Advertisement

ಪ್ರಜ್ಞಾವಂತ ಪ್ರತಿನಿಧಿಗಳ ಆಯ್ಕೆ ಮಾಡಲು ಸಲಹೆ

06:07 PM May 28, 2022 | Team Udayavani |

ರಾಯಚೂರು: ಕರ್ನಾಟಕ ಯುವ ನೀತಿ-2021ರ ವಿಭಾಗ ಮಟ್ಟದ ಕಾರ್ಯಾಗಾರಕ್ಕೆ ಪ್ರತಿ ಜಿಲ್ಲೆಗಳಿಂದ 18 ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿದ್ದು, ಜಿಲ್ಲೆಯ ಪ್ರಜ್ಞಾವಂತರು ಹಾಗೂ ಅನುಭವವಿರುವ ಸರ್ಕಾರಿ ಅಧಿಕಾರಿಗಳು, ತಜ್ಞರು, ಯುವಜನರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಕಡ್ಡಯವಾಗಿ ಭಾಗವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ| ಕೆ.ಆರ್‌.ದುರುಗೇಶ ತಿಳಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಯುವ ನೀತಿ 2021ರ ಕರಡನ್ನು ಅಂತಿಮಗೊಳಿಸಲು ಅಭಿಪ್ರಾಯ ಸಂಗ್ರಹಕ್ಕಾಗಿ ಪ್ರಾದೇಶಿಕ ವಿಭಾಗ ಮಟ್ಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2022ರ ಮೇ 31ರಂದು ಕಲಬುರಗಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಯುವ ನೀತಿ ನಂತರ ಕಾಲಕಾಲಕ್ಕೆ ಅನುಗುಣವಾಗಿ ರಾಜ್ಯ ಯುವ ನೀತಿಯನ್ನು ಹೊಸದಾಗಿ ರೂಪಿಸುವ ಅವಶ್ಯಕತೆಯಿದ್ದು, ರಾಷ್ಟ್ರ ಮತ್ತು ರಾಜ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದಕ್ಕಾಗಿ ವಿಭಾಗ ಮಟ್ಟದ ಕಾರ್ಯಾಗಾರಕ್ಕೆ ಜಿಲ್ಲಾ ಪ್ರತಿನಿಧಿಗಳು ಭಾಗವಹಿಸುವ ಮೂಲಕ ಸಹಕಾರ ನೀಡಬೇಕು ಎಂದರು.

ಜಿಲ್ಲೆಯ 9 ಸರ್ಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಒಬ್ಬರು ಯುವಜನ ಸೇವೆಯ ತಜ್ಞರು ಮತ್ತು ಎನ್‌.ಎಸ್‌.ಎಸ್‌ ಮತ್ತು ಜಿಲ್ಲಾಧಿಕಾರಿಗಳಿಂದ ಆಯ್ಕೆಯಾದ ಒಬ್ಬ ತಜ್ಞರು ಭಾಗವಹಿಸಬೇಕು. ಅದರಲ್ಲಿ ನಾಲ್ಕು ಯುವ ಜನರು ಮತ್ತು ನಾಲ್ಕು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಕಡ್ಡಾಯವಾಗಿ ಇಬ್ಬರು ಮಹಿಳಾ ಸ್ವಯಂ ಸೇವಕರನ್ನು ನಿರಂತರ ಸೇವೆ ಸಲ್ಲಿಸಿ ಅನುಭವ ಹೊಂದಿದವರನ್ನು ಆಯ್ಕೆ ಮಾಡಲಾಗುವುದು. ಜಿಲ್ಲೆಯಿಂದ ಭಾಗವಹಿಸುವ ಆರು ಜನ ಸರ್ಕಾರಿ ಅಧಿಕಾರಿಗಳಿಗೆ ಪ್ರಯಾಣ ಭತ್ಯ, ದಿನಭತ್ಯ ಹಾಗೂ ವಸತಿ ವ್ಯವಸ್ಥೆಯ ವೆಚ್ಚವನ್ನು ಮಾತೃ ಇಲಾಖೆಯಿಂದ ಭರಿಸುತ್ತಿದ್ದು, ಅಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕಾರಿಯಾಗಬೇಕು ಎಂದರು.

ಖಡಿಪಿಐ ವೃಷಬೇಂದ್ರಯ್ಯ ಸ್ವಾಮಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹನುಮಂತ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ವೆಂಕಟಪ್ಪ, ಎಸ್‌.ಎಸ್‌.ಎಂ ಕಾಲೇಜಿನ ಪ್ರಾಚಾರ್ಯ ಡಾ| ಶ್ರೀನಿವಾಸ ರಾಯಚೂರುಕರ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಪ್ರಾಚಾರ್ಯ ಯಂಕಣ್ಣ ಸೇರಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next