Advertisement

ವಿಶ್ವ ಏರೋಬಿಕ್ಸ್‌ ಜಿಮ್ನಾಸ್ಟಿಕ್‌: ಬೆಂಗಳೂರಿನ ದಿವ್ಯಶ್ರೀಗೆ ಕಂಚು

06:45 AM Aug 10, 2018 | Team Udayavani |

ಬೆಂಗಳೂರು: ಇತ್ತೀಚೆಗೆ ಅಮೆರಿಕದಲ್ಲಿ ಅರಿಝೋನಾದಲ್ಲಿ ನಡೆದ ವಿಶ್ವ ಏರೋಬಿಕ್ಸ್‌ ಜಿಮ್ನಾಸ್ಟಿಕ್‌ ಚಾಂಪಿಯನ್‌ಶಿಪ್‌
ನಲ್ಲಿ ಬೆಂಗಳೂರಿನ ದಿವ್ಯಶ್ರೀ ಮತ್ತು ತಂಡ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

Advertisement

ಏರೋಬಿಕ್ಸ್‌ ಜಿಮ್ನಾಸ್ಟಿಕ್‌ ಟ್ರಯೋ ವಿಭಾಗದಲ್ಲಿ ದಿವ್ಯಶ್ರೀ, ನಿಶಾ ಮತ್ತು ಯೂನಿಕಾ ಭಾರತ ಪ್ರತಿನಿಧಿಸಿದ್ದರು. ಒಟ್ಟಾರೆ 15 ರಾಷ್ಟ್ರದ ಸ್ಪರ್ಧಿಗಳು ಕೂಟದಲ್ಲಿ ಪಾಲ್ಗೊಂಡಿದ್ದರು. ದಿವ್ಯಶ್ರೀ ಮತ್ತು ತಂಡ ಪದಕ ಗೆಲ್ಲುವುದಕ್ಕೂ ಮೊದಲು ಏರೋ ಡ್ಯಾನ್ಸ್‌ ಸೋಲೋ ಹಾಗೂ ಏರೋ ಡ್ಯಾನ್ಸ್‌ ಟ್ರಯೋ ವಿಭಾಗದ ಫೈನಲ್‌ ಹಂತವನ್ನು ಪ್ರವೇಶಿಸಿ ಸ್ವಲ್ಪದರಲ್ಲೇ ಪದಕ ಕಳೆದುಕೊಂಡಿದ್ದರು. ಆದರೆ ಏರೋಬಿಕ್ಸ್‌ ಜಿಮ್ನಾಸ್ಟಿಕ್‌ ಟ್ರಯೋ ವಿಭಾಗದಲ್ಲಿ ಒಟ್ಟಾರೆ 25 ಮಂದಿ ಅರ್ಹತೆ ಪಡೆದುಕೊಂಡಿದ್ದ ಅಂತಿಮ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಸಮಾಧಾನ ಪಟ್ಟುಕೊಂಡರು.

ಮನೋಹರ್‌, ಮುರಳಿಯಿಂದ ತರಬೇತಿ:  ಕಂಚು ಗೆದ್ದಿರುವ ಮೂವರೂ ಜಿಮ್ನಾಸ್ಟಿಕ್‌ ಸ್ಪರ್ಧಿಗಳು ಕೂಡ ಬೆಂಗಳೂರಿನ ಜಯನಗರದಲ್ಲಿ ಮನೋಹರ್‌ ಕಾಮತ್‌ ಮತ್ತು ಮುರಳಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಕಳೆದ 7 ವರ್ಷಗಳಿಂದ ದಿವ್ಯಶ್ರೀ ಜಿಮ್ನಾಸ್ಟಿಕ್‌ ತರಬೇತಿ ಪಡೆಯುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ.

7 ವರ್ಷಗಳಿಂದ ದಿವ್ಯಶ್ರೀ ಅಭ್ಯಾಸ ನಡೆಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಸಲ ಪದಕ ಗೆದ್ದಿರುವುದು ಸಂತಸದ ಸಂಗತಿ.
– ಮನೋಹರ್‌ ಕಾಮತ್‌, ಜಿಮ್ನಾಸ್ಟಿಕ್‌ ಕೋಚ್‌

Advertisement

Udayavani is now on Telegram. Click here to join our channel and stay updated with the latest news.

Next