Advertisement

ವರ್ಕ್‌ ಫ್ರಂ ಹೋಂ ಮುಂದುವರಿಸಲು ಸಲಹೆ

04:13 PM Aug 25, 2021 | Team Udayavani |

ಬೆಂಗಳೂರು: ಹೊರವರ್ತುಲ ರಸ್ತೆ(ಓಆರ್‌ಆರ್‌)ಯಲ್ಲಿ “ನಮ್ಮ ಮೆಟ್ರೋ’ಕಾಮಗಾರಿ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು 2022ರ ಡಿಸೆಂಬರ್‌ವರೆಗೆ ಮನೆಯಿಂದಲೇಕೆಲಸ (ವರ್ಕ್‌ ಫ್ರಂ ಹೋಂ) ಪದ್ಧತಿಯನ್ನು ಮುಂದುವರಿಸುವುದು ಸೂಕ್ತ!

Advertisement

– ಸರ್ಕಾರ ಇಂತಹದ್ದೊಂದು ಸಲಹೆಯನ್ನು ಐಟಿ ಕಂಪನಿಗಳ ಮುಂದಿಟ್ಟಿದೆ. ಕೋವಿಡ್‌ ಹಾವಳಿ ಹಿನ್ನೆಲೆಯಲ್ಲಿ ಈಗಾಗಲೇ ಕಳೆದ ಒಂದು ವರ್ಷದಿಂದಲೂ ಬಹುತೇಕ ಐಟಿ ಕಂಪನಿಗಳು ವರ್ಕ್‌ ಫ್ರಂ ಹೋಂ ವ್ಯವಸ್ಥೆ ಅಳವಡಿಸಿ ಕೊಂಡಿವೆ. ಇದೇ ಪದ್ಧತಿಯನ್ನು ಕಂಪನಿಗಳು ಅದರಲ್ಲೂ ವಿಶೇಷವಾಗಿ ಓಆರ್‌ಆರ್‌ ಮಾರ್ಗದಲ್ಲಿ ಬರುವ ಟೆಕ್‌ ಪಾರ್ಕ್‌ಗಳು, ಕಂಪನಿಗಳು 2022ರ ಡಿಸೆಂಬರ್‌ವರೆಗೆ ಮುಂದುವರಿಸುವುದು ಸೂಕ್ತ.

ಅಲ್ಲದೆ,ಕಚೇರಿಗೆಬರಲೇಬೇಕಾದ ಸಿಬ್ಬಂದಿಯ ಕೆಲಸದ ಅವಧಿಯನ್ನು ಪರಿಷ್ಕರಿಸಬೇಕು ಹಾಗೂ ಬಿಎಂಟಿಸಿಯಂತಹ ಸಮೂಹ ಸಾರಿಗೆ ಬಳಕೆಗೆ ಪ್ರೋತ್ಸಾಹಿಸಬೇಕು ಎಂದು ಎಲೆಕ್ಟ್ರಾನಿಕ್‌,ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ:ಇಂಡಿಯನ್ ಐಡಲ್ 12: ಪ್ರಶಸ್ತಿ ವಿಜೇತ ಪವನ್ ದೀಪ್ ಉತ್ತರಾಖಂಡ್ ನ ಬ್ರ್ಯಾಂಡ್ ಅಂಬಾಸಿಡರ್

ಈ ಸಂಬಂಧ ರಾಷ್ಟೀಯ ಸಾಫ್ಟ್ ವೇರ್‌ ಮತ್ತು ಸೇವಾ ಕಂಪನಿಗಳ ಸಂಘ (ನ್ಯಾಸ್ಕಾಂ) ಪ್ರಾದೇಶಿಕ ನಿರ್ದೇಶಕರಿಗೆ ಪತ್ರ ಬರೆದಿರುವ ಡಾ.ರಮಣರೆಡ್ಡಿ, “ಸಂಚಾರದಟ್ಟಣೆ ಉಂಟಾಗದಿರಲು ಹಾಗೂ ಮೆಟ್ರೋ ಕಾಮಗಾರಿ ಯಾವುದೇ ಅಡತಡೆ ಇಲ್ಲದೆ ಸಾಗಲು ವರ್ಕ್‌ ಫ್ರಂ ಹೋಂ ಪದ್ಧತಿಯನ್ನು ಇನ್ನೂಒಂದೂವರೆ ವರ್ಷ ಮುಂದುವರಿಸಲು ಕೋರಲಾಗಿದೆ. ಇದೊಂದು ಸಲಹೆ ಅಷ್ಟೇ’ ಎಂದು ತಿಳಿಸಿದ್ದಾರೆ.

Advertisement

ಓಆರ್‌ಆರ್‌ನಲ್ಲಿ ಅಂದರೆ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌. ಪುರಂ ನಡುವೆ “ನಮ್ಮ ಮೆಟ್ರೋ’ ಎರಡನೇ ಹಂತದ 2ಎ ಅಡಿ ಎತ್ತರಿಸಿದ ಮಾರ್ಗ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಇದು ಒಂದೂವರೆಯಿಂದ ಎರಡು ವರ್ಷ ಮುಂದುವರಿಯಲಿದೆ. ಐಟಿ ಹಬ್‌ ಆಗಿರುವ ಉದ್ದೇಶಿತ ಮಾರ್ಗವು ಈ ಮೊದಲೇ ಅತ್ಯಧಿಕ ಸಂಚಾರ ದಟ್ಟಣೆ ಇರುವ ರಸ್ತೆಯಾಗಿದೆ. “ಪೀಕ್‌ಅವರ್‌’ನಲ್ಲಂತೂಹೆಜ್ಜೆ-ಹೆಜ್ಜೆಗೂ ಇಲ್ಲಿ ವಾಹನ ಸವಾರರು ಪರದಾಡುತ್ತಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರವು ಆರು ಪಥದ ರಸ್ತೆಯಲ್ಲಿ “ಬಸ್‌ ಆದ್ಯತಾ ಪಥ’ (ಬಿಪಿಎಲ್‌), ಬೈಸಿಕಲ್‌ ಪಥ ನಿರ್ಮಾಣ, ಸಮೂಹ ಸಾರಿಗೆ ಪ್ರೋತ್ಸಾಹ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ ಕೋವಿಡ್‌ ಪೂರ್ವದಲ್ಲಿ ಸಂಚಾರದಟ್ಟಣೆ ವಿಪರೀತ ಇರುವುದನ್ನು
ಕಾಣಬಹುದು. ಈ ಮಧ್ಯೆ ಮೆಟ್ರೋ ಕಾಮಗಾರಿ ಬೇರೆ ಕೈಗೆತ್ತಿಕೊಳ್ಳಲಾಗಿದ್ದು, ಸಹಜಸ್ಥಿತಿಗೆ ಮರಳಿದರೆ, ವಾಹನ ಸವಾರರು ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಆದ್ದರಿಂದ ವರ್ಕ್‌ ಫ್ರಂ ಹೋಂ ವ್ಯವಸ್ಥೆ ಮುಂದುವರಿಕೆ ಹಾಗೂ ಸಮೂಹ ಸಾರಿಗೆ ಬಳಕೆಗೆ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next