ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿರುವ ಹ್ಯುಂಡೈ ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಹ್ಯುಂಡೈ “ವೆನ್ಯೂ’ ಕಾರನ್ನು ರೆಸಿಡೆನ್ಸಿ ರಸ್ತೆಯ ಅದ್ವೈತ್ ಹ್ಯುಂಡೈ ಶೋರೂಂನಲ್ಲಿ ಅನಾವರಣಗೊಳಿಸಲಾಯಿತು.
ಬಹುನಿರೀಕ್ಷಿತ ವೆನ್ಯೂ ಕಾರನ್ನು ಹ್ಯುಂಡೈ ಮೋಟಾರ್ ಇಂಡಿಯಾ ಲಿ.,ನ ಮಾರಾಟ ವ್ಯವಸ್ಥಾಪಕ (ಟೆರ್ರಿಟರಿ) ಸರೋಜ್ ಗುಪ್ತಾ ಹಾಗೂ ಅದ್ವೈತ್ ಹ್ಯುಂಡೈ ಮಾರುಕಟ್ಟೆ ವಿಭಾಗದ ನಿರ್ದೇಶಕ ಎಲ್.ಎನ್. ಅಜಯ್ ಸಿಂಗ್ ಅವರು ಮಂಗಳವಾರ ಬಿಡುಗಡೆ ಮಾಡಿದರು.
ಕಾಂಪ್ಯಾಕ್ಟ್ ಎಸ್‌ಯುವಿ ಕೃತಕ ಬುದ್ಧಿಮತ್ತೆ ಮತ್ತು ಬ್ಲೂಲಿಂಕ್ ತಂತ್ರಜ್ಞಾನ ಆಧರಿತ ಸಂವಹನ ಸೌಲಭ್ಯ ಒಳಗೊಂಡಿರುವ ಈ ಕಾರು, ಮೂರು ಬಗೆಯ ಎಂಜಿನ್ (ಕಪ್ಪಾ 1.0 ಟಬೋì ಜಿಡಿಐ ಪೆಟ್ರೋಲ್, 1.2 ಪೆಟ್ರೋಲ್, 1.4 ಡೀಸೆಲ್) ಹಾಗೂ 7 ಸೀಡ್ ಡ್ನೂಯೆಲ್ ಕ್ಲಚ್ ಟ್ರಾನ್ಸ್‌ಮಿಷನ್ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನದ ಸದೃಢ (ಎಎಚ್‌ಎಸ್‌ಎಸ್ ಪ್ಲಸ್ ಎಚ್‌ಎಸ್‌ಎಸ್) ಸೀrಲ್ ಬಾಡಿಯನ್ನು ವೆನ್ಯೂ ಸೊಂದಿದ್ದು, ಇದಕ್ಕಾಗಿ ಸಂಸ್ಥೆ 4 ವರ್ಷಗಳ ಪರಿಶ್ರಮ, 690 ಕೋಟಿ ರೂ. ಹೂಡಿಕೆ ಮಾಡಿದೆ.
ಯುವಜನರ ಆಕರ್ಷಣೆ: ಅತ್ಯಾಕರ್ಷಕ ಒಳಾಂಗಣವುಳ್ಳ ವೆನ್ಯೂನಲ್ಲಿ ಆರು ಏರ್‌ಬ್ಯಾಗ್, ಆಟೋ ಡೋರ್ ಲಾಕ್, ಎಲೆಕ್ಟ್ರಿಕ್ ಸನ್‌ರೂಫ್ ಕ್ರೂಸ್ ಕಂಟ್ರೋಲ್, ಎಲ್‌ಇಡಿ ಬ್ರೇಕ್ ಲೈಟ್, ಎಲ್‌ಇಡಿ ಹೆಡ್‌ಲ್ಯಾಂಪ್‌ನಂತಹ ಸುರಕ್ಷತಾ ಅಂಶಗಳನ್ನು ಹೊಂದಿದೆ.
ಯುವಜನರನ್ನು ಹೆಚ್ಚು ಆಕರ್ಷಿಸಲಿರುವ ವೆನ್ಯೂ ಬಿಡುಗಡೆಗೆ ಮುನ್ನ ನಮ್ಮ ಅದ್ವೈತ್ ಹ್ಯುಂಡೈ ಶೋರೂಂ ಒಂದರಲ್ಲೇ 150 ಕಾರುಗಳು ಬುಕ್ಕಿಂಗ್ ಆಗಿವೆ ಎಂದು ಅದ್ವೈತ್ ಹ್ಯುಂಡೈ ಮಾರಾಟ ವಿಭಾಗದ ಪ್ರಧಾನ ವ್ಯವಸ್ಥಾಪಕ ಪ್ರೇಮ್‌ಕುಮಾರ್ ನಾಯರ್ ತಿಳಿಸಿದ್ದಾರೆ.
ವೆನ್ಯೂ ಪೆಟ್ರೋಲ್ ಚಾಲಿತ ಎಸ್‌ಯುವಿ ಬೆಲೆ (ದೆಹಲಿ ಎಕ್ಸ್‌ಶೋರೂಂ) 6.5 ಲಕ್ಷ ರೂ.ನಿಂದ 11.1 ಲಕ್ಷ ಹಾಗೂ ಡೀಸೆಲ್ ಎಂಜಿನ್ ಬೆಲೆ 7.75 ಲಕ್ಷ ರೂ.ನಿಂದ 10.84 ಲಕ್ಷ ರೂ.