Advertisement
ಈ ಊಹಾಪೋಹಗಳ ನಡುವೆ ಕೋವಿಡ್ ಸೋಂಕಿನ ವಿರುದ್ಧ ನೀಡಲಾದ ಕೋವಿಶೀಲ್ಡ್ ಲಸಿಕೆಯ ಪ್ರತಿ ಹತ್ತು ಲಕ್ಷ ಡೋಸ್ ಪೈಕಿ 0.61 ಡೋಸ್ ನಲ್ಲಿ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವದ ಸಮಸ್ಯೆಗಳು ಭಾರತದಲ್ಲಿ ಕಂಡುಬದಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು(ಸೋಮವಾರ, ಮೇ.17) ತಿಳಿಸಿದೆ.
Related Articles
Advertisement
ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ 10 ಲಕ್ಷ ಡೋಸ್ ಗಳಲ್ಲಿ 0.61 ಪ್ರಕರಣಗಳು ಈ ರೀತಿ ವರದಿ ಆಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.
ಕೋವಿಶೀಲ್ಡ್ ಹೆಸರಿನಲ್ಲಿ ಉತ್ಪಾದನೆಯಾಗುವ ಅಸ್ಟ್ರಾಜೆನೆಕಾ-ಆಕ್ಸ್ ಫರ್ಡ್ ಲಸಿಕೆ ಬಗ್ಗೆ ಮಾರ್ಚ್ 11, 2021 ರಂದು ಲಸಿಕೆ ಅಭಿಯಾನದ ನಂತರದ ‘ಎಂಬಾಲಿಕ್ ಮತ್ತು ಥ್ರಂಬೋಟಿಕ್ ಪ್ರಕರಣಗಳ’ ಕುರಿತು ಕೆಲವು ದೇಶಗಳಲ್ಲಿ ಎಚ್ಚರಿಕೆಗಳನ್ನು ನೀಡಲಾಗಿತ್ತು.
ಜಾಗತಿಕ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕೂಲ ಸಮಸ್ಯೆಗಳ ಆಳವಾದ ವಿಶ್ಲೇಷಣೆ ನಡೆಸಲು ಕೇಂದ್ರವು ನಿರ್ಧರಿಸಿತ್ತು.
ಭಾರತದಲ್ಲಿ ಕೋವಿಡ್ 19 ಲಸಿಕೆ ಅಭಿಯಾನದ ನಂತರ ರಕ್ತಸ್ರಾವ ಹಾಗೂ ಹೆಪ್ಪುಗಟ್ಟುವಿಕೆ ಪ್ರಕರಣಗಳು ಕಡಿಮೆ ಮತ್ತು ದೇಶದಲ್ಲಿ ಈ ಪರಿಸ್ಥಿತಿಗಳ ರೋಗನಿರ್ಣಯದ ನಿರೀಕ್ಷೆಗೆ ಅನುಗುಣವಾಗಿರುತ್ತವೆ ಎಂದು ರಾಷ್ಟ್ರೀಯ ಎಇಎಫ್ಐ ಸಮಿತಿಯು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಇನ್ನು, ರಾಷ್ಟ್ರೀಯ ಎಇಎಫ್‌ಐ ಸಮಿತಿ 2021 ರ ಏಪ್ರಿಲ್ 3 ರ ವೇಳೆಗೆ ಕೋವಿಶೀಲ್ಡ್ 68,650,819 ಹಾಗೂ ಕೊವಾಕ್ಸಿನ್ 6,784,562 ಲಸಿಕೆಯ ಡೋಸ್ ನೀಡಲಾಗಿತ್ತು. ಅಂದಾಜು ಕನಿಷ್ಠ 7.5 ಕೋಟಿ (75,435,381) ಲಸಿಕೆ ಡೋಸ್ ನೀಡಲಾಗಿತ್ತು.
ಕೋವಿಡ್ 19 ಲಸಿಕೆ ಆಬಿಯಾನವನ್ನು ಜನವರಿ 16, 2021 ರಂದು ದೇಶದಾದ್ಯಂತ ಪ್ರಾರಂಭಿಸಿದಾಗಿನಿಂದ, ದೇಶದ 753 ಜಿಲ್ಲೆಗಳಲ್ಲಿ 684 ರಿಂದ ಕೋ-ವಿನ್ ಮೂಲಕ ಕನಿಷ್ಠ 23,000 ಪ್ರತಿಕೂಲ ಸಮಸ್ಯೆಗಳು ವರದಿಯಾಗಿವೆ. ಇವುಗಳಲ್ಲಿ ವರದಿಯ ಪ್ರಕಾರ ಕೇವಲ 700 ಪ್ರಕರಣಗಳು ಪ್ರತಿ ಹತ್ತು ಲಕ್ಷ ಡೋಸ್ ಗೆ 9.3 ಪ್ರಕರಣಗಳ ದರದಲ್ಲಿ ಗಂಭೀರ ಮತ್ತು ತೀವ್ರ ಸ್ವರೂಪದಲ್ಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಕೋವಿಡ್ ಹೆಚ್ಚಳ: ಮೇ 31ರವರೆಗೆ ಕೋವಿಡ್ 19 ಕರ್ಫ್ಯೂ ವಿಸ್ತರಣೆ: ಆಂಧ್ರಪ್ರದೇಶ