Advertisement

ಸರ್ಕಾರದ ಯೋಜನೆ ಸದಳಕೆಗ್ಬೆ ಸಲಹೆ

03:57 PM Sep 28, 2020 | Suhan S |

ಪಾತಪಾಳ್ಯ: ಗ್ರಾಮೀಣ ಪ್ರದೇಶದ ಹಳ್ಳಿಗಳ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಯೋಜನೆಗಳ ಬಗ್ಗೆ ಅರಿಯಬೇಕೆಂದು ಶಾಸಕ ಎಸ್‌.ಎನ್‌. ಸುಬ್ಟಾರೆಡ್ಡಿ ತಿಳಿಸಿದರು.

Advertisement

ಪೋಲನಾಯಕನಪಲ್ಲಿ ಗ್ರಾಪಂನ ಬೂಡದಿಗಡ್ಡಪ ‌ ಲ್ಲಿ ಗ್ರಾಮದ ಬಳಿ ನೂತನವಾಗಿ ನಿರ್ಮಿಸಿರುವ ಎಸ್‌.ಎನ್‌.ಸುಬ್ಟಾ ರೆಡ್ಡಿ ನವಗ್ರಾಮ ಮಹಾದ್ವಾರ ಉದ್ಘಾಟನೆ ಹಾಗೂ 85 ಆಶ್ರಯ ನಿವೇಶನಗಳ ಹಕ್ಕು ಪತ್ರ ವಿತರಣಾಕಾರ್ಯಕ್ರಮ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಮನೆ, ನಿವೇಶನ ಇಲ್ಲದೆ ನಿರ್ಗತಿಕರು ಸಾಕಷ್ಟು ಜನ ಇದ್ದಾರೆ. ಅವರನ್ನು ಗುರುತಿಸುವ ಕೆಲಸವಾಗಬೇಕು. ಅಧಿಕಾರದಲ್ಲಿರುವಷ್ಟು ದಿನ ಜನಕ್ಕೆ ಉಪಯೋಗವಾಗುವಂತಹ ಕೆಲಸ ಮಾಡಬೇಕು. ಮಾಡಿದ  ಕೆಲಸಕ್ಕೆ ಪ್ರತಿಫ‌ಲ ಅಪೇಕ್ಷಿಸಬಾರದು. ಅಧಿಕಾರಿಗಳು ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವುದರ ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಬರುವ ಸೋಪ್‌ಫಿಟ್‌, ಕೈತೋಟ, ಅಣಬೆ ಬೇಸಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಗ್ರಾಮ ನೈರ್ಮಲ್ಯ, ಪರಿಸರ ಅಭಿವೃದ್ಧಿ ಬಗ್ಗೆ ಜನ ರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜಿಪಂ ಸದಸ್ಯ ನರಸಿಂಹಪ್ಪ, ತಾಪಂ ಅಧ್ಯಕ್ಷ ನರೇಂದ್ರಬಾಬು, ಸ್ಥಾಯಿ ಸಮಿತಿ ತಾಲೂಕು ಅಧ್ಯಕ್ಷ ಮಂಜುನಾಥ, ಕೋಚಿ ಮಲ್‌ ನಿರ್ದೇಶಕ ವಿ.ಮಂಜುನಾಥರೆಡ್ಡಿ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಪ್ರಭಾ ಕರರೆಡ್ಡಿ, ಇ.ಒ.ಮಂಜುನಾಥಸ್ವಾಮಿ, ತಹ ಶೀಲ್ದಾರ್‌ ನಾಗರಾಜ್‌, ಮುಖಂಡರಾದ ಪಿ.ವೆಂಕಟರವಣಪ್ಪ, ಎ.ಸತ್ಯನಾರಾಯಣ ರಾವ್‌, ಶಿವಶಂಕರರೆಡ್ಡಿ, ಮುರಳಿ ಮೋಹನ್‌, ಪಿಡಿಒ ಅಯೂಬ್‌ಪಾಷಾ, ಗ್ರಾಪಂಕಾರ್ಯದರ್ಶಿ ವೆಂಕಟರವಣಪ್ಪ,ಕರ ವಸೂಲಿಗಾರ ಎ.ರಾಜಶೇಖರರಾವ್‌ ಇದ್ದರು.

…………………………………………………………………………………………………………………………………………………………………

ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ : ಚಿಂತಾಮಣಿ: ಎಸ್ಟರ್‌ ಆಸ್ಪತ್ರೆ, ಅಶೋಕ್‌ ಲೇಲ್ಯಾಂಡ್‌ ಮತ್ತು ಟ್ರಿನಿಟಿ ಕೇರ್‌ ಫೌಂಡೇಷನ್‌ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಟ್ರಿನಿಟಿ ಕೇರ್‌ ಪೌಂಡೇಷನ್‌ನ ಸಿರಾಜುದ್ದೀನ್‌, ಜಿಲ್ಲೆಯ ಹಲವು ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಮಾಡಿದ್ದು, ಇಲ್ಲಿಯಪೌರಕಾರ್ಮಿಕರಿಗೆನಗರಸಭೆ ಆವರಣದಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಕೋವಿಡ್‌ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಹೋಗದೆ ಕೆಲಸ ನಿರ್ವಹಿಸಿದ್ದು, ಅದಕ್ಕಾಗಿ ಸಾಮಾನ್ಯ ತಪಾಸಣೆ ಹಮ್ಮಿಕೊಂಡಿರುವುದಾಗಿ ಹೇಳಿದರು. ಈ ವೇಳೆ ಫೌಂಡೇಷನ್‌ನ ಡಾ.ಪ್ರದೀಪ್‌, ಪರಶುರಾಮ್‌, ಮೊಹಮ್ಮದ್‌ ರಫೀಕ್‌, ನಗರಸಭೆಯಹಿರಿಯ ಆರೋಗ್ಯಅಧಿಕಾರಿಆರತಿ, ಕಿರಿಯ ಅಧಿಕಾರಿ ಪ್ರತಿಭಾ ಸೇರಿದಂತೆ ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು ಉಪಸ್ಥಿತರಿದ್ದು, ಆರೋಗ್ಯ ತಪಾಸಣೆಗೆ ಒಳಗಾದರು.

Advertisement

Udayavani is now on Telegram. Click here to join our channel and stay updated with the latest news.

Next