರಿಗಳಾದರು.

ಈ ಗೆಲುವಿನ ಮೂಲಕ ಯುಎಇ ಭಾರತವನ್ನು ಹಿಂದಿಕ್ಕಿ “ಎ’ ಗುಂಪಿನ ಅಗ್ರಸ್ಥಾನಕ್ಕೇರಿತು. ಜತೆಗೆ 55 ವರ್ಷಗಳ ಬಳಿಕ ಮುಂದಿನ ಸುತ್ತು ಪ್ರವೇಶಿಸುವ ಭಾರತದ ಹಾದಿಯನ್ನು ದುರ್ಗಮಗೊಳಿಸಿತು. ಭಾರತ ತನ್ನ ಅಂತಿಮ ಲೀಗ್‌ ಪಂದ್ಯವನ್ನು ಸೋಮವಾರ ರಾತ್ರಿ ಬಹೆÅàನ್‌ ವಿರುದ್ಧ ಆಡಲಿದೆ. ಕಳೆದ ಏಷ್ಯನ್‌ ಕಪ್‌ ಮುಖಾಮುಖೀಯಲ್ಲೂ ಯುಎಇ ಭಾರತವನ್ನು 2-0 ಅಂತರಗಳಿಂದ ಸೋಲಿಸುತ್ತು. ಅದು 1984ರ ಕೂಟದ ಲೀಗ್‌ ಹಂತದ ಪಂದ್ಯವಾಗಿತ್ತು. ಇದರೊಂದಿಗೆ ಏಷ್ಯನ್‌ ಕಪ್‌ ಫ‌ುಟ್‌ಬಾಲ್‌ ಕೂಟದಲ್ಲಿ ಯುಎಇ ವಿರುದ್ಧ ಆಡಿದ ಎಲ್ಲ 5 ಪಂದ್ಯಗಳಲ್ಲೂ ಪರಾಭವಗೊಂಡಂತಾಯಿತು.

ವ್ಯರ್ಥವಾದ ಅವಕಾಶ: ಟೂರ್ನಿಯ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ ವಿರುದ್ಧ ಅಬ್ಬರದ ಆಟವಾಡಿದ ಭಾರತ, ಆತಿಥೇಯ ಯುಎಇ ವಿರುದ್ಧ ಮಂಕಾಯಿತು. ಮೊದಲರ್ಧದಲ್ಲಿ ಭಾರತಕ್ಕೆ ಗೋಲು ಹೊಡೆಯುವ ಸಾಕಷ್ಟು ಅವಕಾಶ ಲಭ್ಯವಾಗಿತ್ತು. ಆದರೆ ಯುಎಇ ಪ್ರತಿದಾಳಿ ಮೂಲಕ ಸಾಕಷ್ಟು ಒತ್ತಡ ಹೇರಲಾರಂಭಿಸಿತು. ಮೊದಲ ಅವಧಿಯ ಅಂತಿಮ ಹಂತದಲ್ಲಿ ಮುಬಾರಕ್‌ ಗೋಲು ಹೊಡೆಯುವ ಮೂಲಕ ಮುನ್ನಡೆ ತಂದುಕೊಟ್ಟರು.

ದ್ವಿತೀಯಾರ್ಧದಲ್ಲಿ ಭಾರತ ತಂಡದಲ್ಲಿ ಸಣ್ಣ ಮಟ್ಟದ ಬದಲಾವಣೆ ಮಾಡಿಲಾಯಿತಾದರೂ ಇದರಿಂದ ಅದೃಷ್ಟ ಬದಲಾಗಲಿಲ್ಲ. ಕೊನೆಯ ನಿಮಿಷದಲ್ಲಿ ಭಾರತ ಆಕ್ರಮಣ ಆಟಕ್ಕಿಳಿದರೂ ಪ್ರಯೋಜನವಾಗಲಿಲ್ಲ. ನಾಯಕ ಸುನೀಲ್‌ ಚೆಟ್ರಿ ಹಾಗೂ ಮುನ್ಪಡೆ ಆಟಗಾರ ಜೆಜೆ ಲಾಲ್‌ಪೆಖುÉವ ದೊರೆತೆ ಫ್ರೀ-ಕಿಕ್‌ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳದ ಕಾರಣ ಭಾರತಕ್ಕೆ ಖಾತೆ ತೆಗೆಯುವ ಅವಕಾಶ ಕೈತಪ್ಪಿತು. 88ನೇ ನಿಮಿಷದಲ್ಲಿ ಅಲಿ ಅಹ್ಮದ್‌ ಗೋಲು ಹೊಡೆದು ತಂಡಕ್ಕೆ 2-0 ಜಯ ತಂದುಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next