Advertisement

Adyanadka ಕರ್ಣಾಟಕ ಬ್ಯಾಂಕ್‌ ಕಳ್ಳತನ ಪ್ರಕರಣ: ಪೊಲೀಸರ ತನಿಖೆಯಲ್ಲಿ ಪ್ರಗತಿ

12:50 AM Mar 02, 2024 | Team Udayavani |

ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‌ ಕಳ್ಳತನ ಪ್ರಕರಣವಾಗಿ ತಿಂಗಳಾಗುತ್ತ ಬಂದಿದ್ದು, ಪೊಲೀಸರು ತನಿಖೆಯಲ್ಲಿ ಪ್ರಗತಿಯನ್ನು ಸಾಧಿಸಿ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆನ್ನಲಾಗಿದೆ.

Advertisement

ಪೆರ್ಲದಲ್ಲಿ ವಾಹನದ ಗುರುತು ಹಾಗೂ ನಂಬರ್‌ಪ್ಲೇಟ್‌ ಪತ್ತೆ ಮಾಡಲಾಗಿತ್ತಾದರೂ, ಅದರಿಂದ ಕಳ್ಳರ ಪತ್ತೆಯನ್ನು ಮಾಡಲು ಸಾಧ್ಯವಾಗಿಲ್ಲ. ತಾಂತ್ರಿಕ ತನಿಖೆಯ ಮೂಲಕ ಕೃತ್ಯಕ್ಕೆ ಕಾರಣರಾದವರ ಮಾಹಿತಿಯನ್ನು ಸಂಗ್ರಹಿಸಿದ ಪೊಲೀಸರು ಪ್ರಮುಖ ಆರೋಪಿಗಳನ್ನು ಎರಡು ದಿನಗಳ ಹಿಂದೆ ವಶಕ್ಕೆ ಪಡೆದುಕೊಂಡಿದ್ದಾರೆ. ಮಾಹಿತಿಯ ಪ್ರಕಾರ ಕೇರಳದಲ್ಲಿ ಬೀಡು ಬಿಟ್ಟಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ನಗದು ಹಾಗೂ ಚಿನ್ನಾಭರಣವನ್ನು ಪಾಲು ಮಾಡಿ ಕೊಂಡು ಹಂಚಿಕೊಂಡ ಮಾಹಿತಿ ಕಳ್ಳರಿಂದಲೇ ಪಡೆದುಕೊಂಡಿದ್ದಾರೆನ್ನಲಾಗಿದೆ.

ಬ್ಯಾಂಕ್‌ ಕಟ್ಟಡದ ಹಿಂಬಾಗಿಲಿನ ಕಿಟಕಿಯನ್ನು ತುಂಡರಿಸಿ ಒಳ ನುಗ್ಗಿದ ಕಳ್ಳರು ಸೇಫ್‌ ಲಾಕರ್‌ ಬಾಗಿಲು ತುಂಡರಿಸಿ, ಲಾಕರ್‌ ಒಳಗಿದ್ದ ನಗದು ಹಾಗೂ ಚಿನ್ನಾಭರಣವನ್ನು ಫೆ.7ರ ರಾತ್ರಿ ದೋಚಿದ್ದರು. ಬ್ಯಾಂಕ್‌ ಕಳ್ಳತನ ನಡೆಯುತ್ತಿದ್ದಂತೆ ವಾಹನದ ಗುರುತು ಪತ್ತೆ ಮಾಡಿ, ಸ್ಥಳೀಯ ಇಬ್ಬರನ್ನು ಅನುಮಾನದ ಮೇಲೆ ವಿಚಾರಣೆಯನ್ನು ನಡೆಸಿ ಬಿಡುಗಡೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next