ಮುಂಬಯಿ : ಕ್ಯಾನ್ಸರ್ ರೋಗಿಗಳನ್ನು ಖಾಸಗಿ ಪ್ರಯೋಗಾಲಯಗಳಿಗೆ ಕಮಿಷನ್‌ಗಾಗಿ ಶಿಫಾರಸು ಮಾಡಿದ ಆರೋಪದ ಮೇಲೆ ನಗರದ ಟಾಟಾ ಸ್ಮಾರಕ ಆಸ್ಪತ್ರೆಯ ಕೆಲ ನೌಕರರು ಸೇರಿ 11 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಅಣುಶಕ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಯು ಸುಧಾರಿತ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನೆಗೆ ಹೆಸರುವಾಸಿಯಾಗಿದ್ದು, ದೇಶಾದ್ಯಂತದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ಕೆಲವು ಉದ್ಯೋಗಿಗಳು ಆಸ್ಪತ್ರೆಯಲ್ಲಿ ಸ್ಕ್ಯಾನ್‌ಗಾಗಿ ದೀರ್ಘ ಕಾಯಬೇಕಾಗುತ್ತದೆ ಎಂದು ಹೇಳಿ ಖಾಸಗಿ ಇಮೇಜಿಂಗ್ ಸೆಂಟರ್ ಗಳು ಮತ್ತು ಪ್ರಯೋಗಾಲಯಗಳಲ್ಲಿ ರೋಗನಿರ್ಣಯದ ಸ್ಕ್ಯಾನ್ ಮಾಡುವಂತೆ ರೋಗಿಗಳನ್ನು ಕೇಳಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಸಹಾಯಕ ಆಡಳಿತಾಧಿಕಾರಿ, ವಾರ್ಡ್‌ಬಾಯ್, ಆಯಾ, ಸೇವಕ ಮತ್ತು ಸ್ವಚ್ಛತಾ ಸಿಬಂದಿ ಸೇರಿದ್ದಾರೆ.
ಬಂಧಿತರು ಖಾಸಗಿ ಲ್ಯಾಬ್‌ಗಳಿಂದ ಕಮಿಷನ್ ಪಡೆದಿದ್ದುಅವರ ದರಗಳು ಆಸ್ಪತ್ರೆಯಲ್ಲಿದ್ದಕ್ಕಿಂತ ಹೆಚ್ಚಾಗಿದೆ ಎಂದು ಅಧಿಕಾರಿ ಹೇಳಿದರು. ಹೀಗಾಗಿ ಆರೋಪಿಗಳು ರೋಗಿಗಳಿಗೆ ಹಾಗೂ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ.
ಆಸ್ಪತ್ರೆಯ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಖಾಸಗಿ ಪ್ರಯೋಗಾಲಯದ ಉದ್ಯೋಗಿ ಸೇರಿದಂತೆ 21 ಜನರ ವಿರುದ್ಧ ಜುಲೈ 16 ರಂದು ಭೋಯಿವಾಡ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿ 11 ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.