ಪರಿಶೀಲಿಸಿದರು.
Advertisement
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟಾವಿಗೆ ಬಂದ ಬಾಳೆಯನ್ನು ಹಾಪಕಾಮ್ಸ್ ಅಥವಾ ದಲ್ಲಾಳಿಗಳಿಂದ ಐದು ರೂ.ಗೆ ಕೆ.ಜಿಯಂತೆ ಮಾರಾಟ ಮಾಡಿಸುವ ವ್ಯವಸ್ಥೆ ಮಾಡಿಸಲಾಗುವುದು ಎಂದು ತಿಳಿಸಿದರು. ಜಿ.ಪಂ ಸದಸ್ಯ ಹಾಗೂ ರೈತ ಸುಮಿತ್ ಪಾಟೀಲ ಅವರ ಹೊಲದಲ್ಲಿ ಬೆಳೆದ ಬಾಳೆ ಮಾರಾಟವಾಗದೆ ಗಿಡದಲ್ಲೇ ಕೊಳೆಯುತ್ತಿರುವ ಕುರಿತು ಮಾಹಿತಿ ಅರಿತು ಭೇಟಿ ನೀಡಿದ್ದೇವೆ. ಅದರಂತೆ ತಾಲೂಕಿನಾದ್ಯಂತ ಇತರ ಬೆಳೆ ಬೆಳೆದ ರೈತರ ಜಮೀನುಗಳಿಗೂ ಭೇಟಿ ನೀಡಿ ಅವರೆಲ್ಲರಿಗೂ ಆತ್ಮಸ್ಥೈರ್ಯ ತುಂಬುತ್ತಿದ್ದೇವೆ. ಅಲ್ಲದೆ ಅವರು ಬೆಳೆದ ಬೆಳೆಯನ್ನು ಮಾರಾಟ ಮಾಡಿಸಲು ವ್ಯವಸ್ಥೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.