Advertisement
ಎನ್‌ಸಿಪಿಓಸಿ ವತಿಯಿಂದ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ “ಮಕ್ಕಳ ಮೇಲಿನ ಲೈಂಗಿಕ ಶೋಷಣೆ’ತಡೆಯುವ ಕುರಿತ ಸರ್ಕಾರದ ಅಂಗಸಂಸ್ಥೆಗಳು ಸ್ವಯಂಸೇವಾ ಸಂಘಟನೆಗಳು, ತಜ್ಞರ ಜತೆಗಿನ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಲೈಂಗಿಕ ಶೋಷಣೆ ಮಾಡಲು ಸಾಗಾಟ ಮಾಡುವ ಜಾಲ ನಿಯಂತ್ರಿಸಬೇಕಾದರೆ ಕಾನೂನು ಜಾರಿ ಸಂಸ್ಥೆಗಳ ಬಳಿ ಸಮರ್ಪಕ ಮಾಹಿತಿ, ಸೂಕ್ತ ಅಂಕಿ-ಸಂಖ್ಯೆ ಇರಬೇಕು.
ಅದಕ್ಕಾಗಿ ರಾಜ್ಯಮಟ್ಟದಲ್ಲಿ ಚೈಲ್ಡ್‌ಗ್ರಿಡ್ ಸ್ಥಾಪನೆಯಾಗಬೇಕೆಂದು ಹೇಳಿದರು.
ಜಾಗೃತಿ ಮೂಡಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಮಕ್ಕಳನ್ನು ಸುಶಿಕ್ಷಿತ ಮತ್ತು ಜಾಗೃತರನ್ನಾಗಿ ಮಾಡಿದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮಕ್ಕಳ ಹಕ್ಕುಗಳ ರಕ್ಷಣೆ ಅದರಲ್ಲೂ ವಿಶೇಷವಾಗಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ, ಬಾಲವೇಶ್ಯಾವಾಟಿಕೆ ತಡೆಗಟ್ಟುವುದು ಕೇವಲ ಸರ್ಕಾರ, ಸರ್ಕಾರಿ ಅಂಗಸಂಸ್ಥೆಗಳ ಹೊಣೆಗಾರಿಕೆ ಅಲ್ಲ, ಇದು ಇಡೀ ಸಮಾಜದ ಜವಾಬ್ದಾರಿ. ಕಡ್ಡಾಯ ಶಿಕ್ಷಣ ನೀಡುವ ಆರ್‌ಟಿಇ ಕಾಯ್ದೆಯಡಿ 18 ವರ್ಷದವರೆಗಿನ ಮಕ್ಕಳನ್ನು ಪರಿಗಣಿಸಬೇಕು. ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಗ್ರಾಹಕರು ಮತ್ತು ಬೇಡಿಕೆಗೆ ಮಟ್ಟ ಹಾಕಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಆದರೆ, ಮಕ್ಕಳ ಅಕ್ರಮ ಸಾಗಾಟದ ಜಾಲವನ್ನೇ ಮಟ್ಟ ಹಾಕಿದರೆ, ಗ್ರಾಹಕರು ಮತ್ತು ಬೇಡಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಅನ್ನುವುದು ನನ್ನ ಅಭಿಪ್ರಾಯ ಎಂದರು.
Related Articles
Advertisement
ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ 1,063 ಪ್ರಕರಣಗಳು ದಾಖಲಾಗುವ ಮೂಲಕ ಪ್ರಕರಣಗಳು ಹೆಚ್ಚಾಗುತ್ತಿರುವ ದೇಶದ ಪ್ರಮುಖ ನಗರಗಳಲ್ಲಿ ಬೆಂಗಳೂರು ಒಂದಾಗಿದೆ. 4,736 ಪ್ರಕರಣಗಳ ಇತ್ಯರ್ಥಕ್ಕೆ ಬಾಕಿ ಇವೆ ಅನ್ನುವ ಎನ್‌ಸಿಆರ್‌ಬಿ ಅಂಕಿ-ಅಂಶಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದು, ತಜ್ಞರು ಪ್ರಮುಖ ಶಿಫಾರಸುಗಳನ್ನು ಮಾಡಿದರು.
ಟಾಟಾ ಇನ್ಸಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನ ಪ್ರಾಧ್ಯಾಪಕ ಡಾ. ಪಿ.ಎಂ. ನಾಯರ್ ಸೇರಿ ವಿವಿಧ ಕ್ಷೇತ್ರಗಳ ತಜ್ಞರು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದರು.