Advertisement

ಯೋಜನೆ ಸದುಪಯೋಗಕ್ಕೆ ಸಲಹೆ

09:15 PM Dec 28, 2021 | Team Udayavani |

ಬಸವನಬಾಗೇವಾಡಿ: ಕೇಂದ್ರ ಸರ್ಕಾರ ನಿಗದಿ ಪಡಿಸಿದ ದರದಲ್ಲೇ ಬೀಜ, ರಸಗೊಬ್ಬರ, ಕೀಟನಾಶಕ ಔಷಧಗಳನ್ನು ಜುವಾರಿ ಫಾರ್ಮ್ ಹಬ್‌ ಲಿಮಿಟೆಡ್‌ ಕೈ ಕಿಸಾನ್‌ ಮಳಿಗೆಯಲ್ಲಿ ಮಾರಾಟವಾಗುತ್ತಿದ್ದು. ರೈತರು ಯೋಜನೆ ಲಾಭವನ್ನು ಪಡೆಯಬೇಕೆಂದು ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಹೇಳಿದರು.

Advertisement

ತಾಳಿಕೋಟಿ ರಸ್ತೆಯ ಮಿನಿವಿಧಾನಸೌಧ ಬಳಿಯಲ್ಲಿ ಇರುವ ಫಾರ್ಮ ಹಬ್‌ ಲಿಮಿಟೆಡ್‌ ಕೈ ಕಿಸಾನ್‌ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದವರು ಈ ಮಳಿಗೆಯಲ್ಲಿ ರೈತರು ಬೀಜ, ರಸಗೊಬ್ಬರ, ಕೀಟನಾಶಕ ಔಷಧಗಳನ್ನು ಖರೀದಿ ಸುವದರಿಂದ ಸರ್ಕಾರ ನಿಗದಿ ಮಾಡಿದದರದಲ್ಲೇ ದೊರೆಯುತ್ತದೆ. ಇದರಲ್ಲಿಯಾರು ಮಧ್ಯವರ್ತಿಗಳು ಬರುವಿದಿಲ್ಲ ಎಂದು ಹೇಳಿದರು. ಸೀನಿಯರ್‌ ಮ್ಯಾನೇಜರ್‌ (ಕೊಲ್ಹಾರ) ಶಿವಾನಂದ ಬಗಲಿ ಅಧ್ಯಕ್ಷತೆ ವಹಿಸಿದ್ದರು.

ಪ್ರಗತಿ ಪರ ರೈತರಾದ ಅÊಣ್ಣ ‌Ì ಗ್ವಾತಗಿ, ಸಂಗನಗೌಡ ಯಂಕಂಚಿ, ಸಿಬ್ಬಂದಿ ಅಮರನಾಥ ಕುಮಟಗಿ, ಸಿದ್ಧು ತೆಗ್ಗಿ, ಕಿಶೋರ ರೊಳ್ಳಿ, ಮಹೇಶ ಜಗತಾಪ, ಪ್ರಜ್ವಲ ಹಂಡಿ ಇದ್ದರು. ರಾಜುಗೌಡ ಪಾಟೀಲ ಸ್ವಾಗತಿಸಿದರು. ಶಿವಾನಂದ ನಿರೂಪಿಸಿದರು. ಸುರೇಶ ಲಿಗಾಡೆ ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next