Advertisement

ಅಂಗವಿಕಲರಿಗೆ ಪ್ರೋತ್ಸಾಹ ನೀಡಲು ಸಲಹೆ

12:16 PM Dec 31, 2017 | |

ಸಿಂದಗಿ: ಸರಕಾರ ಅಂಗವಿಕಲ ಮಕ್ಕಳನ್ನು ನಿರ್ಲಕ್ಷಿಸದೇ ಅವರ ಆರೋಗ್ಯ ಕಾಪಾಡುವ ಜೊತೆಗೆ ಅವರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಪಟ್ಟಣದ ಸಿ.ಎಂ. ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ರೆಡ್‌ಕ್ರಾಸ್‌ ಘಟಕದ ಪ್ರೋಗ್ರಾಂ ಆಫಿಸರ್‌, ಪ್ರಾಧ್ಯಾಪಕ ಬಿ.ಎನ್‌. ಪಾಟೀಲ ಇಬ್ರಾಹಿಂಪುರ
ಹೇಳಿದರು.

Advertisement

ಶನಿವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಸಿ.ಎಂ. ಮನಗೂಳಿ ಪದವಿ ಮಹಾವಿದ್ಯಾಲಯದ ಯುವ ರೇಡ್‌ ಕ್ರಾಸ್‌ ಘಟಕ, ಕರ್ನಾಟಕ ಅಂಗವಿಕಲರ ಐಕ್ಯಾತಾ ವೇದಿಕೆ, ಭಾರತೀಯ ರೇಡ್‌ಕ್ರಾಸ್‌ ತಾಲೂಕಾ ಶಾಖೆ ಇವರ
ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಅಂಗವಿಕಲರ ದಿನಾಚಾರಣೆ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರತಿಯೊಬ್ಬರಲ್ಲಿ ಸಾಮರ್ಥ್ಯವಿರುವಂತೆ ಅಂಗವಿಕಲ ಮಕ್ಕಳಲ್ಲಿಯೂ ಸಾಮರ್ಥ್ಯವಿದೆ. ಅದನ್ನು ಗುರುತಿಸಿ ಬೆಳಕಿಗೆ ತರಲು ನಾವೆಲ್ಲರು ಪ್ರಯತ್ನಿಸಬೇಕು. ಅಂಗವಿಕಲ ಮಕ್ಕಳ ಕಲ್ಯಾಣಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು
ಅನುಷ್ಠಾನಗೊಳಿಸಿದೆ. ಅಂಥ ಯೋಜನೆಗಳನ್ನು ಹೆಚ್ಚಿಗೆ ಪ್ರಚಾರ ಮಾಡಬೇಕು ಎಂದರು.

ಅಂಗವಿಕಲರು ಕೀಳರಿಮೆ ತಿಳಿಯುವುದು ಬೇಡ. ಜಗತ್ತಿನಲ್ಲಿ ಸಾಧಕರ ಸಾಲಿನಲ್ಲಿ ಸಾಕಷ್ಟು ಜನ ಅಂಗವಿಕಲರಿದ್ದಾರೆ. ನಮ್ಮ ತಾಲೂಕಿನ ರೆಡ್‌ ಕ್ರಾಸ್‌, ಯುವ ರೆಡ್‌ಕ್ರಾಸ್‌ ಅಂಗವಿಕಲರಿಗೆ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿವೆ.
ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್‌ಕ್ರಾಸ್‌ ತಾಲೂಕು ಶಾಖೆ ಸಭಾಪತಿ ಬಿ.ಎಂ. ಬಿರಾದಾರ ಮಾತನಾಡಿ, ತಾಯಿಯ ಗರ್ಭದಲ್ಲಿನ ಮಗು ಅಂಗವಿಕಲತೆಗೆ ನಿಜವಾದ ಕಾರಣವೇನೆಂದು ತಿಳಿಯಬೇಕು. ಅಪೌಷ್ಠಿಕತೆ
ಮತ್ತು ಸ್ವತ್ಛತೆಯಿರದೆ ಇರುವುದರಿಂದ ಹೆರಿಗೆಯ ಸಮಯದಲ್ಲಿ ಸಾಧನ ಸಲಕರಣೆ ಇಲ್ಲದಿರುವುದರಿಂದ ಮಕ್ಕಳು ಅಂಗವಿಕಲರಾಗಿ ಜನಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಎಲ್ಲರಿಗೂ ಅದರ ತಿಳಿವಳಿಕೆ ನಿಡುವುದರಿಂದ ಮಾತ್ರ ಅಂಗವಿಕಲ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಸಾಧ್ಯ. ಅಂಗವಿಕಲ ಮಕ್ಕಳಿಗೆ ಬರವ ಸರಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Advertisement

ಸಿ.ಎಂ. ಮನಗೂಳಿ ಮಹಾವಿದ್ಯಾಲಯದ ಗ್ರಂಥಪಾಲಕ ಸಿದ್ದಬಸವ ಕುಂಬಾರ, ಜಿಲ್ಲಾ ಪ್ಲೋರೋಸಿನ್‌ ಸಲಹೆಗಾರ ವಿಜಯಮಹಾಂತೇಶ ಹರಗಬಾಳ, ತಾಪಂ ವ್ಯವಸ್ಥಾಪಕ ಮುರುಗೇಶ ನಾರಾಯಣಕರ, ಕರ್ನಾಟಕ ಅಂಗವಿಕಲರ
ಐಕ್ಯಾತಾ ವೇದಿಕೆ ಅಧ್ಯಕ್ಷೆ ಸಬಿಯಾಬೇಗಂ ಮರ್ತೂರ, ಕಾರ್ಯದರ್ಶಿ ಗಂಗಾಧರ ಸಿ. ಮಾತನಾಡಿದರು. ತಾಪಂ ಎಂಆರ್‌ಬ್ಲೂ ಮುತ್ತುರಾಜ ಸಾತಿಹಾಳ ವೇದಿಕೆಯಲ್ಲಿದ್ದರು.

ಮಲ್ಲಪ್ಪ ಕರ್ನಾಳ, ಲಕ್ಷ್ಮೀ ರಾಠೊಡ, ವಿಠ್ಠಲ ಬಾಗೇವಾಡಿ, ಬೀರಪ್ಪ ರೇಬಿನಾಳ, ಸಂಗಪ್ಪ ಸುರಗಿಹಳ್ಳಿ, ಪರಮೇಶ್ವರ ಕೋರಿ, ಸುರೇಖಾ ಗುರವ, ವಿಜಯಕುಮಾರ ಭಜಂತ್ರಿ, ಎಂ.ಎನ್‌. ಕರ್ನಾಳ, ಸಂತೋಷ ಯಡ್ರಾಮಿ, ಪ್ರಕಾಶ
ಸುಂಕದ, ತಾಪಂ ಕಾರ್ಯಾಲಯದ ರಾಮಕೃಷ್ಣ ಹೆಬ್ಟಾಳ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಅಂಗವಿಕಲರು ಕಾರ್ಯಕ್ರದಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next